ಏಪ್ರಿಲ್‌ 11. ವಸಂತ ವೇದ ಶಿಬಿರ ಹಾಗೂ ವಸಂತ ಸಂಸ್ಕ್ರತಿ ಶಿಬಿರ |  ಏನೆಲ್ಲಾ ಇರುತ್ತೆ ಯಾರೆಲ್ಲಾ ಭಾವಹಿಸಬಹುದು 

Published: 28 ಮಾರ್ಚ್ 2025, 8:25 ಅಪರಾಹ್ನ • 1 min read

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 28, 2025

ಶಿವಮೊಗ್ಗ |  ಜಿಲ್ಲಾ ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ 10 ವರ್ಷ ಮೇಲ್ಪಟ್ಟು 17 ವರ್ಷದಳೊಗಿನ ಉಪನಯನ ಆದ ತ್ರಿಮತಸ್ಥ ವಟುಗಳಿಗೆ ಏಪ್ರಿಲ್‌ 11 ರಿಂದ ಏ.25 ರವರೆಗೆ ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಶಿಬಿರವನ್ನು ಹಾಗೂ 12 ವರ್ಷ ಮೇಲ್ಪಟ್ಟು 17 ವರ್ಷದಳೊಗಿನ ಹೆಣ್ಣು ಮಕ್ಕಳಿಗೆ ಏಪ್ರಿಲ್.11 ರಿಂದ ಏ.20 ರವರೆಗೆ ವಸಂತ ಸಂಸ್ಕೃತಿ ಶಿಬಿರವನ್ನು ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಅಧ್ಯಕ್ಷರು ಕೆ.ಸಿ.ನಟರಾಜ್ ಭಾಗವತ್ ಹೇಳಿದರು.

ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಸಂತ ವೇದ ಶಿಬಿರದಲ್ಲಿ ಸಂಧ್ಯಾವಂದನೆ, ದೇವರ ಪೂಜೆ, ಸಂಸ್ಕೃತ ಸಂಭಾಷಣೆ, ನಿತ್ಯೋಪಯೋಗಿ ಸ್ತೋತ್ರಗಳು, ಸುಭಾಷಿತ, ಭಗವದ್ಗೀತೆ, ಇತಿಹಾಸ ಪುರುಷರ, ಸ್ವಾತಂತ್ರ್ಯ ಯೋಧರ ಹಾಗೂ ಪುರಾಣ ಪ್ರಸಿದ್ದ ಕಥೆಗಳು, ಯೋಗಾಸನ ದೇಸಿ ಕ್ರೀಡೆ ಇನ್ನೂ ಮುಂತಾದ ವಿಷಯಗಳ ಕುರಿತು ಬೋಧಿಸಲಾಗುವುದು ಇರುತ್ತದೆ ಎಂದರು. 

ವಸಂತ ಸಂಸ್ಕೃತಿ  ಶಿಬಿರದಲ್ಲಿ ಸಂಸ್ಕೃತ ಸಂಭಾಷಣೆ, ಪಂಚಾಂಗ ಮಾಹಿತಿ, ನಿತ್ಯೋಪಯೋಗಿ ಸ್ತೋತ್ರಗಳು, ಸುಭಾಷಿತ, ಭಗವದ್ಗೀತೆ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಅತಿಥಿ ಸತ್ಕಾರ, ರಂಗೋಲಿ, ಹೂ ಕಟ್ಟುವುದು, ಇತಿಹಾಸ ಪುರುಷರ ಹಾಗೂ ಇತಿಹಾಸ ಪುರುಷರ, ಸ್ವಾತಂತ್ರ್ಯ ಯೋಧರ ಹಾಗೂ ಪುರಾಣ ಪ್ರಸಿದ್ದ ಕಥೆಗಳು, ಯೋಗಾಸನ, ದೇಶೀಯ ಕ್ರೀಡೆ ಇನ್ನೂ ಮುಂತಾದ ವಿಷಯಗಳ ಕುರಿತು ಬೋಧಿಸಲಾಗುವುದು ಇದಕ್ಕೆ ಭಾಗವಹಿಸಲು ಇಚ್ಚಿಸುವವರು ತಮ್ಮ ತಮ್ಮ ಹೆಸರುಗಳನ್ನು ಏ.08 ಒಳಗಾಗಿ ನೊಂದಾಯಿಸಿಕೊಳ್ಳಬೇಕು ಎಂದರು.

ಹೆಚ್ಚಿನ ಮಾಹಿತಿಗಾಗಿ ವಸಂತ ವೇದ ಶಿಬಿರಕ್ಕೆ ಕಚೇರಿ ಸಿಬ್ಬಂದಿಯಾದ ದಿನಮಣಿ.ಎಂ.ಎಸ್ – 8660135186, ವೇ.ಬ್ರ.ಶ್ರೀ. ಸುದರ್ಶನ ಭಟ್ಟರು – 9483022901, ಯು.ಎಸ್.ಕೇಶವಮೂರ್ತಿ – 9449327686, ಬಿ.ಕೆ.ವೆಂಕಟೇಶಮೂರ್ತಿ – 9449699012, ಎನ್.ವಿ.ಶಂಕರನಾರಾಯಣ – 7829903808 ಹಾಗೂ ವಸಂತ ಸಂಸ್ಕøತಿ ಶಿಬಿರಕ್ಕೆ ಸರಳ ಹೆಗಡೆ – 9945462499, ಸವಿತಾ ಮಾಧವ್ – 9902699882, ಡಾ. ನಾಗಮಣಿ – 9980045317, ಸುಧಾ ಮಾಧವಾಚಾರ್ – 9845887180 ನ್ನೂ ಸಂಪರ್ಕಿಸಬಹುದಾಗಿದೆ ಎಂದರು.

SUMMARY | District Brahmin Mahasabha district president K C Nataraj Bhagwat said the Vasant Samskruti Camp will be organised at Shri Mata Mangalya Mandir from April 11 to April 20.

KEYWORDS | Brahmin Mahasabha, Vasant Samskruti Camp, shivamogga, 

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Ganesh Ajjimane

Senior Journalist | Malenadu Today
✓ Verified Journalist

Authority

Published by: Malenadu Today Editorial Desk
✓ Fact Checked   ✓ Updated   Editorial Policy