ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಿ ವಾಹನ ಸವಾರರಿಗೆ ತಿರುಮಲೇಶ್‌ ಮನವಿ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 26, 2024

ಶಿವಮೊಗ್ಗ | ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಇಂದು ರಸ್ತೆ ಸಂಚಾರ ಸುರಕ್ಷತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ತಿರುಮಲೇಶ್ ಆಗಮಿಸಿ ವಾಹನ ಸವಾರರಿಗೆ ಕಡ್ಡಾಯವಾಗಿ ಪಾಲಿಸಬೇಕಾದ ಕೆಲವು ಸಂಚಾರ ನಿಯಯಮಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುರಕ್ಷಿತವಾಗಿ ವಾಹನ ಚಲಾಯಿಸುವುದು ನಮ್ಮೆಲ್ಲರ ಜವಾಬ್ದಾರಿ ವಾಹನ ಚಲಾಯಿಸುವಾಗ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಮತ್ತು ಕಾರು ಚಾಲನೆ ಮಾಡುವವರು ಸೀಟ್ ಬೆಲ್ಟ್ ಧರಿಸಬೇಕು. ವಾಹನಗಳನ್ನು ವೇಗವಾಗಿ ವಾಹನ ಚಾಲನೆ ಮಾಡದೆ ನಿಯಮಿತ ವೇಗದ ಮಿತಿಯಲ್ಲಿ ವಾಹನ ಚಾಲನೆ ಮಾಡಬೇಕು.  ಸುರಕ್ಷಿತ ಚಾಲನೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಜೊತೆಗೆ ರಸ್ತೆಯಲ್ಲಿರುವ ಇತರರನ್ನು ಸಹ ರಕ್ಷಿಸಲು ಸಾಧ್ಯ.  ಒಂದು ತಪ್ಪು ನಡೆ ಸಾವಿಗೆ ಕಾರಣವಾಗಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಅವಸರದ ಅಜಾಗರೂಕ ಚಾಲನೆ ಬೇಡ. ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಅನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂಬ ಮಾಹಿತಿಯನ್ನ ನೀಡಿದರು. 

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷರಾದ ಕುಮಾರ್ ಜಿ, ಹಾಗೂ ಕ್ಲಬ್ ಸಂಸ್ಥಾಪಕ ಸದಸ್ಯರಾದ ಪಿಡಿಜಿ ಪ್ರಕಾಶ್ ಚೂಡಾಮಣಿ ಪವಾರ್, ಅರುಣ್ ಕುಮಾರ್, ರಮಾನಾಥ್ ಗಿರಿಮಾಜಿ ಹಾಗೂ ಇತರರು ಉಪಸ್ಥಿತರಿದ್ದರು.

SUMMARY | West Traffic Police Station PSI Thirumalesh came as the chief guest and informed the motorists about some of the traffic rules to be strictly followed.


KEYWORDS | West Traffic Police, PSI Thirumalesh,  traffic rules,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor