ಶಿವಮೊಗ್ಗದಲ್ಲಿ 12 ಮಂದಿ ಸೇರಿದಂತೆ ರಾಜ್ಯದಲ್ಲಿ 137 ಮಂದಿ ಅಕ್ರಮ ವಲಸಿಗರು ಬಂಧನ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 7, 2025 ‌‌ ‌

ಶಿವಮೊಗ್ಗವೂ ಸೇರಿದಂತೆ ರಾಜ್ಯದ ಯಾವ ಜಿಲ್ಲೆಗಳಲ್ಲಿ ಎಷ್ಟು ಮಂದಿನ ಅಕ್ರಮ ವಲಸಿಗರು ಇದ್ದಾರೆ ಎಂಬ ವಿವರವನ್ನು ಗೃಹಸಚಿವ ಡಾ.ಜಿ ಪರಮೇಶ್ವರ್‌ ಸದನಕ್ಕೆ ತಿಳಿಸಿದ್ದಾಋೆ. 

ಸದನದಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 25 ಪಾಕಿಸ್ತಾನಿಗಳು ಸೇರಿದಂತೆ 137 ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಈ ಪೈಕಿ ಬೆಂಗಳೂರು ನಗರದಲ್ಲಿ 84, ಬೆಂಗಳೂರು ಗ್ರಾಮಾಂತರದಲ್ಲಿ 27, ಶಿವಮೊಗ್ಗದಲ್ಲಿ 12, ಹಾಸನದಲ್ಲಿ ಮೂರು, ಮಂಗಳೂರಿನಲ್ಲಿ ಒಬ್ಬರು ಮತ್ತು ಉಡುಪಿಯಲ್ಲಿ 10 ಅಕ್ರಮ ವಲಸಿಗರು ಪತ್ತೆಯಾಗಿರುವುದಾಗಿ ತಿಳಿಸಿದರು

ಬಂಧಿತರನ್ನು ಆಯಾ ದೇಶಗಳಿಗೆ ವಾಪಸ್‌ ಗಡಿಪಾರು ಮಾಡಲಾಗುವುದು ಎಂದ ಸಚಿವರು, ಈ ಸಂಬಂಧ ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು

ಇದೇ ವೇಳೇ  2016 ರಲ್ಲಿ ವಿಜಯಪುರದಲ್ಲಿ 33 ಬಾಂಗ್ಲಾದೇಶಿಗಳು ಪತ್ತೆಯಾಗಿದ್ದು, ಅವರನ್ನು ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ಒದಗಿಸಿದರು. 

 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor