SHIVAMOGGA NEWS / Malenadu today/ Nov 26, 2023 | Malenadutoday.com
BENGALURU | ಅಧಿಕಾರಿಗಳು, ರಾಜಕಾರಣಿಗಳ ಹೆಸರನ್ನ ಹೇಳಿಕೊಂಡು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತನ ವಿಚಾರಣೆ ವೇಳೇ ಬಿಜೆಪಿ ರಾಜ್ಯಾಧ್ಯಕ್ಷ (bjp state president) ಬಿ.ವೈ.ವಿಜಯೇಂದ್ರ ರವರು ತನಗೆ ಪರಿಚಯ ಎಂದು ಹೇಳಿ ಹಲವರಿ ವಂಚಿಸಿದ ವಿಚಾರ ಬೆಳಕಿಗೆ ಬಂದಿದೆ.
READ : ಕುಖ್ಯಾತವಾಗ್ತಿದೆಯಾ ಶಿವಮೊಗ್ಗ KSRTC ನಿಲ್ದಾಣ? ಮಹಿಳೆಯರೆ ಹುಷಾರ್! ಭದ್ರಾವತಿ ಬಸ್ನಲ್ಲಿ ನಡೀತು ಈ ಘಟನೆ
ಏನಿದು ಪ್ರಕರಣ?
ಪ್ರಕರಣ ಆರೋಪಿ ಯೂಸೂಫ್ ಎಂಬಾತ ವಿಜಯೇಂದ್ರರವರು ತನಗೆ ತುಂಬಾ ಪರಿಚಯ. ಬಿಜೆಪಿ ಹೈಕಮಾಂಡ್ನಲ್ಲಿಯು ಕೆಲವರು ತನಗೆ ಗೊತ್ತಿದೆ ಎಂದು ಹೇಳಿ ಉದ್ಯಮಿಗಳಿಗೆ ಪರಿಚಯಿಸಿಕೊಳ್ಳುತ್ತಿದ್ದನಂತೆ. ಅವರ ಪರಿಚಯದ ನಡುವೆ ಉದ್ಯಮಿಗಳಿಗೆ ಆಗಬೇಕಿರುವ ಕೆಲಸಗಳನ್ನ ತಿಳಿದುಕೊಂಡು, ರಾಜಕೀಯವಾಗಿ ಕೆಲಸ ಮಾಡಿಸಿಕೊಡುವುದಾಗಿ ವಂಚಿಸಿದ್ದಾನೆ ಎಂಬುದು ಆರೋಪ.
ಇದೇ ರೀತಿಯಲ್ಲಿ ಜಿಎಸ್ಟಿ ಕಚೇರಿ, ಬ್ಯಾಂಕ್ ಗಳಲ್ಲಿ ತನಗೆ ಅಧಿಕಾರಿಗಳು ಗೊತ್ತಿದೆ ಎಂದು ಅವರ ಕಚೇರಿಗೆ ಕರೆದುಕೊಂಡು ಹೋಗಿ ಆನಂತರ ಉದ್ಯಮಿಗಳನ್ನ ವಂಚಿಸುತ್ತಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ.
