ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 23 2025 : ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಪ್ರಬಲ ಪ್ರಭಾವದಿಂದಾಗಿ ಚಿನ್ನದ ಬೆಲೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂಗೆ ₹2,200 ಏರಿಕೆಯಾಗಿದೆ. ಸದ್ಯದ ರೇಟು 10 ಗ್ರಾಮ್ ಚಿನ್ನಕ್ಕೆ ₹1,16,200ರಷ್ಟಿದೆ. ಅಲ್ಲದೆ ಚಿನ್ನದ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ದೇಶೀಯ ಮಾರುಕಟ್ಟೆಯಲ್ಲಿ ಈವರೆಗೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹37,250 ಏರಿಕೆಯಾಗಿದ್ದು, ಶೇಕಡ 47.18ರಷ್ಟು ಹೆಚ್ಚಳ ಕಂಡಿದೆ. ಒಂದಎ ದಿನಕ್ಕೆ ಚಿನ್ನದ ಬೆಲೆ ₹2,200 ಹೆಚ್ಚಳವಾಗಿ ₹1,16,200 ರ ದಾಖಲೆ ಮಟ್ಟಕ್ಕೆ ತಲುಪಿದೆ.ಇನ್ನೂ ಬೆಳ್ಳಿಯ ಬೆಲೆಯಲ್ಲಿಯು ಸಹ ಏರಿಕೆಯಾಗಿದೆ, ದಸರಾ ಹೊತ್ತಿಗೆ ಬಂಗಾರ ಬಲುಬಾಋ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
