ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದಲ್ಲಿಯು ಆನೆಗಳು ಎಲ್ಲಂದರಲ್ಲಿ ಕಾಣಿಸಿಕೊಳ್ತಿವೆ. ಇವತ್ತಿನ ಸುದ್ದಿ ಏನಂದರೆ, ಸಕ್ರೆಬೈಲ್ ಆನೆ ಬಿಡಾರದಿಂದ ಮುಂದೆ, ಮಂಡಗದ್ದೆಯಿಂದ ಇನ್ನೂ ಹಿಂದೆ, ಅಪ್ ರೋಡ್ನಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದೆ.

ಸಕ್ರೆಬೈಲ್ ಆನೆ ಬಿಡಾರದ ಬಳಿ ಕಾಡಾನೆ
ಇದು ಶೆಟ್ಟಿಹಳ್ಳಿಯ ಆನೆಯೇ? ಅಥವಾ ತುಂಗಾ ಹೊಳೆ ದಾಟಿ ಬಂದೆ ಆನೆಯೇ ? ಎಂಬುದು ಗೊತ್ತಾಗಿಲ್ಲ. ಬೆಳಗ್ಗೆ ಈ ಬದಿಯಲ್ಲಿ ಹೊಗ್ತಿದ್ದ ರೂಟ್ ಬಸ್ಗೆ ಆನೆ ಎದುರಾಗಿದೆ. ಆನೆ ನೋಡುತ್ತಲೇ ಡ್ರೈವರ್ ಬಸ್ ಹಿಂದೆಯೇ ನಿಲ್ಲಿಸಿದ್ದಾರೆ. ಪ್ರಯಾಣಿಕರು ಆನೆಯನ್ನು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದು ಪೋಟೋ ಹಿಡ್ಕಂಡಿದ್ದಾರೆ.

ನಮಗೆ ಲಭ್ಯವಾದ ಮಾಹಿತಿ ಪ್ರಕಾರ, ಬೆಳಗ್ಗೆ 7:00 ಗಂಟೆ ಹೊತ್ತಿಗೆ ಆನೆ ಕಾಣಿಸಿಕೊಂಡಿದೆ. ಈ ಸಂಬಂಧ ಇನ್ನಷ್ಟು ಮಾಹಿತಿ ಅರಣ್ಯ ಇಲಾಖೆಯವರು ಕೊಡಬೇಕು.
View this post on Instagram
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!