SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 7, 2025

ಶಿವಮೊಗ್ಗ | ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಸೇರಿದಂತೆ ಇತರೆ 6 ತಾಲ್ಲೂಕುಗಳಲ್ಲಿ ಮಾರ್ಚ್ 8 ರಂದು ಲೋಕ್ ಅದಾಲತ್ ನಡೆಯಲಿದೆ ಎಂದು ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶರಾದ ಮಂಜುನಾಥ್ ನಾಯ್ಕ್ ತಿಳಿಸಿದರು.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾವು ವರ್ಷದಲ್ಲಿ 4 ಮೆಗಾ ಲೋಕ್ ಅದಾಲತ್ಗಳನ್ನು ನಡೆಸುತ್ತೇವೆ. ಇದು ವರ್ಷದ ಮೊದಲ ಲೋಕ್ ಅದಾಲತ್. ಇದಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಈಗಾಗಲೇ ನಡೆಸಿದ್ದೇವೆ. ಕಳೆದ ಡಿಸೆಂಬರ್ ನಲ್ಲಿ ರಾಜಿ ಸಂಧಾನದ ಮೂಲಕ 13300 ದಷ್ಟು ಪ್ರಕರಣವನ್ನು ಬಗೆಹರಿಸಿದ್ದೇವೆ. ಈ ಬಾರಿ ನಡೆಯುವ ಲೋಕ್ ಅದಾಲತ್ ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್ ವೈವಾಹಿಕ ಮೋಟಾರು ಪರಿಹಾರ ಪ್ರಕರಣಗಳು ಸೇರಿದಂತೆ ಇತರ 15 ಸಾವಿರ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಪರಿಹರಿಸ ಬೇಕೆಂದುಕೊಂಡಿದ್ದೇವೆ ಎಂದರು.

ಈ ಬಾರಿ ಲೋಕ್ ಅದಾಲತ್ ನಲ್ಲಿ ಕ್ರಿಮಿನಲ್ ಪ್ರಕರಣಗಳೇ ಹೆಚ್ಚು
ನಾಳೆ 15 ರಿಂದ 20 ವರ್ಷದ ಹಳೆಯ ಕೇಸ್ ಗಳು ಬಗೆಹರೆಯಲಿದ್ದು, ಇದರಲ್ಲಿ ಹೆಚ್ಚಾಗಿ ಕ್ರಿಮಿನಲ್ ಕೇಸ್ ಗಳಿವೆ. ಈ ಸಂದರ್ಭದಲ್ಲಿ ಕೋರ್ಟ್ ಮಧ್ಯಸ್ಥಿಕೆ ವಹಿಸುವ ಮೂಲಕ ಕುಟುಂಬ ವ್ಯಾಜ್ಯಗಳು ಸೇರಿದಂತೆ ಇನ್ನಿತರೆ ಕೇಸ್ ಗಳು ಬಗೆ ಹರಿಸುತ್ತೇವೆ. ಈ ಲೋಕ್ ಅದಾಲತ್ ನಡೆಸುವುದರಿಂದ ನಾವು ನ್ಯಾಯಾಲಯದ ಸಮಯವನ್ನು ಉಳಿಸಬಹುದು. ಮೂರು ಕೋರ್ಟ್ ಗಳಲ್ಲಿ ನಡೆಯುವ ಕಲಾಪನ್ನು ಲೈವ್ ಸ್ಟ್ರೀಮಿಂಗ್ ಬಿಡಲಾಗುತ್ತದೆ ಎಂದರು.
ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಸಂಧಾನಧಿಕಾರಿ ನೇಮಕ
ಮಾರ್ಚ್ 08 ಮಹಿಳಾ ದಿನಾಚರಣೆ ಆಗಿರುವುದರಿಂದ ಕಲಾಪಗಳ ಸಂಧಾನವನ್ನು ಮಾಡಿಸಲು ಮಹಿಳಾ ಸಂಧಾನಾಧಿಕಾರಿಯನ್ನು ನೇಮಿಸಲಾಗಿದೆ. ಹಾಗೆಯೇ ಇಲ್ಲಿರುವ ಮಹಿಳಾ ಕೇಸ್ ಗಳನ್ನು ಬಗ್ಗೆ ಎಂದಿನಂತೆ ಸೂಕ್ಷ್ಮವಾಗಿ ಗಮನಹರಿಸಲಾಗಿದೆ ಎಂದರು.
SUMMARY | Lok Adalat will be held on March 8 in six other taluks, including Shivamogga district court
KEYWORDS | Lok Adalat, March 8, Shivamogga court,