ರಾಗಿಗುಡ್ಡದಲ್ಲಿ ಬಿಜೆಪಿ ನಿಯೋಗ! ಘಟನೆ ಕಾರಣ ಹುಡುಕಿದ ನಾಯಕರು ಮಾಡಿದ ಆರೋಪಗಳೇನು?

KARNATAKA NEWS/ ONLINE / Malenadu today/ Oct 5, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡ ಶಾಂತವಾಗಿದೆ. ಈ ನಡುವೆ ರಾಜ್ಯ ಬಿಜೆಪಿ ನಿಯೋಗ ಘಟನಾ ಸ್ಥಳಕ್ಕೆ ಭೇಟಿಕೊಟ್ಟಿದೆ. ಸಂತ್ರಸ್ತರ ಸಮಸ್ಯೆ ಹಾಗೂ ದೂರುಗಳನ್ನ ಆಲಿಸಿದೆ. ಈ ವೇಳೆ  ಈದ್ ಮಿಲಾದ್ ಮರದಣಿಗೆ ಹಿನ್ನೆಲೆಯಲ್ಲಿ ಹಿಂದೂಗಳ ಮನೆ ಮೇಲೆ ದಾಳಿ ನಡೆದಿರುವುದು ಪೂರ್ವ ನಿಯೋಜಿತ ಕೃತ್ಯ ಬಿಜೆಪಿ ರಾಜ್ಯಾಧ್ಯಕ್ಷ ನವೀನ್‌ ಕುಮಾರ್ ಕಟೀಲು ಹೇಳಿದ್ದಾರೆ.

ಘಟನಾ ಸ್ಥಳದಲ್ಲಿ ಕಲ್ಲು ತೂರಿದ ಪರಿಣಾಮವಾಗಿ ಹಾನಿಗೊಳಗಾದ ಮನೆಗಳಿಗೆ ಬಿಜೆಪಿ ಮುಖಂಡರು ಭೇಟಿ ನೀಡಿದರು. ಈ ವೇಳೆ ಅಲ್ಲಿದ್ದವರು ನಡೆದ ಘಟನೆಯನ್ನು ವಿವರಿಸಿದರಷ್ಟೆ ಅಲ್ಲದೆ, ಏನಾಗುತ್ತಿದೆ ರಾಗಿಗುಡ್ಡದಲ್ಲಿ ಎಂದು ವಿವರಿಸಿದರು. 

ಸಂತ್ರಸ್ತರ ದೂರುಗಳನ್ನು ಆಲಿಸಿದ ಬಿಜೆಪಿ ಮುಖಂಡರು ಬಳಿಕ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ನಳಿನ್ ಕುಮಾರ್ ಕಟೀಲ್​ ಇಡೀ ಪ್ರಕರಣದ ನ್ಯಾಯಾಂಗ ತನಿಖೆ ಯಾಗಬೇಕು ಎಂದು ಆಗ್ರಹಿಸಿದ್ರು. 

 

ರಾಗಿಗುಡ್ಡದ ಘಟನೆಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವೈಫಲ್ಯವೇ ಪ್ರಮುಖ ಕಾರಣವೆಂದ ಅವರು,  ಭಾವನೆ ಕೆರಳಿಸುವ ಕಟೌಟ್‌ಗಳಿಂದಾಗಿ ಈ ಘಟನೆ ನಡೆದಿದೆ ಎಂದರು.  ಟಿಪ್ಪು ಕಾಲಡಿಯಲ್ಲಿ ಹಿಂದೂಗಳಿರುವ ಕಟೌಟ್, ಅಖಂಡ ಭಾರತದ ಚಿತ್ರದಲ್ಲಿ  ಔರಂಗಜೇಬ್, ದೊಡ್ಡ ಖಡ್ಗ ಪ್ರದರ್ಶನಕ್ಕೆ  ಪೊಲೀಸರು ಏಕೆ ಅವಕಾಶ ನೀಡಿದರು ಎಂದು ಪ್ರಶ್ನಿಸಿದ್ದಾರೆ. 

ಶಿವಮೊಗ್ಗದಲ್ಲಿ ಗಣಪತಿ ಉತ್ಸವ ಶಾಂತಿಯುತವಾಗಿ ನಡೆದಿದೆ. ರಾಗಿಗುಡ್ಡದಲ್ಲೂ ಗಣಪತಿ ಉತ್ಸವ ನಡೆದಿದ್ದು, ಇದರಲ್ಲಿ ಭಾಗವಹಿಸಿ ದವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೇವಲ ಹಿಂದೂಗಳ ಮನೆಗಳನ್ನು  ಹುಡುಕಿ ಕಲ್ಲು ತೂರಲಾಗಿದೆ. ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದರು.

ಪೊಲೀಸರ ಎದುರೇ ಕಲ್ಲುತೂರಾಟ ನಡೆದಿದೆ. ಎಸ್‌ಪಿ ಇದ್ದರೂ ಸಹ ಪೊಲೀಸರಿಗೆ ರಕ್ಷಣೆ ಇಲ್ಲದ ಮೇಲೆ, ಸಾರ್ವಜನಿಕರ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದ ಅವರು, ಹಿಂದೂಗಳ ಮೇಲಿನ ಹಲ್ಲೆಯನ್ನು ಪರಸ್ಪರ ಎರಡು ಕೋಮುಗಳ ನಡುವಿನ ಹಲ್ಲೆ ಎಂದು ಬಿಂಬಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಶಿವಮೊಗ್ಗಕ್ಕೆ ಬಂದ ನಂತರ ಅವರ ಸೂಚನೆ ಮೇರೆಗೆ ಅಮಾಯಕ ಹಿಂದೂಗಳ ಮೇಲೆ ಕೇಸ್ ಹಾಕಿದ್ದಾರೆ. ಕಲ್ಲಿನಿಂದ ಹೊಡೆತ ತಿಂದು ಚಿಕಿತ್ಸೆ ಪಡೆಯುತ್ತಿರುವವರ ವಿರುದ್ದವೂ ಕೇಸ್ ಹಾಕಲಾಗಿದೆ. ಉಗ್ರವಾದಿಗಳ ಪರವಾದ ಹಾಗೂ ಮಹಿಳೆಯರ ವಿರೋಧಿ ಸರ್ಕಾರ ಇದಾಗಿದೆ ಎಂದು ಟೀಕಿಸಿದರು.

ಮೊದಲ ಬಾರಿ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾದಾಗ 24 ಹಿಂದೂ ಗಳ ಹತ್ಯೆಯಾಗಿತ್ತು . ಆಗ ಟಿಪ್ಪುವನ್ನು ಹೀರೋ ಆಗಿ ಬಿಂಬಿಸಿದ್ದ ಸರ್ಕಾರ ಈಗ 2ನೇ ಅವಧಿಗೆ ಔರಂಗಜೇಬನನ್ನು ಬಿಂಬಿಸುತ್ತಿದೆ. ಇವರಿಗೆ ಹಿಂದುಗಳನ್ನು ವಿರೋಧಿಸುವುದೇ ಕೆಲಸ ಎಂದು ಆರೋಪಿಸಿದ್ದಾರೆ.  


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ


 

Leave a Comment