ಅಕ್ಟೋಬರ್ 11ರಂದು ಕೆ-ಸೆಟ್ ಪರೀಕ್ಷೆ: ಶಿವಮೊಗ್ಗದ 22 ಕೇಂದ್ರಗಳಲ್ಲಿ 6,58 ಸರಕಾರಿ ಅಭ್ಯರ್ಥಿಗಳು; 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ!
ಶಿವಮೊಗ್ಗ: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET)-2026 ಅಕ್ಟೋಬರ್ 11ರಂದು ನಡೆಯಲಿದ್ದು, ಶಿವಮೊಗ್ಗ ನಗರದ 22 ಕೇಂದ್ರಗಳಲ್ಲಿ ಒಟ್ಟು 6,588 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪರೀಕ್ಷೆಯನ್ನು ಅತ್ಯಂತ ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ತಿಳಿಸಿದ್ದಾರೆ.

- ನಿಷೇಧಾಜ್ಞೆ ಜಾರಿ: ಅಕ್ಟೋಬರ್ 11ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)-2023ರ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
- ಹೈಟೆಕ್ ತಪಾಸಣೆ: ಅಭ್ಯರ್ಥಿಗಳ ಹಾಲ್ ಟಿಕೆಟ್ ಸ್ಕ್ಯಾನ್ ಮಾಡುವುದರ ಜತೆಗೆ ‘ಫೇಸ್ ರೆಕಗ್ನಿಷನ್’ ತಂತ್ರಜ್ಞಾನದ ಮೂಲಕ ಗುರುತು ಪರಿಶೀಲನೆ ನಡೆಸಲಾಗುತ್ತದೆ. ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಇರಲಿದ್ದು, ಡ್ರೆಸ್ ಕೋಡ್ ಪರಿಶೀಲನೆಗೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿದೆ.
- ಸಕ್ತ ಭದ್ರತೆ: ಪ್ರಶ್ನೆಪತ್ರಿಕೆಗಳ ಸುರಕ್ಷಿತ ರವಾನೆಗೆ ತ್ರಿಸದಸ್ಯ ಸಮಿತಿ ರಚಿಸಲಾಗಿದ್ದು, ಪೊಲೀಸ್ ಭದ್ರತೆಯಲ್ಲಿ 7 ಮಾರ್ಗಗಳ ಮೂಲಕ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗುತ್ತದೆ. ಪರೀಕ್ಷೆ ವೇಳೆ ಯಾವುದೇ ಎಲೆಕ್ಟ್ರಾನಿಕ್ ಸಾಧನ ಹಾಗೂ ಮೊಬೈಲ್ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪಿಡಿಎಫ್ನಲ್ಲಿರುವ ಪ್ರುಮುಖ ಸುದ್ದಿಗಳು
1. ಶಿವಮೊಗ್ಗ ಪೊಲೀಸರ ಭಾರಿ ಕಾರ್ಯಾಚರಣೆ: ₹1.02 ಕೋಟಿ ಮೌಲ್ಯದ ಚಿನ್ನ-ನಗದು ಸಹಿತ ಕಳ್ಳನ ಬಂಧನ!
ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ಮನೆ ಬೀಗ ಮುರಿದು ಕಳವು ಮಾಡಿದ್ದ ಹಗರಿಬೊಮ್ಮನಹಳ್ಳಿ ನಿವಾಸಿ ಮೊಹಮ್ಮದ್ ರಫೀಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹1.02 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
2. ‘ಅನ್ನ ಸೇವೆ’ Appನಲ್ಲಿ ಶಿವಮೊಗ್ಗ ಜಿಲ್ಲೆ ಮಾಯ: e-KYC ಮಾಡಿಸಲಾಗದೆ ಪಡಿತರದಾರರ ಪರದಾಟ!
ರೇಷನ್ ಕಾರ್ಡ್ e-KYC ಸುಲಭಗೊಳಿಸಲು ಸರ್ಕಾರ ತಂದಿರುವ ‘ಅನ್ನ ಸೇವೆ’ ಆ್ಯಪ್‌ನಲ್ಲಿ 13 ಜಿಲ್ಲೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಶಿವಮೊಗ್ಗ ಜಿಲ್ಲೆಯ ಹೆಸರೇ ಇಲ್ಲದಿರುವುದು ಜನರಲ್ಲಿ ತೀವ್ರ ಗೊಂದಲ ಮೂಡಿಸಿದೆ. ಅಕ್ಟೋಬರ್ 21ರ ಗಡುವು ಸಮೀಪಿಸುತ್ತಿರುವುದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.
3. ‘ವರದಕ್ಷಿಣೆ ಕಿರುಕುಳ’ ಪ್ರಕರಣ: ಪತಿ ಮತ್ತು ಅತ್ತೆಗೆ 10 ವರ್ಷ ಕಠಿಣ ಕಾರ್ಯಾಚರ ಶಿಕ್ಷೆ!
ಆಗುಂಬೆ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮದ ಜ್ಯೋತಿ (24) ಎಂಬವರ ವರದಕ್ಷಿಣೆ ಕಿರುಕುಳ ಹಾಗೂ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪರಾಧಿಗಳಾದ ಪತಿ ದಯಾನಂದ್ ಹಾಗೂ ಅತ್ತೆ ಸುಮಿತ್ರಾಗೆ ಶಿವಮೊಗ್ಗದ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
4. ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಸೂಳೆಬೈಲಿನ ಯುವಕ ಫೈಜಾನ್ ಶವವಾಗಿ ಪತ್ತೆ!
ಶಿವಮೊಗ್ಗ ಹೊರವಲಯದ ಮಟ್ಟಪ್ಪನ ಕ್ಯಾಂಪ್ ಸಮೀಪ ತುಂಗಾ ನದಿಯಲ್ಲಿ ಬುಧವಾರ ಪಾರ್ಟಿ ಮುಗಿಸಿ ಈಜಲು ಇಳಿದು ನಾಪತ್ತೆಯಾಗಿದ್ದ ಸೂಳೆಬೈಲು ನಿವಾಸಿ ಫೈಜಾನ್ (29) ಎಂಬ ಯುವಕನ ಮೃತದೇಹ ಗುರುವಾರ ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿಯ ಶೋಧ ಕಾರ್ಯದ ವೇಳೆ ಪತ್ತೆಯಾಗಿದೆ.
5. ವಿಟಿಯು Rank ವಿಜೇತ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ JNNCE ಸಂಸ್ಥೆಯಲ್ಲಿ ಶ್ಲಾಘನೆ!
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಪರೀಕ್ಷೆಯಲ್ಲಿ ‘ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್’ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಹಾಗೂ 7 ಚಿನ್ನದ ಪದಕ ಪಡೆದ ಧನಶ್ರೀ ಬಿ.ಎಮ್. ಸೇರಿದಂತೆ ವಿವಿಧ ರ್ಯಾಂಕ್ ಗಳಿಸಿದ ಗ್ರಾಮೀಣ ಮೂಲದ ವಿದ್ಯಾರ್ಥಿಗಳನ್ನು ಜೆಎನ್‌ಎನ್‌ಸಿಇ ಸಂಸ್ಥೆಯ ಪತ್ರಿಕಾಗೋಷ್ಠಿಯಲ್ಲಿ ಅಭಿನಂದಿಸಲಾಯಿತು.
ಈ ಮೇಲಿನ ಎಲ್ಲಾ ಸುದ್ದಿಗಳು ಸಂಪೂರ್ಣ ವಿವರಗಳು (ಇ-ಪೇಪರ್ನಲ್ಲಿ )
