ಧರ್ಮಸ್ಥಳದ ಆಣೆ ಬೇಡ ಎನ್ನುತ್ತಲೇ! 17 ಶಾಸಕರ ಖರೀದಿ ಸತ್ಯ ಹೇಳಿದ ಕೆಎಸ್​ ಈಶ್ವರಪ್ಪ! ರಾಜಕೀಯ ಸಂಚಲನ

ಹಂಚಿಕೊಳ್ಳಿ
WhatsApp Facebook X Telegram
Why did former Deputy CM K.S. Eshwarappa express dissatisfaction
Why did former Deputy CM K.S. Eshwarappa express dissatisfaction

Eshwarappa / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ಪ್ರೆಸ್​ ಟ್ರಸ್ಟ್​ ಭವನದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡ್ತಾ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪವರು (Eshwarappa)ಸಹ ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಹಿಂದಿನ ಪಕ್ಷ ಬಿಜೆಪಿ ಶಾಸಕಾಂಗ ಸಭೆಯನ್ನು ಧರ್ಮಸ್ಥಳದಲ್ಲಿ ಕರೆದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಧರ್ಮಸ್ಥಳ ಭಕ್ತಿ ಮತ್ತು ಶಕ್ತಿಯ ಕೇಂದ್ರದಲ್ಲಿ ಯಾವ ರಾಜಕಾರಣಿಗಳು ಸಹ ಆಣೆ, ಪ್ರಮಾಣಕ್ಕೆ ಸಂಬಂಧಿಸಿ ದಂತೆ ತಮ್ಮ ಚಟುವಟಿಕೆಗಳನ್ನು ನಡೆಸಬಾರದು, ಭಕ್ತಿಯನ್ನು ಓರೆಗೆ ಹಚ್ಚುವುದು ಮಹಾಪಾಪ ಅಂಥಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಡ್ಡ ಮತನಾನ ನಡೆದಿರುವುದು ಸ್ಪಷ್ಟ, ಇದು ಭ್ರಷ್ಟಾಚಾರದ ಮುಂದುವರಿದ ಭಾಗ, ಹಾಗಂತ ಯಾರು ಅಡ್ಡಮತ ಹಾಕಿದ್ದಾರೆ ಎಂದು ಕಂಡು ಹಿಡಿಯಲು ಧರ್ಮಸ್ಥಳಕ್ಕೆ ಕರೆದು ಪ್ರಮಾಣ ಮಾಡುವಂತೆ ಹೇಳುವುದು ಸರಿಯಲ್ಲಿ, ಭಕ್ತಿಯ ಕೇಂದ್ರವನ್ನು ಕನಿಷ್ಟ ಮಟ್ಟಕ್ಕೆ ಇಳಿಸಬಾರದು ಎಂದು ಸಲಹೆ ನೀಡಿದ ಮಾಜಿ ಡಿಸಿಎಂಶಿವಮೊಗ್ಗದೆ ಆದ ಉದಾಹರಣೆಯೊಂದನ್ನು ನೀಡಿದರು.

ಹಿಂದೊಮ್ಮೆ ಶಿವಮೊಗ್ಗ ನಗರಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೋರ್ವ ಐದು ರೂ.ಕೊಟ್ಟು ಸಿಗಂದೂರು ದೇವಿಯ ಭಾವಚಿತ್ರ ಇಟ್ಟು ಮತಹಾಕುವಂತೆ ಕೋರಿದ್ದರು. ಅವರ ಬಳಿಕ ಎದುರಾಳಿ ಅಭ್ಯರ್ಥಿ ಮಾರಿಕಾಂಬೆಯ ಫೋಟೋ ಕೊಟ್ಟು 10 ರೂ.ಕೊಟ್ಟ ಮತದಾರರಿಗೆ ನೀಡಿದ್ದರು. ಮತದಾರರು 10 ರೂ.ಕೊಟ್ಟ ಅಭ್ಯರ್ಥಿಗೇ ಓಟು ಹಾಕಿದರು. 10 ರೂ. ಕೊಟ್ಟವನೇ ಗೆದ್ದು ಬಂದಿದ್ದ.

ಕೆಎಸ್​ ಈಶ್ವರಪ್ಪ, ಮಾಜಿ ಡಿಸಿಎಂ

ಬಿಜೆಪಿ ಶಾಸಕರನ್ನ ಖರೀದಿಸಿತ್ತು

ಇನ್ನೂ ಇದೇ ಸುದ್ದಿಗೋಷ್ಟಿಯಲ್ಲಿ ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭವನ್ನು ನೆನೆದ ಕೆಎಸ್​ ಈಶ್ವರಪ್ಪ ಅಂದು ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಖರೀದಿಸಿದ್ದು ನಿಜ . ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್‌ನ 17 ಶಾಸಕರು ಬಂದಿದ್ದು ನಿಜ. ಇವರಿಗೆ ಬಿಜೆಪಿಯವರು ಹಣಕೊಟ್ಟಿದ್ದು ನಿಜ. ಮತ್ತೆ
ಚುನಾವಣೆಗೆ ನಿಲ್ಲಿಸಿ ಹಣ ಖರ್ಚುಮಾಡಿ ಗೆಲ್ಲಿಸಿದ್ದು ನಿಜ ಎಂದ ಅವರು, ಆ ರೀತಿ ಮಾಡಿದ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಸೋಲಬೇಕಾಯ್ತು ಅಂತಾ ವಿವರಿಸಿದರು. ಅಲ್ಲದೆ ವಿಧಾನ ಪರಿಷತ್ ಚುನಾವಣೆಯಲ್ಲಿ ಹಣ ಪಡೆದು ಅಡ್ಡಮತ ಹಾಕಿದ ಮತ್ತು ಹಣ ಕೊಟ್ಟಿದ್ದು ಕೂಡ ಭ್ರಷ್ಟಾಚಾರದ ಭಾಗವೇ ಆಗಿದೆ ಅಂತಾ ಟೀಕಿಸಿದರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor