ಕೈಚೀಲದಲ್ಲಿ ಸಿಕ್ಕ ಬಂಗಾರದಂತ ಮಗುವಿನ ಪೋಷಕರಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಪ್ರಕಟಣೆ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌ 

ಶಿವಮೊಗ್ಗ ನಗರದ ಹೊರವಲಯದಲ್ಲಿನ ಶ್ರೀರಾಂಪುರದ ಬಳಿಯಲ್ಲಿ ಹಸುಗೂಸನ್ನು ಕೈ ಚಿಲದಲ್ಲಿ ಇಟ್ಟು ಹೋಗಿರುವ ಪ್ರಕರಣ ಸಂಬಂಧ ಶಿವಮೊಗ್ಗ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯನ್ನು ನೀಡಿದ್ದಾರೆ. ಮಗುವಿನ ಪೋಷಕರು, ಸಂಬಂಧಿಕರು ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸಿ ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ. 

- Advertisement -

ಶ್ರೀರಾಂಪುರದಲ್ಲಿ ಸಿಕ್ಕ ಹಸುಗೂಸಿನ ಬಗ್ಗೆ ಮಲೆನಾಡು ಟುಡೆಯು ಸಾಗರ ರಸ್ತೆಯಲ್ಲಿ ಪೈಪ್‌ ಬಳಿ ಇಟ್ಟಿದ್ದ ಕೈ ಚೀಲದಲ್ಲಿತ್ತು ಮಗು | ಬಿಟ್ಟೋದವರ ಪಾಪುಗೆ ಸಿಕ್ತು ಅಪರಿಚಿತರ ತಾಯ್ತನ ಹೆಸರಿನಲ್ಲಿ ವರದಿ ಮಾಡಿತ್ತು. ಅಂದು ಸ್ಥಳೀಯರ ಆರೈಕೆಯಿಂದ ಮಗು ಚೇತರಿಸಿಕೊಂಡಿತಷ್ಟೆ ಅಲ್ಲದೆ ಮಗುವು ಸುರಕ್ಷಿತವಾಗಿ ಮಕ್ಕಳ ಕಲ್ಯಾಣ ಸಮಿತಿ ಸುಪರ್ಧಿಯನ್ನು ತಲುಪಿತ್ತು. ಇದೀಗ ಮಗು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸಿಪಿಯು ಘಟಕ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿದೆ. 

 

ಸದ್ಯ ಮಗುವಿನ ಮುಂದಿನ ಪುನರ್ವಸತಿ ಹಿತದೃಷ್ಠಿಯಿಂದ ಮಗುವಿನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಆಲ್ಕೊಳ, ಶಿವಮೊಗ್ಗ ಇವರ ಕಛೇರಿಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08182-295511 ಗೆ ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SUMMARY |   Someone left a newborn baby in a bag on Sagara Road,Newborn baby found in shopping bag, Child Welfare Committee

KEY WORDS |  Someone left a newborn baby in a bag on Sagara Road,Newborn baby found in shopping bag, 

Share This Article