SHIVAMOGGA | Jan 7, 2024 | ಅಪಾಘಾತ ಆದಾಗ, ಸಂತ್ರಸ್ತರು ದೂರು ನೀಡುವುದು ಸಹಜ ಆದರೆ ಭದ್ರಾವತಿಯಲ್ಲಿ ತಂದೆಯೊಬ್ಬರು ತನ್ನ ಮಗನ ವಿರುದ್ಧವೇ ಅಪಘಾತ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
READ : ವಿಶ್ವ ವಿಖ್ಯಾತ ಜೋಗ ಜಲಪಾತ ಆವರಣದಲ್ಲಿ ರೈನ್ ಡ್ಯಾನ್ಸ್ ಗೆ ಅವಕಾಶ?
ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್
ದಿನಾಂಕ 05.01.2024ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿಗೆ ಕರೆಮಾಡಿದ ನಿವಾಸಿಯೊಬ್ಬರು ತಮ್ಮ ಮಗ ಬೈಕ್ ತೆಗೆದುಕೊಂಡು ಹೋಗಿ ಅಪಘಾತ ಮಾಡಿಕೊಂಡು ಬಂದಿದ್ದಾನೆ ಎಂದು ದೂರಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳುವ ಹೊತ್ತಿಗೆ ಅಲ್ಲಿ ಅವರ ಮಗ ಇರಲಿಲ್ಲ. ಹೀಗಾಗಿ ಸ್ಟೇಷನ್ಗೆ ಬಂದು ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ.
