ತೀರ್ಥಹಳ್ಳಿಯಲ್ಲಿ ಹಾವು ಕಚ್ಚಿ ಮಹಿಳೆ ಸಾವು! ಸಾಗರದಲ್ಲಿ ಒಮಿನಿಗೆ ಸೈಕಲ್ ಸವಾರ ಬಲಿ!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Aug 2, 2023 SHIVAMOGGA NEWS

ಹಾವು ಕಚ್ಚಿ ಮಹಿಳೆ ಸಾವು

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನಕುರುವಳ್ಳಿ (Melinkuravalli) ಯಲ್ಲಿ ಮಹಿಳೆಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ನಿನ್ನೆ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಇಲ್ಲಿನ ಪಂಚಾಯ್ತಿ ಸದಸ್ಯ ಗೋಪಾಲ್ ಪೂಜಾರಿಯವರ ಪುತ್ರಿ ಪೂರ್ಣಿಮಾ ಮೃತ ಮಹಿಳೆ. ಮನೆಯ ಹಿಂಭಾಗದಲ್ಲಿದ್ದ ಗಿಡಗಂಟಿಗಳನ್ನ ಕೀಳುತ್ತಿದ್ದ ವೇಳೆ ಪೂರ್ಣಿಮಾರವರಿಗೆ ಹಾವು ಕಚ್ಚಿದೆ. ತಕ್ಷಣವೇ  ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆ.  

ಒಮಿನಿ ಡಿಕ್ಕಿ ಸೈಕಲ್ ಸವಾರ ಸಾವು

ಸಾಗರ ತಾಲ್ಲೂಕಿನಲ್ಲಿ  ಓಮಿನಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.ಇಲ್ಲಿನ  ಕೆಳದಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.  ಶ್ರೀಧರ್ (55) ಮೃತಪಟ್ಟವರು.  ಸೈಕಲ್‌ನಲ್ಲಿ ಸಮೀಪದಲ್ಲಿರುವ ತಮ್ಮ ಜಮೀನಿಗೆ ಹೋಗಿ,  ನೀರು ಕಟ್ಟಿ ವಾಪಾಸ್ ಬರುತ್ತಿದ್ದ ವೇಳೆ ಓಮಿನಿ ಡಿಕ್ಕಿ ಹೊಡೆಡಿದೆ. ಇನ್ನೂ ಘಟನೆ ಬೆನ್ನಲ್ಲೆ ಒಮಿನಿ ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ  ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 

Malenadu Today Shivamogga

 ​ 

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor