kashmir Attack ಉಗ್ರರ ದಾಳಿ ವಿರುದ್ದ ಯೂತ್ ಕಾಂಗ್ರೆಸ್ ಆಕ್ರೋಶ, ಯಾರ್ಯಾರು ಏನು ಹೇಳಿದರು?

ಕೊನೆಯ ನವೀಕರಣ: 24 ಏಪ್ರಿಲ್ 2025, 12:11 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
kashmir Attack
ಯೂತ್ ಕಾಂಗ್ರೆಸ್ ಪ್ರತಿಭಟನೆ

kashmir Attack |  ಕಾಶ್ಮೀರದಲ್ಲಿ ಸಂಭವಿಸಿದ ಟೆರರ್ ಅಟ್ಯಾಕ್ ನಲ್ಲಿ ಸಾವನ್ಮಪ್ಪಿದ ರಾಜ್ಯದ ಮೂವರಿಗೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ  ಶಿವಪ್ಪ ನಾಯಕ ವೃತ್ತ ದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ..

 

ಕಾಶ್ಮೀರದಲ್ಲಿ ನಡೆದ ಭಯೋತ್ಪಾಕರ ದಾಳಿಯಿಂದ ಶಿವಮೊಗ್ಗದ ಮಂಜುನಾಥ್ ಸೇರಿದಂತೆ ಸುಮಾರು 28ಕ್ಕೂ ಹೆಚ್ಚು ಜನ ಹತರಾಗಿದ್ದಾರೆ.

ಈ ಘಟನೆಯನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್ ನಿನ್ನೆ ಕಾಶ್ಮೀರದಲ್ಲಿ ನಡೆದಿರುವ ಘಟನೆ ಅಮಾನವೀಯವಾಗಿದ್ದು, ಇಡೀ ಮನುಕುಲವೇ ತಲೆತಗ್ಗಿಸುವಂತಹ ಘಟನೆಯಾಗಿದೆ ಎಂದರು.

ಯಾವ ಧರ್ಮಗಳೂ ಕೊಲ್ಲಲು ಹೇಳುವುದಿಲ್ಲ. ಕೊಲ್ಲುವವರಿಗೆ ಧರ್ಮವೇ ಇಲ್ಲ. ಮಾನವ ಸಮಾಜ ತಲೆತಗ್ಗಿಸುವಂತಹ ಹೇಯಕೃತ್ಯವಿದು. ಶಿವಮೊಗ್ಗದ ಮಂಜುನಾಥ್ ಕೂಡ ಬಲಿಯಾಗಿದ್ದಾರೆ. ಈ ಕುಟುಂಬದ ಜೊತೆ ನಾವಿರುತ್ತೇವೆ ಎಂದರು.


ಕೇಂದ್ರ ಸರ್ಕಾರ ಉಗ್ರರನ್ನು ತಡೆಯುವಲ್ಲಿ ವಿಫಲವಾಗಿದೆ. ಕಾಶ್ಮೀರ ಭಾಗದಲ್ಲಿ ಉಗ್ರರು ಪದೇ ಪದೇ ದಾಳಿ ನಡೆಸುತ್ತಿದ್ದರೂ ಅವರು ಗಡಿಯಿಂದ ನುಸುಳಿ ಭಾರತಕ್ಕೆ ಬರಲು ಕೇಂದ್ರ ಸರ್ಕಾರದ ರಕ್ಷಣಾ ವೈಫಲ್ಯವೇ ಕಾರಣ ಅಂತ ಕಿಡಿ ಕಾರಿದರು.

HC ಯೋಗೇಶ್ ಮಾತನಾಡಿ ಭಾರತವನ್ನು ಉಗ್ರರಿಂದ ರಕ್ಷಿಸಬೇಕಾಗಿದೆ. ಈ ಕೃತ್ಯ ಎಸಗಿದವರನ್ನು ಗುಂಡಿಕ್ಕಿ ಕೊಲ್ಲಬೇಕು. ಕಾಶ್ಮೀರ ಮತ್ತು ಕೇಂದ್ರ ಸರ್ಕಾರ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.


ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್ ರಮೇಶ್ ಮಾತನಾಡಿ ಇಂತಹ ಭಯೋತ್ಪಾದಕ ಚಟುವಟಿಕೆ ನಡೆದಾಗ ಇಂತಹ ಕೇಂದ್ರ ನಾಯಕರ ಹೇಳಿಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

kashmir Attack


ನಿನ್ನೆಯ ಘಟನೆಗೆ ಕೇಂದ್ರ ಸರಕಾರದ ಮೃದುಧೋರಣೆಯೇ ಕಾರಣ ಆಗಿದೆ. ಕಾಶ್ಮೀರದಲ್ಲಿ ಕಠಿಣ ಕ್ರಮಕ್ಕೆ ಎರಡೂ ಸರ್ಕಾರ ಮುಂದಾಗಬೇಕು. ಜಮ್ಮು ಕಾಶ್ಮೀರದ ಪೂರ್ಣ ಅಧಿಕಾರ ಕೇಂದ್ರದ ಕೈಯಲ್ಲಿ ಇದೆ.

ಕೇಂದ್ರ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕಾಶ್ಮೀರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿರುವುದಲ್ಲದೇ ನಿನ್ನೆಯ ಘಟನೆಗೆ ಧರ್ಮದ ಲೇಪ ಬಳಿಯುವ ಪ್ರಯತ್ನ ನಡೆಸುತ್ತಿದೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.


 ಈ ಸಂದರ್ಭದಲ್ಲಿ ರಮೇಶ್ ಹೆಗಡೆ ಅವರು ಮಾತನಾಡಿ ಕೂಡಲೇ ಕೇಂದ್ರ ಸರ್ಕಾರ ಉಗ್ರರ ಸದೆಬಡೆಯಲು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು

ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್, ಮಧುಸೂದನ್, ಚೇತನ್, ಅಕ್ಬರ್,ಇಮ್ರಾನ್, ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಚರಣ್, ಬಾಲಾಜಿ, ಪ್ರವೀಣ್, ಶಿವಕುಮಾರ್, ಸಕ್ಲೇನ್,ಅಬ್ದುಲ್ ಸತ್ತಾರ್,ಧನುಷ್, ಅನಿಲ್ ಪಾಟೀಲ್ ಅಶೋಕ್, ಮಲವಗೊಪ್ಪ ಶಿವು ಗೌತಮ್ NSUI ಜಿಲ್ಲಾಧ್ಯಕ್ಷ ವಿಜಯ, ರವಿ ಕಾಟಿಕೆರೆ, ಚಂದ್ರೋ ಜಿ ರಾವ್, ಫಾರಂಡ್, ಸುಭಾನ್ ಸಾಕಷ್ಟು ಯುವಕರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು. 

kashmir Attack

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor