ಶಿವಮೊಗ್ಗದಿಂದ ಧಮಸ್ಥಳಕ್ಕೆ ಹೋಗುತ್ತಿದ್ದಾಗ ಆಘಾತ | ಘಾಟಿಯ ಕಂದಕಕ್ಕೆ ಬಿದ್ದ ಕಾರು

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗದಿಂದ ಧಮಸ್ಥಳಕ್ಕೆ ಹೋಗುತ್ತಿದ್ದಾಗ ಆಘಾತ | ಘಾಟಿಯ ಕಂದಕಕ್ಕೆ ಬಿದ್ದ ಕಾರು

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 28, 2025 ‌‌ ‌‌

ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರೊಂದು ಚಾಲಕನ ಕಂಟ್ರೋಲ್‌ ತಪ್ಪಿ ನಿಯಂತ್ರಣ ಕಳೆದುಕೊಂಡು ಸುಮಾರು 50 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಕಾರಿನಲ್ಲಿದ್ದವರು ಬಚಾವ್‌ ಆಗಿದ್ದಾರೆ, ಆದರೆ 2 ವರುಷ ಮಗುವಿಗೆ ಹೆಚ್ಚು ಪೆಟ್ಟಾಗಿದ್ದು, ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಾರ್ಮಾಡಿ ಘಾಟಿಯಲ್ಲಿ ಘಟನೆ 

ಚಿಕ್ಕಮಗಳೂರು ಜಿಲ್ಲೆ ಚಾರ್ಮಾಡಿ ಘಾಟಿಯಲ್ಲಿ ಈ ಘಟನೆ ನಿನ್ನೆ ಸಂಭವಿಸಿದೆ. ಮಲೆಮಾರುತ ಸಮೀಪದಲ್ಲಿ ಘಟನೆ ಸಂಭವಿಸಿದೆ. ಶಿವಮೊಗ್ಗದ (Shivamogga) ನಿವಾಸಿಗಳು ಧರ್ಮಸ್ಥಳಕ್ಕೆ ಹೊರಟಿದ್ದರು. ಮೂಡಿಗೆರೆ ಮೂಲಕ ಮಲಯ ಮಾರುತ ಸಮೀಪ ಸಾಗುತ್ತಿದ್ದ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ಘಾಟಿಯ ಕಂದಕಕ್ಕೆ ಉರುಳಿದೆ. ಘಟನೆಯಲ್ಲಿ ಕಾರಿನಲ್ಲಿದ್ದ  ಶಂಕರ್, ಸೀತಮ್ಮ, ಭಾನುಪ್ರಿಯಾ, ಆರಾಧ್ಯ, ಹರೀಶ್, ಶ್ರೇಯಸ್ ರಿಗೆ  ಗಾಯವಾಗಿದೆ. ಇವರೆಲ್ಲರಿಗೂ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿದ್ದು, ಮಗುವನ್ನು ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ

 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor