ಕಮಲ ಪಾಳಯದಲ್ಲಿ ಕುತೂಹಲ ಮೂಡಿಸಿದ ಕುಮಾರ್‌ ಬಂಗಾರಪ್ಪರ ನಡೆ & ನುಡಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 10, 2024 ‌ 

ಬಸನಗೌಡ ಪಾಟೀಲ್‌ ಯತ್ನಾಳ್‌ ಬಣದಲ್ಲಿ ಗುರಿತಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ನಿನ್ನೆ ದಿನ ಮಾತನಾಡುತ್ತಾ ಕುತೂಹಲಕಾರಿ ವಿಚಾರವೊಂದನ್ನ ಹೊರಹಾಕಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಒಪ್ಪಿಕೊಳ್ಳಲು ಸಿದ್ದ ಎನ್ನುವ ಮೂಲಕ ಅವರು ರಾಜಕಾರಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. 

- Advertisement -

ನಿನ್ನೆ ದಿನ ಅವರು ಸೊರಬದಲ್ಲಿ ಮಾತನಾಡಿ ಮೂರು ದಶಕಗಳ ರಾಜಕೀಯ ಜೀವನದಲ್ಲಿ ರೈತರು ಹಾಗೂ ಜನ ಸಾಮಾನ್ಯರ ಕಲ್ಯಾಣಕ್ಕೆ ಶ್ರಮಿಸಿದ್ದೇನೆ. ವರಿಷ್ಠರು ಬಯಸಿದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ಸಿದ್ಧನಿದ್ದೇನೆ ಎಂದಿದ್ದಾರೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ನಾಯಕರೊಂದಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪದ ಅನುಭವ ತಮಗೂ ಆಗಿದೆ ಎಂದ ಕುಮಾರ್‌ ಬಂಗಾರಪ್ಪ ಅವರ ಕಾರ್ಯವೈಖರಿ ಬಗ್ಗೆ ಬಹುತೇಕ ನಾಯಕರಿಗೆ ಅಸಮಾಧಾನವಿದೆ ಎಂದರು

SUMMARY | Kumar Bangarappa has said that he will handle the post of BJP state president if given the post. B.Y. Vijayendra 

KEY WORDS |  Kumar Bangarappa, post of BJP state president , B.Y. Vijayendra 

Share This Article