soldiers death :  ಆಪರೇಷನ್​ ಸಿಂಧೂರ್​ನಲ್ಲಿ ಅಗ್ನಿವೀರ್​ ಸೈನಿಕ ಸಾವು

ಹಂಚಿಕೊಳ್ಳಿ
WhatsApp Facebook X Telegram
soldiers death
soldiers death ಗುಂಡಿನ ದಾಳಿಯಲ್ಲಿ ಸೈನಿಕ ಸಾವು

soldiers death : ಭಾರತ ಹಾಗು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆ ನಮ್ಮ ನಮ್ಮ ದೇಶದ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪಾಕಿಸ್ತಾನದ ಯುದ್ದ ವಿಮಾನಗಳನ್ನು ಹೊಡೆದುರುಳಿಸುತ್ತಿದ್ದಾರೆ. ಇದರ ನಡುವೆ ಗುರುವಾರ ರಾತ್ರಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಈ ದಾಳಿಯಲ್ಲಿ ಅಗ್ನಿವೀರ್ ಸೈನಿಕರಾದ ಮುರುಳಿ ನಾಯಕ್​ (23) ಸಾವನ್ನಪ್ಪಿದ್ದಾರೆ. 

ಮುರುಳಿ ನಾಯಕ್​ರವರ ಕುಟುಂಬ ಮೂಲತಃ ಶ್ರೀ ಸತ್ಯಸಾಯಿ ಜಿಲ್ಲೆಯವರಾಗಿದ್ದರೂ, ಪಸ್ತುತ ಅವರ ಕುಟುಂಬ ಮುಂಬೈನ ಘಾಟ್ಕೋಪರ್ ಪೂರ್ವ ಪ್ರದೇಶದ ಕಾಮರಾಜ್ ನಗರದ ಚಿತ್ರಾ ಡೈರಿಯ ಬಳಿ ವಾಸಿಸುತ್ತಿತ್ತು. ಅವರ ತಂದೆ ಶ್ರೀರಾಮ್ ನಾಯಕ್ ಕಾರ್ಮಿಕರಾಗಿದ್ದರು ಮತ್ತು ಅವರ ತಾಯಿ ಜ್ಯೋತಿ ಗೃಹಿಣಿಯಾಗಿದ್ದರು.

soldiers death : 2022 ರಲ್ಲಿ ಸೇನೆಗೆ ಸೇರಿದ್ದ ಮುರುಳಿ ನಾಯಕ್​

ಅವಿವಾಹಿತರಾಗಿದ್ದ ಮುರುಳಿ ನಾಯಕ್​  2022 ರಲ್ಲಿ ಅಗ್ನಿವೀರರಾಗಿ ಸೇನೆಗೆ ಸೇರಿದ್ದರು. ಸೇನೆಗೆ ಸೇರಿದ ಮೊದಲು ಅವರನ್ನು ನಾಸಿಕ್ ಜಿಲ್ಲೆಯ ದಿಯೋಲಾಲಿಯಲ್ಲಿ ನೇಮಕ ಮಾಡಿಕೊಳ್ಳಲಾಯಿತು. ಮತ್ತು ತರಬೇತಿ ಮುಗಿದ ಬಳಿಕ ಅವರನ್ನು ಪಂಜಾಬ್ ಮತ್ತು ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾಯಿತು. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದ ನಂತರ ಅವರನ್ನು ಕೆಲವು ದಿನಗಳ ಹಿಂದೆ ಎಲ್‌ಒಸಿಯಲ್ಲಿ ನಿಯೋಜಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಮುರುಳಿ ನಾಯಕ್​ ಸಾವಿನ ಹಿನ್ನಲೆ ಅನೇಕ ರಾಜಕಾರಣಿಗಳು ಅವರ ಮನೆಗೆ ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳಿ ಸೂಕ್ತ ಪರಿಹಾರ ಒದಗಿಸುವುದಾಗಿ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor