ಕೃಷಿ ಸಚಿವರು ಅಡಿಕೆ ಹಾನಿಕಾರಕವಲ್ಲ ಎಂದು ಘೋಷಿಸಲಿ | ಬಿ ಎ ರಮೇಶ್ ಹೆಗ್ಡೆ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 16, 2025

ಶಿವಮೊಗ್ಗ|  ಸಾಗರದಲ್ಲಿ ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಆಗಮಿಸಲಿದ್ದು, ಆ ಸಂದರ್ಭದಲ್ಲಿ. ಸಚಿವರು ಅಡಿಕೆಜೀವಕ್ಕೆ ಹಾನಿಕಾರಕ ಅಲ್ಲ ಎಂಬ ಘೋಷಣೆಯನ್ನು ಮಾಡಬೇಕು ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ ಎ ರಮೇಶ್ ಹೆಗ್ಡೆ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಡಿಕೆ ಬೆಳೆಗಾರರ ಸಮಾವೇಶವನ್ನು ಸಾಗರದಲ್ಲಿ ಮ್ಯಾಮ್ಕೋಸ್, ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ, ತೋಟಗಾರ್ಸ್ ಮುಂತಾದ ಸಂಘ ಪರಿವಾರದ ಸಂಘಟನೆಗಳು ಹಮ್ಮಿಕೊಂಡಿವೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಡಿಕೆ ಹಾನಿಕಾರಕ ವಸ್ತು ಎಂದು ಬಿಜೆಪಿಯ ಪ್ರಮುಖರೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಚುನಾವಣೆ ಸಂದರ್ಭಗಳಲ್ಲಿ ಪ್ರಧಾನಿ ಸೇರಿದಂತೆ ಬಿಜೆಪಿ ವರಿಷ್ಠರು ಅಡಿಕೆಗೆ ಮಾನ ತಂದು ಕೊಡುತ್ತೇವೆ ಎಂದು ಹೇಳಿದವರೇ ಈಗ ಅಡಿಕೆಯ ಮಾನ ತೆಗೆದಿದ್ದಾರೆ ಎಂದು ದೂರಿದರು.

ಬಿಜೆಪಿ ಸರ್ಕಾರದಲ್ಲಿ ಸಚಿವೆಯಾಗಿದ್ದ ಅನುಪ್ರಿಯಾ ಪಟೇಲ್ ಮತ್ತು ಜೆ.ಪಿ. ನಡ್ಡಾ ಅವರು ಸಂಸತ್ ನಲ್ಲಿಯೇ ಲಿಖಿತ ಹೇಳಿಕೆ ನೀಡಿ ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದಿದ್ದರು. ಜಾರ್ಖಂಡ್‍ನ ಸಂಸದರೊಬ್ಬರು ಅಡಿಕೆಯನ್ನು ನಿಷೇಧ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಬಿಜೆಪಿ ಸರ್ಕಾರ ಸ್ಪಂದಿಸಿತ್ತು ಕೂಡ. ಹೀಗಾಗಿ ಇಡೀ ಬಿಜೆಪಿ ಪರಿವಾರ ಅಡಿಕೆಯ ಮಾನವನ್ನು ತೆಗೆದಿದೆ. ಈಗ ಸಮಾವೇಶದ ಮೂಲಕ ಅಡಿಕೆಗೆ ಮಾನ ಕೊಡುವ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದರು.

ಅಡಿಕೆಗೆ ನಿಜಕ್ಕೂ ಮಾನ ಬರಬೇಕಾದರೆ ಸಾಗರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಅಡಿಕೆ ಹಾನಿಕಾರಕ ಅಲ್ಲ. ಅದನ್ನು ತಿಂದರೆ ಕ್ಯಾನ್ಸರ್ ಬರುವುದಿಲ್ಲ ಎಂದು ಸ್ಪಷ್ಟಪಡಿಸಬೇಕು. ಹೇಳಿಕೆ ನೀಡಬೇಕು. ಸಮಾವೇಶ ಆಯೋಜಿಸಿರುವ ಎಲ್ಲರೂ ಈ ಬಗ್ಗೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

SUMMARY | District arecanut growers association president B A Ramesh Hegde demanded that the minister should make a declaration that arecanut is not harmful to life.

 

KEYWORDS |  arecanut,  B A Ramesh Hegde,  agriculture minister,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor