car accident :  ಚಾಲಕನ ನಿಯಂತ್ರಣ ತಪ್ಪಿ ಮನೆ ಅಂಗಳಕ್ಕೆ ಪಲ್ಟಿಯಾದ ಕಾರು

ಹಂಚಿಕೊಳ್ಳಿ
WhatsApp Facebook X Telegram
car accident
car accident ಪಲ್ಟಿಯಾದ ಕಾರು

car accident :  ಚಾಲಕನ ನಿಯಂತ್ರಣ ತಪ್ಪಿ ಮನೆ ಅಂಗಳಕ್ಕೆ ಪಲ್ಟಿಯಾದ ಕಾರು

ಶಿವಮೊಗ್ಗ | ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದಾಟಿ ಪಕ್ಕದ ಮನೆ ಅಂಗಳಕ್ಕೆ ಬಿದ್ದಿರುವ ಘಟನೆ ಹೊಸನಗರ ತಾಲೂಕಿನ ರಾಣೆಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಜಯನಗರ ಸಮೀಪ ನಡೆದಿದೆ.

ಗೋವಾದಿಂದ ಬಂದ ಕಾರು ಒಮ್ಮೆಲೆ ಜಯನಗರ ಶರಾವತಿ ನದಿ ಕ್ರಾಸ್‌ನಲ್ಲಿ ನಿಯಂತ್ರಣ ತಪ್ಪಿದೆ. ಇದರ ಪರಿಣಾಮ ರಸ್ತೆ ದಾಟಿ ಮರಕ್ಕೆ ತಾಗಿ ನಂತರ ಪಕ್ಕದಲ್ಲಿದ್ದ ಮನೆ ಅಂಗಳಕ್ಕೆ ಪಲ್ಟಿ ಹೊಡೆದು ಬಿದ್ದಿದೆ. ಇದರಿಂದಾಗಿ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್​ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ . ಗಾಯಾಳುಗಳನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor