ಭದ್ರಾವತಿಯಲ್ಲಿ ಡೀಲ್‌, ಹಾಸನದ ವ್ಯಕ್ತಿಗೆ ಸೇಲ್‌, ಚೆನ್ನಗಿರಿಯ ಇಬ್ಬರು ಅರೆಸ್ಟ್‌ | ಇಂಟರ್‌ಸ್ಟಿಂಗ್‌ ಆಗಿದೆ ಹೊಳೆಹೊನ್ನೂರು PS ಕೇಸ್‌

ಹಂಚಿಕೊಳ್ಳಿ
WhatsApp Facebook X Telegram
ಭದ್ರಾವತಿಯಲ್ಲಿ ಡೀಲ್‌, ಹಾಸನದ ವ್ಯಕ್ತಿಗೆ ಸೇಲ್‌, ಚೆನ್ನಗಿರಿಯ ಇಬ್ಬರು ಅರೆಸ್ಟ್‌ | ಇಂಟರ್‌ಸ್ಟಿಂಗ್‌ ಆಗಿದೆ ಹೊಳೆಹೊನ್ನೂರು PS ಕೇಸ್‌

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 26, 2025 ‌‌ ‌‌

ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹಾಸನದ ವ್ಯಕ್ತಿಯೊಬ್ಬರಿಗೆ ನಕಲಿ ಚಿನ್ನದ ನಾಣ್ಯ ಕೊಟ್ಟು ವಂಚಿಸಿದ ಪ್ರಕರಣ 24 ಗಂಟೆಯ ಒಳಗಾಗಿ ಇತ್ಯರ್ಥ ಕಂಡಿದೆ. ಪ್ರಕರಣದಲ್ಲಿ ಚನ್ನಗಿರಿ ತಾಲ್ಲೂಕಿನ ಚಿಕ್ಕಬ್ಬಿಕೆರೆ ಗ್ರಾಮದ ಸುನೀಲ್ (34) ಹಾಗೂ ನಾಗಪ್ಪ (50)  ಎಂಬವರನ್ನ ಹೊಳೆಹೊನ್ನೂರು ಠಾಣೆಯ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಏನಿದು ಪ್ರಕರಣ

ಹಾಸನ ಅಮುಲ್ ಡೈರಿಯಲ್ಲಿ ಕೆಲಸ ಮಾಡ್ತಿದ್ದ ಗಿರಿಗೌಡ ಎಂಬ ವ್ಯಕ್ತಿಗೆ ಚನ್ನಗಿರಿ ತಾಲೂಕಿನ ಚಿಕ್ಕಬ್ಬಿಗೆರೆ ಗ್ರಾಮದ ಸುರೇಶ್‌ ಎಂಬ ಭದ್ರಾವತಿ ತಾಲೂಕಿನ ಮಂಗೋಟೆ ಗ್ರಾಮದಲ್ಲಿ ನಕಲಿ ಚಿನ್ನದ ನಾಣ್ಯ ನೀಡಿ ತಮ್ಮ ಬಳಿ ಇನ್ನಷ್ಟು ನಾಣ್ಯ ಇರುವುದಾಗಿ ಹೇಳಿದ್ದರು. ಅದನ್ನು ನಂಬಿ ಗಿರಿಗೌಡರು ಏಳು ಲಕ್ಷ ರೂಪಾಯಿ ನೀಡಿದ್ದರು. ಅವರಿಗೆ ಆರೋಪಿಗಳು ನಕಲಿ ನಾಣ್ಯ ಕೊಟ್ಟು ವಂಚಿಸಿದ್ದರು. ಈ ಸಂಬಂಧ ಕಳೆದ 23ರಂದು ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಆಗಿತ್ತು. 

ಸಿಪಿಐ ಲಕ್ಷ್ಮಿಪತಿ, ಪಿಎಸ್‌ಐಗಳಾದ ರಮೇಶ್‌, ಮಂಜುನಾಥ್‌ ಎಸ್‌ ಕುರಿ, ಕೃಷ್ಣನಾಯ್ಕ್‌, ಸಿಬ್ಬಂದಿ ವಿಶ್ವನಾಥ್‌, ಅಣ್ಣಪ್ಪ, ಪ್ರಕಾಶ್‌, ಕುಬೇರ, ಪ್ರಶಾಂತ್‌ ತಂಡ ಆರೋಪಿಗಳನ್ನ 24 ಗಂಟೆಯೊಳಗೆ ಅರೆಸ್ಟ್‌ ಮಾಡಿದೆ.

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor