ಹನುಮಾನ್‌ ಪಾತ್ರದಾರಿ ರಿಷಬ್ ಶೆಟ್ಟಿ ವಿರುದ್ದ ಕೇಸ್

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 11, 2025 ‌

ಹನುಮಾನ್‌ ಚಿತ್ರದ ಮುಂದುವರೆದ  ಭಾಗವಾದ ಜೈ ಹನುಮಾನ್‌ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದರ ನಡುವೆ ಆ ಚಿತ್ರದಲ್ಲಿ ಹನುಮಂತನ ಮುಖದ ಬದಲು ರಿಷಬ್‌ ಶೆಟ್ಟಿಯ ಮುಖವನ್ನು ತೋರಿಸಿದ್ದು, ಹಿಂದೂಗಳ ಭಾವನೆಗೆ ದಕ್ಕೆ ತಂದಿದೆ ಎಂದು ಇದರ ವಿರುದ್ದ ಕೆಲವರು ಕೇಸ್‌ ದಾಖಲಿಸಿದ್ದಾರೆ.

ಕಾಂತಾರ ಸಿನಿಮಾದ ಮೂಲಕವಿಶ್ವಾದಾದ್ಯಂತ ಜನಮನ್ನಣೆ ಗಳಿಸಿದ್ದ ರಿಷಬ್‌ ಶೆಟ್ಟಿ ಇದೀಗ ತೆಲುಗಿನ ನಿರ್ದೇಶಕ ಪ್ರಶಾಂತ್ ವರ್ಮ ನಿರ್ದೇಶನದ ಜೈ ಹನುಮಾನ್‌ ಎಂಬ ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ  ನಟಿಸುತ್ತಿದ್ದಾರೆ. ಕಳೆದ ದೀಪಾವಳಿಯಂದು ಚಿತ್ರತಂಡ ರಾಮನ ವಿಗ್ರಹವನ್ನು ಹಿಡಿದಿರುವ  ಹನುಮಂತನ ಪೋಷ್ಟರ್‌ ಒಂದನ್ನು ರಿಲೀಸ್ ಮಾಡಿತ್ತು. ಆ ಪೋಷ್ಟರ್‌ನಲ್ಲಿ ಹನುಮಂತನ ಮುಖದ ಬದಲು ರಿಷಬ್‌ ಶೆಟ್ಟಿಯ ಮುಖವನ್ನು ತೋರಿಸಲಾಗಿತ್ತು.ಈ  ಪೋಸ್ಟರ್‌ರನ್ನು ನೋಡಿದ ಹಲವು ಪ್ರೇಕ್ಷಕರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ಪೋಷ್ಟರ್‌ನಲ್ಲಿ ರಿಷಬ್‌ ಶೆಟ್ಟಿಯ ಮುಖ ತೋರಿಸಿದ್ದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದರ ನಡುವೆ . ನ್ಯಾಯವಾದಿ ಮಮಿಡಾಳ ತಿರುಮಲ ರಾವ್ ಎಂಬುವವರು  ಮೈತ್ರಿ ಮೂವೀ ಮೇಕರ್ಸ್’ನ ನವೀನ್ ಎರ್ನೇನಿ, ಯಲಮಂಚಿಲಿ ರವಿಶಂಕರ್, ರಿಷಬ್ ಶೆಟ್ಟಿ, ನಿರ್ದೇಶಕ ಪ್ರಶಾಂತ್ ವರ್ಮ ಮೇಲೆ ನಾಂಪಲ್ಲಿ ಕ್ರಿಮಿನಲ್ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದಾರೆ. ಹನುಮಂತನ ಮುಖದ ಬದಲು ಹೀರೋ ರಿಷಬ್ ಶೆಟ್ಟಿ ಮುಖ ತೋರಿಸಿರೋದನ್ನ ಕೆಲವರು ತಪ್ಪು ಅಂತಿದ್ದಾರೆ. ಮುಂದಿನ ಪೀಳಿಗೆಗೆ ಹನುಮಂತ ಯಾರು ಎಂದು ಗೊತ್ತಾಗುವುದಿಲ್ಲ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಅಂತ ಕೇಸ್ ಹಾಕಿದ್ದೇನೆಂದು ವಕೀಲರು ತಿಳಿಸಿದ್ದಾರೆ 

 

SUMMARY | some people have filed a case against Rishab Shetty’s face for hurting the sentiments of Hindus by showing Rishab Shetty’s face instead of Lord Hanuman’s face in the film.


KEYWORDS | Rishab Shetty, Lord Hanuman, movie,

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor