ಜಂಕ್ಷನ್‌ ಬಳಿ ಶಿವಮೊಗ್ಗದಿಂದ ತರಿಕೆಗೆ ಹೋಗುತ್ತಿದ್ದ ಕಾರು ಪಲ್ಟಿ | ನಡೆದಿದ್ದೇನು

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 11, 2025 ‌‌   ‌

ಶಿವಮೊಗ್ಗ ಜಿಲ್ಲೆ ಬಿಆರ್‌ಪಿ ಜಂಕ್ಷನ್‌ ಬಳಿಯಲ್ಲಿ ನಿನ್ನೆದಿನ ಅಪಘಾತ ಸಂಭವಿಸಿದೆ. ಇಲ್ಲಿನ  ರಂಗನಾಥಪುರ ಬಳಿ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತರೀಕೆರೆ ತಾಲ್ಲೂಕಿನ ನೇರಲಕೆರೆ ಗ್ರಾಮದ ದೇವರಾಜ್ ಎಂಬುವರು ಸ್ನೇಹಿತರ ಜತೆ ಶಿವಮೊಗ್ಗದಿಂದ ತರೀಕೆರೆ ಕಡೆಗೆ ಹೋಗುತ್ತಿದ್ದರು. 

ಈ ವೇಳೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿದೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅವರನ್ನು ಸಾರ್ವಜನಿಕರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರಿಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಪ್ರಕರಣ ಇದಾಗಿದೆ. 

SUMMARY | A car overturned and fell into a ditch near BRP Junction in Shimoga district.

KEY WORDS |‌ car overturned and fell into a ditch, BRP Junction in Shimoga district.

Leave a Comment