ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಎರಡು ಆಕ್ಸಿಡೆಂಟ್ಗಳು ಸಂಭವಿಸಿದೆ. ನಿನ್ನೆ ರಾತ್ರಿ ಒಂದು ಆಕ್ಸಿಡೆಂಟ್ ಆನಂದಪುರದ ಸಮೀಪ ಸಂಭವಿಸಿದೆ. ಇವತ್ತು ತ್ಯಾಗರ್ತಿ ಬಳಿಯಲ್ಲಿ ಇನ್ನೊಂದು ಆಕ್ಸಿಡೆಂಟ್ ಸಂಭವಿಸಿದೆ. ಎರಡು ಘಟನೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ತ್ಯಾಗರ್ತಿ ಬಳಿಯಲ್ಲಿ ಭೀಕರ ಅಪಘಾತ
ಸಾಗರ ತಾಲ್ಲುಕಿನ ತ್ಯಾಗರ್ತಿ ಬಳಿಯಲ್ಲಿ ಬರುವ ಹೊಸಂತೆ ಎಂಬಲ್ಲಿ ಇವತ್ತು ಮಧ್ಯಾಹ್ನ ಬೈಕ್ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಪರಿಣಾಮ ಚನ್ನಾಪುರದ ಪ್ರಮೋದ್ ಎಂಬ 25 ವರ್ಷದ ಯುವಕ ಸಾವನ್ನಪ್ಪಿದ್ಧಾರೆ. ತಮ್ಮ ಅಜ್ಜಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದ ಪ್ರಮೋದ್ ಗೌತಮಪುರದಿಂದ ತ್ಯಾಗರ್ತಿ ಕಡೆಗೆ ಬರುತ್ತಿದ್ದರು. ಈ ವೇಳೆ ಗೌತಮಪುರದ ಕಡೆಗೆ ಹೋಗುತ್ತಿದ್ದ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಪ್ರಮೋದ್ ಸಾವನ್ನಪ್ಪಿದ್ದಾರೆ.
ಆನಂದಪುರದ ಸಮೀಪ ನಿನ್ನೆ ರಾತ್ರಿ ಆಕ್ಸಿಡೆಂಟ್