SHIVAMOGGA/ ಗೃಹಣ, ಅಮಾವಾಸ್ಯೆ ನಡುವೆ ಶಿವಮೊಗ್ಗದಲ್ಲಿಂದ ಎಲೆಕ್ಷನ್​ ಸೌಂಡ್! ಯಾರ್ಯಾರು ಸಲ್ಲಿಸಲಿದ್ದಾರೆ ನಾಮಪತ್ರ!? ಟ್ರಾಫಿಕ್​ ಜಾಮ್​ ಸಾಧ್ಯತೆ!

MALENADUTODAY.COM/ SHIVAMOGGA / KARNATAKA WEB NEWS  

SHIVAMOGGA POLICE

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿಂದು ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿ ನಡೆಯಲಿದೆ. ಇದಕ್ಕಾಗಿ ಹೆಚ್ಚುವರಿ ಭದ್ರತೆಯನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ. ಸೊರಬ, ಸಾಗರ, ತೀರ್ಥಹಳ್ಳಿ ಮತ್ತು ಶಿಕಾರಿಪುರದ ನಂತರ ಇವತ್ತು ಶಿವಮೊಗ್ಗ ನಗರ ಎಲೆಕ್ಷನ್​ ರಣರಂಗದಲ್ಲಿ ಅಬ್ಬರದ ಸಮರ ಕಹಳೆ ಮೊಳಗಲಿದೆ.

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

ಮೂರು ಪಕ್ಷಗಳಿಂದ ನಾಮಪತ್ರ ಸಲ್ಲಿಕೆ 

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ ಎಂದು ಗೊತ್ತಾಗುವಷ್ಟರಲ್ಲಿ ಶಿವಮೊಗ್ಗ ನಗರದ ಮತದಾರರೇ ಒಂದು ರೌಂಡ್ ಸುಸ್ತಾಗಿದ್ದರು. ಆದರೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಎಲ್ಲಾ ಪಕ್ಷದ ಅಭ್ಯರ್ಥಿಗಳು ಒಂದೆರಡು ಗಂಟೆಯ ಅಂತರದಲ್ಲಿ ನಾಮಪತ್ರ ಸಲ್ಲಿಸಲಿದ್ಧಾರೆ. 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ಕಾಂಗ್ರೆಸ್​ನಿಂದ ಹೆಚ್​ಸಿ ಯೋಗೇಶ್​ ನಾಮಪತ್ರ ಸಲ್ಲಿಕೆ 

ಬೆಳಗ್ಗೆ 11ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಮೆರವಣಿಗೆಯಲ್ಲಿ ಬಂದು ಚುನಾವಣಾಧಿಕಾರಿಗಳಿಗೆ ಹೆಚ್​ಸಿ ಯೋಗೇಶ್​  ನಾಮಪತ್ರ ಸಲ್ಲಿಸಲಿದ್ಧಾರೆ

ಈ ಸಂಬಂಧ ನಿನ್ನೆ ಮಾತನಾಡಿರುವ ಅವರು ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಗೋಪಿ ವೃತ್ತ, ಕಮಲಾ ನೆಹರು ಕಾಲೇಜು ರಸ್ತೆಯ ಮೂಲಕ ಪಾಲಿಕೆ ಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಮೆರವಣಿಗೆ  ತೆರಳಲಿದೆ ಎಂದಿದ್ದಾರೆ. 

ಜೆಡಿಎಸ್​ನಿಂದ ಆಯನೂರು ಮಂಜುನಾಥ್ ನಾಮಪತ್ರ 

ಇನ್ನೂ ಈಶ್ವರಪ್ಪನವರ ವಿರುದ್ಧ ತೊಡೆತಟ್ಟಿದ್ದ ಆಯನೂರು ಮಂಜುನಾಥ್ ಇದೀಗೆ ತೆನೆಹೊತ್ತಿದ್ದಾರೆ. ನಿನ್ನೆ  ಬುಧವಾರ ಅವರು ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ.

ಚಿತ್ರದುರ್ಗದ ಜೆಡಿಎಸ್ ಕಚೇರಿಯಲ್ಲಿ ಅವರು ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ  ಪಕ್ಷ ಸೇರಿರುವ ಆಯನೂರು ಮಂಜುನಾಥ್ ಇವತ್ತು ಬೆಳಗ್ಗೆ  ಹತ್ತು ಗಂಟೆಗೆ ನಾಮಪತ್ರ ಸಲ್ಲಿಕೆಗೆ ಹೊರಡಲಿದ್ಧಾರೆ. 

ಶಿವಮೊಗ್ಗದ  ಕೋಟೆ ರೋಡ್ ನಲ್ಲಿರುವ  ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಮೆರವಣಿಗೆ ಮಹಾನಗರ ಪಾಲಿಕೆಗೆ  ಬಂದು ನಾಮಪತ್ರ ಸಲ್ಲಿಸಲಿದ್ದಾರೆ 

Read /BREAKING NEWS / ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ (ಚೆನ್ನಿ) ಯಾರು ಗೊತ್ತಾ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಂಧನಕ್ಕೊಳಗಾಗಿದ್ರು!

ಬಿಜೆಪಿಯಿಂದ ಚೆನ್ನಬಸಪ್ಪ ನಾಮಪತ್ರ ಸಲ್ಲಿಕೆ 

ಇನ್ನೂ ನಿರೀಕ್ಷಿತ ಕುತೂಹಲವನ್ನು ಕೆರಳಿಸಿದ ಅಭ್ಯರ್ಥಿಯಾಗಿರುವ ಬಿಜೆಪಿಯ ಚನ್ನಬಸಪ್ಪರವರು ಕೂಡ ನಾಮಪತ್ರ ಸಲ್ಲಿಸಲಿದ್ದಾರೆ. ಅಭ್ಯರ್ಥಿಯಾಯ್ಕೆಯ ಮೊದಲೇ ಶಿವಮೊಗ್ಗ ಬಿಜೆಪಿ ನಾಮಪತ್ರ ಸಲ್ಲಿಕೆಯ ವಿವರಗಳನ್ನು ನೀಡಿತ್ತು. Read / Soraba /  ಸೊರಬ ಚುನಾವಣಾ ಕಣದಿಂದ ಹಿಂದೆ ಸರಿದ ನಮೋ ವೇದಿಕೆ ! ಕುಮಾರ್​ ಬಂಗಾರಪ್ಪ್ರರಿಗೆ  ತಪ್ಪಿತಾ ಕಂಟಕ!?

ಅದರಂತೆ,  ಇವತ್ತು  ಬೆಳಿಗ್ಗೆ 10.30 ಕ್ಕೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೆರವಣಿಗೆ ಮುಖಾಂತರ ಚನ್ನಬಸಪ್ಪ  ನಾಮಪತ್ರ ಸಲ್ಲಿಸಲ್ಲಿದ್ದಾರೆ.  

ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,  ಎಸ್,ಪಿ.ಎಮ್ ರಸ್ತೆ, ಗಾಂಧಿ ಬಜಾರ್ ಮುಖಾಂತರ ಎನ್.ಡಿ.ವಿ ಹಾಸ್ಟೆಲ್‌ ಅವರಣ ತಲುಪಿ ನಂತರ ಮಹಾನಗರ ಪಾಲಿಕೆಯ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ಧಾರೆ. 

MUST READ /

Read /BREAKING NEWS / ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ (ಚೆನ್ನಿ) ಯಾರು ಗೊತ್ತಾ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಂಧನಕ್ಕೊಳಗಾಗಿದ್ರು!

Read / Soraba /  ಸೊರಬ ಚುನಾವಣಾ ಕಣದಿಂದ ಹಿಂದೆ ಸರಿದ ನಮೋ ವೇದಿಕೆ ! ಕುಮಾರ್​ ಬಂಗಾರಪ್ಪ್ರರಿಗೆ  ತಪ್ಪಿತಾ ಕಂಟಕ!?

Read /BREAKING /  ಅಭ್ಯರ್ಥಿ ಕುತೂಹಲದ ನಡುವೆ ಶಿವಮೊಗ್ಗ ಕ್ಕೆ ಬಂದ ಬಿಎಸ್​ವೈ !   ಘೋಷಣೆಯಾಗುತ್ತಾ ಹೆಸರು!  ಹೆಲಿಪ್ಯಾಡ್​ಗೆ  ನೀತಿ ಸಂಹಿತೆಯ ಅಧಿಕಾರಿಗಳ  ಎಂಟ್ರಿ! 

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,  #Kannada_News,  #karnatakaassemblyelection2023,  #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadda,

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು