ಇನ್ಮುಂದೆ ನಿರಂತರವಾಗಿ ನಡೆಯುತ್ತೆ ‘ಪಬ್ಲಿಕ್ ಐ’: ಸಾರ್ವಜನಿಕ ಸ್ಥಳದಲ್ಲಿ ಎಣ್ಣೆ ಪಾರ್ಟಿ ಮಾಡುವವರಿಗೆ ಎಸ್ಪಿ ಖಡಕ್ ಎಚ್ಚರಿಕೆ
ಶಿವಮೊಗ್ಗ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಗಂಗೂರು ಗ್ರಾಮದ ಹೊರವಲಯದಲ್ಲಿ ಡ್ರೋಣ್ ಹಾರಿಸಿದಾಗ ಮೂವರು ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುವುದು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಎಸ್ಪಿ ನಿಖಿಲ್ ಬಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಗರದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ತಡೆಯುವ ದೃಷ್ಟಿಯಿಂದ ‘ಪಬ್ಲಿಕ್ ಐ’ (Public Eye) ಎಂಬ ಕಾನ್ಸೆಪ್ಟ್ ಅನ್ನು ಜಾರಿಗೆ ತಂದಿದ್ದೇವೆ. ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ, ಅನೈತಿಕ ಚಟುವಟಿಕೆಗಳು ನಡೆಯುವ ಸ್ಥಳಗಳಲ್ಲಿ ನಮ್ಮ ಡ್ರೋನ್‌ಗಳನ್ನು ಹಾರಿಸುವ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ. ಈ ಹಿಂದೆ ಇಂತಹ ಕೃತ್ಯಗಳಿಗೆ ಲಘು ಪ್ರಕರಣಗಳನ್ನು ದಾಖಲಿಸಲಾಗುತ್ತಿತ್ತು. ಆದರೆ ಈಗ ಬೇರೆ ಬೇರೆ ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ದೊಡ್ಡ ಮಟ್ಟದ ಕೇಸ್‌ಗಳನ್ನು ಹಾಕುತ್ತಿದ್ದೇವೆ. ಇನ್ಮುಂದೆ ಇದು ನಿರಂತರವಾಗಿ ನಡೆಯಲಿದೆ,” ಎಂದರು.
“ಈ ಪಬ್ಲಿಕ್ ಐ ಕಾನ್ಸೆಪ್ಟ್ ಬರುವುದಕ್ಕಿಂತ ಮುಂಚೆ ನಾವು ಸ್ಥಳಕ್ಕೆ ತೆರಳಬೇಕಿತ್ತು. ನಾವು ಹೋಗುವಷ್ಟರಲ್ಲಿ ಅವರೆಲ್ಲರೂ ಸ್ಥಳದಿಂದ ಪರಾರಿಯಾಗುತ್ತಿದ್ದರು. ಆದರೆ ಇದರಲ್ಲಿ ಹಾಗೆ ಆಗುವುದಿಲ್ಲ, ಆರೋಪಿಗಳನ್ನು ಪತ್ತೆಹಚ್ಚಲು ನಮಗೆ ಸುಲಭವಾಗುತ್ತಿದೆ. ನಿಮ್ಮೂರಲ್ಲಿ ಯಾರಾದರೂ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೆ, ಕೂಡಲೇ 112 ನಂಬರ್‌ಗೆ ಕರೆ ಮಾಡಿ ದೂರು ನೀಡಬಹುದು,” ಎಂದು ಅವರು ತಿಳಿಸಿದರು.
#Shivamogga, #ShivamoggaPolice, #PublicEye, #DroneSurveillance, #SPNikhilB, #CrimeNews, #KarnatakaPolice, #PublicSafety, #MalenaduToday
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
