ಹೊಳೆಹೊನ್ನೂರಲ್ಲಿ ಕೇಸ್‌, ಆಯನೂರಿನಲ್ಲಿ ಅರೆಸ್ಟ್‌ | ಒಂದಕ್ಕೆ ನಾಲ್ಕು ಕೇಸ್‌ ಕ್ಲೀಯರ್‌!

shivamogga, holehonnuru police station, arecanut theft case 

ಹೊಳೆಹೊನ್ನೂರಲ್ಲಿ ಕೇಸ್‌, ಆಯನೂರಿನಲ್ಲಿ ಅರೆಸ್ಟ್‌ | ಒಂದಕ್ಕೆ ನಾಲ್ಕು ಕೇಸ್‌ ಕ್ಲೀಯರ್‌!
shivamogga, holehonnuru police station, arecanut theft case 

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 13, 2025 ‌‌ 

ಬೇರೆಕಡೆಗಳಲ್ಲಿ ಹೇಗೋ ಏನೋ? ಆದರೆ ಮಲ್ನಾಡ್‌ನಲ್ಲಿ ಅಡಿಕೆ ಕದ್ದರೆ, ಅವರ ಮಾನ ಹೋಗುವುದಿಲ್ಲ ಬದಲಾಗಿ ಬೆಳೆಗಾರನಿಗೆ ಹೊಟ್ಟೆ ಸಂಕಟವಾಗುತ್ತದೆ. ನಾನಾ ಕಷ್ಟ ಪಟ್ಟು,  ಮೂಟೆ ಮೂಟೆಗೆ ಅಡಿಕೆ ತುಂಬಿ, ರೇಟ್‌ ಬರಲಿ ಅಂತಾ ಕಾಯುವ ಅಡಿಕೆ ಬೆಳೆಗಾರರ ಕಿವಿಗೆ, ರಾತೋರಾತ್ರಿ ಕ್ವಿಂಟಾಲ್‌ ತೂಕದ ಮೂಟೆಗಳು ಕಳುವಾಗಿದೆ ಎನ್ನುವ ಸುದ್ದಿ ಬಿದ್ದರೆ, ಆತನ ಎದೆ ದಸಕ್‌ ಅನ್ನದೆ ಇರದು. ಈ ಕಾರಣಕ್ಕೆ ಪೊಲೀಸರು ಮಲ್ನಾಡ್‌ನಲ್ಲಿ ಅಡಿಕೆ ಹಾಗೂ ಶುಂಠಿ ಕಳ್ಳತನದ ಕೇಸ್‌ನ್ನ ಸೀರಿಯಸ್‌ ಆಗಿ ತೆಗೆದುಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಹೊಳೆಹೊನ್ನೂರು ಪೊಲೀಸ್‌ ಠಾಣೆ ಪೊಲೀಸರು ಹದಿನೇಳು ದಿನದ ಹಿಂದೆ ದಾಖಲಾಗಿದ್ದ ಕೇಸ್‌ವೊಂದನ್ನ ತಕ್ಷಣವೇ ಇತ್ಯರ್ಥ ಪಡಿಸಿದ್ದಾರೆ. 

ಹೊಳೆಹೊನ್ನೂರು ಪೊಲೀಸ್‌ ಠಾಣೆ 

ಭದ್ರಾವತಿ ಅರಹತೊಳಲು ಗ್ರಾಮ ವಾಸಿಯೊಬ್ಬರು ತಮ್ಮ ಮನೆಯ ಮುಂದೆ ಅಡಿಕೆಯನ್ನು ಚೀಲಕ್ಕೆ ತುಂಬಿ, ಕೂಡಿಟ್ಟಿದ್ದರು. ಈ ನಡುವೆ  ದಿನಾಂಕ : 26-01-2025 ರಂದು ಮೂಟೆ ಸಮೇತ ಅಡಿಕೆ ಕಳವಾಗಿತ್ತು. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್‌ ಠಾಣೆಗೆ ಅರಹತೊಳಲು ನಿವಾಸಿ ದೂರು ನೀಡಿದ್ದರು. ಇನ್ನೂ ಈ ಕುರಿತಾಗಿ ತನಿಖೆ ಆರಂಭಿಸಿದ  ಹೊಳೆಹೊನ್ನೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಲಕ್ಷ್ಮೀಪತಿ ನೇತೃತ್ವದ  ಪಿಎಸ್ಐ ರಮೇಶ, ಮಂಜುನಾಥ ಎಸ್ ಕುರಿ, ಕೃಷ್ಣನಾಯ್ಕ ಹಾಗೂ ಸಿಬ್ಬಂದಿ .ಹೆಚ್.ಸಿ ಅಣ್ಣಪ್ಪ, ಪ್ರಕಾಶ ನಾಯ್ಕ ಪ್ರಸನ್ನ, ಸವಿತ ಮತ್ತು ಸಿ.ಪಿ.ಸಿ ವಿಶ್ವನಾಥರನ್ನು ಒಳಗೊಂಡ ತಂಡ ಇದೀಗ ಆರೋಪಿಯನ್ನು ಅರೆಸ್ಟ್‌ ಮಾಡಿದೆ. 

ಆಯನೂರು ನಿವಾಸಿ ಸೈಯ್ಯದ್‌ ನವೀನ್‌ ಎಂಬಾತನನ್ನು ಪ್ರಕರಣ ಸಂಬಂಧ ಅರೆಸ್ಟ್‌ ಮಾಡಿರುವ ಪೊಲೀಸರು ಈ ವರ್ಷದ ಎರಡು ಪ್ರಕರಣ ಹಾಗೂ 2024ರ ಎರಡು ಅಡಿಕೆ ಕಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ. ಅಲ್ಲದೆ ಆರೋಪಿಯಿಂದ 10 ಕ್ವಿಂಟಾಲ್‌ ಒಣ ಅಡಿಕೆ ಹಾಗೂ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಸೀಜ್‌ ಮಾಡಿದ್ದಾರೆ.

SUMMARY  | shivamogga holehonnuru police station arecanut theft case 

KEY WORDS | shivamogga, holehonnuru police station, arecanut theft case