SHIVAMOGGA | Jan 24, 2024 | ಶಿವಮೊಗ್ಗ ನಗರದ ಕೋಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇರುವ ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬನನ್ನ ಪೊಲೀಶರು ಬಂದಿಸಿದ್ದಾರೆ.
ಕೋಟೆ ಪೊಲೀಸ್ ಸ್ಟೇಷನ್
ಲಷ್ಕರ್ ಮೊಹಲ್ಲಾ ವಾಸಿ ಅನಿಸೂರ್ ಇಸ್ಲಾಂ, 42 ವರ್ಷ ರವರ ಚಿನ್ನ ಬೆಳ್ಳಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಪಶ್ಚಿಮ ಬಂಗಾಳದ ವಾಸಿಯಾದ ಅದಿತೋ ಮಾಜಿ ಎಂಬುವವನು ದಿನಾಂಕಃ 04-01-2024 ರಂದು ಸದರಿ ಅಂಗಡಿಯಲ್ಲಿ ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ. ಈ ಸಂಬಂಧ ದೂರು ಸಹ ದಾಖಲಾಗಿತ್ತು. ಪ್ರಕರಣದ ವಿಚಾರಣೆ ಆರಂಭಿಸಿದ ಪೊಲೀಸರು ಪಶ್ಚಿಮ ಬಂಗಾಳ ರಾಜ್ಯಕ್ಕೆ ತೆರಳಿ ಅಲ್ಲಿ ನ ಹೌರಾ ಜಿಲ್ಲೆಯ ಜೈಪುರ್ ಸ್ಟೇಷನ್ ಲಿಮಿಟ್ಸ್ ನ ಖಜಿರ್ದೋ ಗ್ರಾಮದ ನಿವಾಸಿ ಆದಿತೋ ಎಂಬಾತನನ್ನ ಕೊಲ್ಕೊತ್ತಾದಲ್ಲಿ ಬಂಧಿಸಿ ರಾಜ್ಯಕ್ಕೆ ಕರೆತಂದಿದೆ.
ಈತನಿಂದ ಕೊಲ್ಕತ್ತಾದಲ್ಲಿ ಅಂದಾಜು ಮೌಲ್ಯ 2,70,000/- ರೂಗಳ 45 ಗ್ರಾಂ ತೂಕದ ಬಂಗಾರದ ಆಭರಣ, ಹೈದರಾಬಾದ್ ಮತ್ತು ಸಿಕಂದರಬಾದ್ ನಲ್ಲಿ ಅಂದಾಜು ಮೌಲ್ಯ 5,75,000/- ರೂಗಳ ಒಟ್ಟು 85 ಗ್ರಾಂ ಬಂಗಾರ ಸೇರಿ ಒಟ್ಟು ಅಂದಾಜು ಮೌಲ್ಯ 8,45,000/- ರೂಗಳ 130 ಗ್ರಾಂ ತೂಕದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
