SHIVAMOGGA | MALENADUTODAY NEWS | ಮಲೆನಾಡು ಟುಡೆ Dec 18, 2024
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದರೂ ಸಹ ಓರ್ವ ಆರೋಪಿ ಮಾತ್ರ ಇನ್ನೂ ಸಹ ಜೈಲಿನಲ್ಲಿಯೇ ಇದ್ದಾರೆ. ಶಿವಮೊಗ್ಗದ ಜೈಲಿನಿಂದ ನಿನ್ನೆದಿನ ಆರೋಪಿ ಲಕ್ಷ್ಮಣ್ ರಿಲೀಸ್ ಆಗಿದ್ದಾರೆ. ಆದರೆ ಆರೋಪಿ ಜಗದೀಶ್‌ಗೆ ಇನ್ನೂ ಸಹ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಇದಕ್ಕೆ ಕಾರಣ ಅವರ ಕುಟುಂಬ ಅಗತ್ಯವಾದ ಬಾಂಡ್ ಒದಗಿಸಲಾಗದೆ ಇರುವುದು.
ಶಿವಮೊಗ್ಗ ಸೆಂಟ್ರಲ್ ಜೈಲ್‌ನಿಂದ ಆರೋಪಿ ಲಕ್ಷ್ಮಣ್ ಬಿಡುಗಡೆಯೊಂದಿಗೆ ದರ್ಶನ್ ಸೇರಿದಂತೆ ರೇಣುಕಾಸ್ವಾಮಿಯ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ರಿಲೀಸ್ ಆಗಿದ್ದಾರೆ. ಆದರೆ, ಪ್ರಕರಣದ 6ನೇ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನಿಗೆ ಮಾತ್ರ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಚಿತ್ರದುರ್ಗದ ಮಹಾವೀರ ನಗರ ನಿವಾಸಿ ಜಗದೀಶ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಪ್ರಕರಣದಲ್ಲಿ ಆರೋಪಿಯಾಗಿರುವ ಜಗದೀಶ್ ಅವರ ಮನೆಗೆ ಆಧಾರವಾಗಿದ್ದ. ಇದೀಗ ಆತ ಜೈಲಿನಲ್ಲಿದ್ದಾನೆ. ಪ್ರಕರಣದಲ್ಲಿ ಆತನಿಗೂ ಬೇಲ್ ಮಂಜೂರು ಆಗಿದೆ. ಆದರೆ ಬೇಲ್ ಸಂಬಂಧಿಸಿದ ಬಾಂಡ್‌ಗೆ ಸಹಿ ಹಾಕಲು ಜಾಮೀನುದಾರರು ಸಿಗುತ್ತಿಲ್ಲ. ಸಾಮಾನ್ಯವಾಗಿ ಕೋರ್ಟ್‌ನಲ್ಲಿ ಜಾಮೀನು ನೀಡುವ ವ್ಯಕ್ತಿಯ ಪಹಣಿಯನ್ನ ಹೊಂದಿರಬೇಕಾಗುತ್ತದೆ. ಆದರೆ ಜಗದೀಶ್ ಕುಟುಂಬ ಬಡ ಕುಟುಂಬವಾಗಿದ್ದರಿಂದ ಅವರ ಬಳಿ ಪಹಣಿ ಇರುವ ವ್ಯಕ್ತಿ ಸಿಗುತ್ತಿಲ್ಲ. ಪಹಣಿಯನ್ನ ಹೊಂದಿರುವ ಸಂಬಂಧಿಕರು ಇವರ ನೆರವಿಗೆ ಬರುತ್ತಿಲ್ಲ. ಹೀಗಾಗಿ ನಿನ್ನೆ ದಿನ ಓರ್ವ ವ್ಯಕ್ತಿಯನ್ನ ಕರೆದುಕೊಂಡು ಹೈಕೋರ್ಟ್‌ಗೆ ತೆರಳಿದ್ದ ವೇಳೆ, ಕೋರ್ಟ್ ಇನ್ನೊಂದು ಪಹಣಿಯನ್ನು ತರುವಂತೆ ಸೂಚಿಸಿದೆ. ಆದರೆ ಹೈಕೋರ್ಟ್‌ಗೆ ಓಡಾಡುವ ಹಣವನ್ನೆ ಹೊಂದಿಸಲಾಗದ ನಾನು, ಇನ್ನೊಬ್ಬರನ್ನ ಎಲ್ಲಿಂದ ಜಾಮೀನಿಗಾಗಿ ಹೊಂದಿಸಲಿ ಎಂದು ಅಳುತ್ತಿದ್ದಾರೆ ಜಗದೀಶ್‌ರ ತಾಯಿ. ಅಲ್ಲದೆ ಈ ನಿಟ್ಟಿನಲ್ಲಿ ದರ್ಶನ್‌ರವರೇ ಜಗದೀಶ್‌ರಿಗೆ ಜಾಮೀನು ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.

SUMMARY | One of the accused in the Renukaswamy murder case, who is in Shimoga jail, has not yet been granted bail.
KEY WORDS | Renukaswamy murder case, Shimoga jail,