ಬಾಮಿಗೆ ಬಿದ್ದ ದನ ಎತ್ತಲು ಹೋದವನಿಗೆ ಎದುರಾದ ಸಾವು | ತಾನು ಕಡಿಯುತ್ತಿದ್ದ ಮರ ತನ್ನ ಮೇಲೆ ಬಿದ್ದು ಸಾವು | ಥರಥರ ಸುದ್ದಿ

ಹಂಚಿಕೊಳ್ಳಿ
WhatsApp Facebook X Telegram
ಬಾಮಿಗೆ ಬಿದ್ದ ದನ ಎತ್ತಲು ಹೋದವನಿಗೆ ಎದುರಾದ ಸಾವು | ತಾನು ಕಡಿಯುತ್ತಿದ್ದ ಮರ ತನ್ನ ಮೇಲೆ ಬಿದ್ದು ಸಾವು | ಥರಥರ ಸುದ್ದಿ

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 21, 2025 ‌‌ ‌‌

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಎರಡು ಘಟನೆಗಳು ಎರಡು ಜೀವಗಳನ್ನು ಬಲಿ ಪಡೆದಿವೆ. ಆದರೆ ನಡೆದ ಘಟನೆಗಳು ವಿಚಿತ್ರ ಎನಿಸುತ್ತಿದ್ದು, ಸಾವು ಹೀಗೂ ಎದುರಾಗುತ್ತಾ ಎಂಬ ಭಾವನೆಯನ್ನು ಮೂಡಿಸುತ್ತಿದೆ. 

ಸುದ್ದಿ 1 : ಕಡಿಯುತ್ತಿದ್ದ ತೆಂಗಿನ ಮರ ಮೈಮೇಲೆ ಬಿದ್ದು ಸಾವು 

ಪತ್ರಿಕೆಯೊಂದರ ವರದಿ ಪ್ರಕಾರ, ಸಾಗರ ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ತೆಂಗಿನ ಮರವೊಂದು ಮೈಮೇಲೆ ಬಿದ್ದು 24 ವರುಷದ ಸಚಿನ್ ಎಂಬವರು ಕಳೆದ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಇವರು ತೆಂಗಿನ ಮರದಲ್ಲಿ ಗಿಳಿಗಳು ಗೂಡು ಕಟ್ಟಿದ್ದ ಹಿನ್ನೆಲೆಯಲ್ಲಿ ಮರ ಕಡಿಯಲು ಮುಂದಾಗಿದ್ದಾರೆ. ಈ ವೇಳೆ ಮರ ಅವರ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. 

ಸುದ್ದಿ 2 : ಬಾವಿಗೆ ಬಿದ್ದ ದನದ ರಕ್ಷಣೆಗೆ ಹೋಗಿ ಸಾವನ್ನಪ್ಪಿದ

ಇನ್ನೊಂದು ಘಟನೆಯಲ್ಲಿ ಬಾಮಿಗೆ ಬಿದ್ದ ದನವನ್ನ ಮೇಲತ್ತಲು ಬಾವಿಗಿಳಿದ ವ್ಯಕ್ತಿಯೊಬ್ಬರು ಅಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ  ತಾಲ್ಲೂಕು ಕೋಣಂದೂರು ಬಳಿಯ ಕಾರಕೋಡ್ಲು ಎಂಬಲ್ಲಿ ಘಟನೆ ನಡೆದಿರೋದು.  ಕೇರಳದ ಸತೀಶ್ (45) ಮೃತರು. ಕಳೆದ ಮಂಗಳವಾರ ಇಲ್ಲಿನ ನಿವಾಸಿಯೊಬ್ಬರಿಗೆ ಸೇರಿದ ಬಾವಿಯಲ್ಲಿ ದನವೊಂದು ಬಿದ್ದಿತ್ತು. ಅದನ್ನು ಕಟ್ಟಿ ಮೇಲೆಕ್ಕೆ ಎಳೆಯಲು ಅನುಕೂಲ ಮಾಡಿಕೊಡಲು ಸತೀಶ್‌ ಬಾವಿಯೊಳಗೆ ಇಳಿದಿದ್ದರು. ಆದರೆ ಕೆಳಕ್ಕೆ ಇಳಿಯುತ್ತಲೇ ಸತೀಶ್‌ರಿಗೆ ಉಸಿರಾಟದ ತೊಂದರೆಯಾಗಿ ಅಲ್ಲಿಯೇ ಕುಸಿದುಬಿದ್ದಿದ್ದಾರೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕದವರು ಬಂದು ಸತೀಶ್‌ ಹಾಗೂ ದನವನ್ನ ಮೇಲಕ್ಕೆ ಎತ್ತಿದ್ದಾರೆ. ಆದರೆ ಅಷ್ಟರಲ್ಲಿ ಸತೀಶ್‌ ಮೃತಪಟ್ಟಿದ್ದರು.  

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor