ವರ್ಕ್​​ ಫ್ರಂ ಹೋಂ ಜಾಬ್​​ : ಮೆಸೇಜ್​ ನಂಬಿ ಮಹಿಳೆ ಕಳೆದುಕೊಂಡ ಹಣವೆಷ್ಟು ಗೊತ್ತಾ,,?

Cyber crime : ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳಿಗೆ ಮತ್ತೊಂದು ನಿದರ್ಶನ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ‘ವರ್ಕ್ ಫ್ರಂ ಹೋಮ್’ ಜಾಬ್ ಆಮಿಷಕ್ಕೆ ಒಳಗಾದ ಮಹಿಳೆಯೊಬ್ಬರು ಸೈಬರ್ ವಂಚಕರಿಂದ ಬರೋಬ್ಬರಿ ₹19,64,391 ಕಳೆದುಕೊಂಡಿದ್ದಾರೆ.

ಶಿವಮೊಗ್ಗದ ಮಹಿಳೆಯೊಬ್ಬರಿಗೆ ಟೆಲಿಗ್ರಾಮ್‌ನಲ್ಲಿ ಸಂದೇಶವೊಂದು ಬಂದಿತ್ತು. ಇದರಲ್ಲಿ, ಮನೆಯಿಂದಲೇ ಕೆಲಸ ಮಾಡುವ ‘ವರ್ಕ್ ಫ್ರಂ ಹೋಮ್’ ಉದ್ಯೋಗದ ಬಗ್ಗೆ ಮಾಹಿತಿ ಇತ್ತು. ವಿವಿಧ ‘ಟಾಸ್ಕ್‌’ಗಳನ್ನು ಪೂರ್ಣಗೊಳಿಸಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ವಂಚಕರು ನಂಬಿಸಿದ್ದರು.

ಇದನ್ನು ನಂಬಿದ ಮಹಿಳೆ, ಹಂತ ಹಂತವಾಗಿ ಸುಮಾರು ₹19.64 ಲಕ್ಷ ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಿದ್ದಾರೆ. ನಂತರ, ತಮ್ಮ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ವಂಚಕರು ‘ಗೋಲ್ಡ್ ಸೂಟ್ ಅಮೌಂಟ್’, ‘ಸೆಕ್ಯೂರಿಟಿ ಡೆಪಾಸಿಟ್’, ‘ಟಿಡಿಎಸ್ ವೆರಿಫಿಕೇಷನ್’ ಹೀಗೆ ಹಲವು ಕಾರಣಗಳನ್ನು ನೀಡಿ, ಮತ್ತಷ್ಟು ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಅನುಮಾನಗೊಂಡ ಮಹಿಳೆ, ತಾವು ವಂಚನೆಗೆ ಒಳಗಾಗಿರುವುದನ್ನು ಅರಿತು, ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Cyber crime

Leave a Comment