ripponpet news today | ಬೈಕ್​ನಲ್ಲಿ ಹೋಗ್ತಿದ್ದಾಗ ಸಂಭವಿಸಿತು ದುರಂತ! 22 ವರ್ಷದ ಯುವಕನ ಅಕಾಲ ಮರಣ!

Malenadu Today

ripponpet news today / ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಸಮೀಪ ಕೆರೆ ಏರಿಗೆ ಅಡ್ಡ ಕಟ್ಟಿರುವ ತಡೆಗೋಡೆಗೆ ಬೈಕ್‌ ಡಿಕ್ಕಿಯಾದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ್ದಾನೆ.ಘಟನೆಯಲ್ಲಿ ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ಅರಸಾಳು ಕೆರೆ ಏರಿ ಮೇಲೆ ಘಟನೆ ಸಂಭವಿಸಿದೆ. 

ರಿಪ್ಪನ್​ಪೇಟೆಗೆ ಹೋಗುವಾಗ ಘಟನೆ

ಇಲ್ಲಿನ ನಿವಾಸಿ ಅನೂಪ್‌ ಎಂಬ 22 ವರುಷದ ಯುವಕ ಮೃತಪಟ್ಟಿದ್ದು, ಆತನ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.  ಮೆಡಿಕಲ್‌ ರೆಪ್‌ ಆಗಿದ್ದ ಅನೂಪ್‌  ಹಾಗೂ ಇನ್ನೊಬ್ಬಾತ ಬೈಕ್​ನಲ್ಲಿ ರಿಪ್ಪನ್‌ಪೇಟೆಗೆ ಹೊರಟಿದ್ರು. ಈ ವೇಳೆ ಕೆರೆ ಏರಿ ಮೇಲೆ ಬೈಕ್​ ಕಂಟ್ರೋಲ್​ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿದೆ. ಇನ್ನೂ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

- Advertisement -
Share This Article