ವಿಜಯನಗರ ಜಿಲ್ಲೆಯ ಹಂಪಿಯ ಕೊಟ್ಟೂರುಸ್ವಾಮಿ ಮಹಾಸಂಸ್ಥಾನದಲ್ಲಿ ರಫಿ ರಿಪ್ಪನ್​ ಪೇಟೆಯವರಿಗೆ ಪ್ರಶಸ್ತಿ!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA NEWS / ONLINE / Malenadu today/ Nov 21, 2023 NEWS KANNADA

Shivamogga| Malnenadutoday.com |  ರಿಪ್ಪನ್ ಪೇಟೆ : ವಿಜಯನಗರ ಜಿಲ್ಲೆಯ ಹಂಪಿಯ ಕೊಟ್ಟೂರುಸ್ವಾಮಿ ಮಹಾಸಂಸ್ಥಾನ ಮಠದಲ್ಲಿ “ಸುವರ್ಣ ಕರ್ನಾಟಕ” ಸಂಭ್ರಮದ ಸವಿ ನೆನಪಿಗಾಗಿ ಆಯೋಜಿಸಿದ್ದ ಅಖಿಲ ಭಾರತ 3ನೇ ಸಾಹಿತ್ಯ ಸಮ್ಮೇಳನದಲ್ಲಿ ನಾಡು ನುಡಿ ಸೇವೆಗಾಗಿ ರಿಪ್ಪನ್ ಪೇಟೆಯ ಯುವ ಸಾಹಿತಿ ಹಾಗೂ ಯುವ ಪತ್ರಕರ್ತ,ಸಮಾಜವಾದಿ ಚಿಂತಕ ರಫಿ ರಿಪ್ಪನ್ ಪೇಟೆ ಇವರಿಗೆ ರಾಜ್ಯಮಟ್ಟದ “ಗುರುಕುಲ ನಾಡರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

READ : ಮೆಸ್ಕಾಂ ಪ್ರಕಟಣೆ! ಶಿವಮೊಗ್ಗ ನಗರದ 25 ಕ್ಕೂ ಹೆಚ್ಚು ಪ್ರದೇಶದಲ್ಲಿ ನಾಳೆ ವಿದ್ಯುತ್ ವ್ಯತ್ಯಯ!

ಸಮ್ಮೇಳನ ದಿವ್ಯ ಸಾನಿಧ್ಯವನ್ನು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ವಹಿಸಿಕೊಂಡಿದ್ದರು. ಅಭೂತಪೂರ್ವ ಸಾಹಿತ್ಯ ಸಮ್ಮೇಳನದಲ್ಲಿ ಈಗಾಗಲೆ ರಾಜ್ಯ ಮಟ್ಟದ ಸಾಹಿತ್ಯ ಸಿರಿ, ಗುರುಕುಲ ಶಿರೋಮಣಿ, ಕಲಾ ಶಿರೋಮಣಿ ಎಂಬ ಮೂರು ಪ್ರಶಸ್ತಿಯನ್ನು ಪಡೆದಂತಹ ಅತ್ಯುತ್ತಮ ಬರಹಗಾರ ರಫಿ ರಿಪ್ಪನ್ ಪೇಟೆ ರವರಿಗೆ ಹಂಪಿಯಲ್ಲಿ ನಡೆದ ಅಖಿಲ ಭಾರತ 3ನೇ ಸಾಹಿತ್ಯ ಸಮ್ಮೇಳನದಲ್ಲಿ ನಾಡು ನುಡಿ ಸೇವೆಗಾಗಿ ಇವರ ಅನುಪಮ ಸೇವೆಯನ್ನು ಗುರುತಿಸಿ “ಗುರುಕುಲ ನಾಡರತ್ನ” ಎಂಬ ಬಿರುದಿನೊಂದಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಹರಪನಹಳ್ಳಿ ತಾಲೂಕಿನ ಶ್ರೀ ಬಾಲ ಲೀಲಾ ಮಹಾಂತೇಶ ಕರಸ್ಥಳ ಸಂಜಾತ ಶ್ರೀ ಮಾನಪ್ಪಜ್ಜನವರು ನಂಬಿಗಿ ಮಠ ಹಾಗೂ ಮಾತಂಗ ಪರ್ವತ ಹಂಪಿ ಪೂಜ್ಯರಾದ ಶ್ರೀ ಶ್ರೀ ಪೂರ್ಣಾನಂದ ಭಾರತಿ, ಶ್ರೀ ಕೃಷ್ನದೇವರಾಯ ವಿವಿ ಯ ಪ್ರಸರಾಂಗ ನಿರ್ದೇಶಕ ಡಾ. ಬಿ ಜಿ‌ ಕನಕೇಶ್ ಮೂರ್ತಿ,ದಯಾನಂದ್ ಕಿನ್ನಾಳ್ , ರಾಜ್ಯಾಧ್ಯಕ್ಷ ಲಕ್ಷ್ಮಿ‌ನಾರಾಯಣ್ ,ಕಾರ್ಯಾಧ್ಯಕ್ಷ ಡಾ ಶಿವರಾಜ್ ಹಾಗೂ ಇನ್ನಿತರರಿದ್ದರು.


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor