SHIVAMOGGA NEWS / Malenadu today/ Nov 26, 2023 | Malenadutoday.com
SHIVAMOGGA | ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹೊಸದೊಂದು ದಾಖಲೆಯನ್ನ ಬರೆಯುತ್ತಿದೆ. ನಿರಂತರ ಕಳ್ಳತನವಾಗುತ್ತಿದ್ದರೂ ಬಸ್ ನಿಲ್ದಾಣದ ಬಗ್ಗೆ ಪೊಲೀಸ್ ವ್ಯವಸ್ಥೆ ಹಾಗೂ ಕೆಎಸ್ಆರ್ಟಿಸಿ ಘಟಕ ಕ್ರಮ ಕೈಗೊಳ್ತಿಲ್ಲ.
ಇದರ ಪರಿಣಾಮವಾಗಿ ಶಿವಮೊಗ್ಗ ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ದಾಖಲಾಗಿದ್ದು, ಬರೋಬ್ಬರಿ 1.80 ಲಕ್ಷ ಮೌಲ್ಯದ ಚಿನ್ನಾಭರಣ ವನ್ನು ಕಳವು ಮಾಡಲಾಗಿದೆ
READ : Powercut| ನವೆಂಬರ್ 27 ರಂದು ಶಿವಮೊಗ್ಗ ಸಿಟಿಯ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!
ಕಳೆದ 22-11-2023 ರಂದು ಈ ಘಟನೆ ನಡೆದಿದೆ. ಭದ್ರಾವತಿಯ ನಿವಾಸಿ ಮಹಿಳೆಯೊಬ್ಬರು ಶಿವಮೊಗ್ಗದ ಕೀರ್ತಿನಗರ ದಲ್ಲಿರುವ ಸಂಬಂಧಿಕರ ಮನೆಗೆ ನಾಮಕರಣ ಕಾರ್ಯಕ್ರಮಕ್ಕೆ ಬಂದಿದ್ದಾರೆ. ವಾಪಸ್ ಭದ್ರಾವತಿಗೆ ಹೋಗಲು ಶಿವಮೊಗ್ಗ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಗೆ ಸಂಜೆ 05-45 ರ ಹೊತ್ತಿಗೆ ಬಂದಿದ್ದಾರೆ.
ಈ ಮಧ್ಯೆ ಶಿವಮೊಗ್ಗ-ಭದ್ರಾವತಿ ಬಸ್ಸುಗಳು ನಿಲುವ ಸ್ಟ್ಯಾಂಡ್ ನಲ್ಲಿ. ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ತಮ್ಮ ಬ್ಯಾಗ್ ತೆಗೆದು ಪರ್ಸ್ ಭದ್ರವಾಗಿದೆಯಾ ಎಂದು ನೋಡಿದ್ದಾರೆ. ಅಲ್ಲಿಯವರೆಗೂ ಇದ್ದ ಬಸ್ ಭದ್ರಾವತಿ ಬಸ್ ಹತ್ತಿ, ಭದ್ರಾವತಿಯಲ್ಲಿ ಇಳಿಯುವ ಹೊತ್ತಿಗೆ ನಾಪತ್ತೆಯಾಗಿತ್ತು.
READ : ಮಹಿಳೆಗೆ ಹೆದರಿಸಿ ಬೆದರಿಸಿದರಾ ಶಿವಮೊಗ್ಗದ ಆ ಪೊಲೀಸರು? ಸ್ಟೇಷನ್ನಲ್ಲಿ ಹೀಗೂ ನಡೆಯುತ್ತಾ??
ಬಸ್ನಿಂದ ಇಳಿದು ಆಟೋ ಚಾಲಕನಿಗೆ ಬಾಡಿಗೆ ಕೊಡಲು ಬ್ಯಾಗ್ ಓಪನ್ ಮಾಡಿದಾಗ ಪರ್ಸ್ ಕಳುವಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ
