ಚುನಾವಣೆಯ ಒಳಗೆ ಮಸೀದಿ- ಮಂದಿರ ಮಲಿನವಾಗುತ್ತೆ ಅಂತ ಆಯನೂರು ಮಂಜುನಾಥ್ ಭವಿಷ್ಯ ನುಡಿದಿದ್ದೇಕೆ? ನಡೆದಿದ್ದೇನು? ನಡೆಯುತ್ತಿರುವುದೇನು? ನಡೆವುದೇನು?

ಶಿವಮೊಗ್ಗದಲ್ಲಿ ವಿಧಾನಸಭೆ ಚುನಾವಣೆಯ ಒಳಗೆ ಮಸೀದಿ ಅಥವಾ ಮಂದಿರ ಮಲಿನವಾಗುತ್ತೆ ಅಂತ ಆಯನೂರು ಮಂಜುನಾಥ್ ಭವಿಷ್ಯ ನುಡಿದ್ದು ಏಕೆ? ಇದು ಶಿವಮೊಗ್ಗ ಪೊಲೀಸ್ರಿಗೆ ಜಾಗೃತಿಯ ಸಂದೇಶವೇ 

ಹೌದು ಈ ಒಂದು ಪ್ರಶ್ನೆ , ಪೊಲೀಸ್​ ಇಲಾಖೆಯ ಅಲರ್ಟ್​ನೆಸ್​​ಗೆ ಮತ್ತಷ್ಟು ಶಾರ್ಪ್​ನೆಸ್​ ಕೊಟ್ಟಿದೆ. ಸದ್ಯ ಬಿಜೆಪಿಯ ಬಂಡಾಯಗಾರ ಆಯನೂರು ಮಂಜುನಾಥ್ ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪನವರು ವಿರುದ್ಧ ವಾಗ್ವಾಳಿ ನಡೆಸ್ತಾ,  ಶಿವಮೊಗ್ಗ ನಗರದಲ್ಲಿ ಕೋಮು ಭಾವನೆ ಕೇಳಿಸುವಂತಹ ಘಟನೆಗಳು ನಡೆಯುತ್ತವೆ ಎಂಬ ಮಾಹಿತಿ ನನಗಿದೆ ಶಿವಮೊಗ್ಗದಲ್ಲಿ ಮಂದಿರವಾಗಲಿ ಅಥವಾ ಮಸೀದಿಯಾಗಲಿ ಮಲಿನವಾಗುವ ಸಾಧ್ಯತೆ ಇದೆ. ಅಂತಹ ಘಟನೆ ನಡೆಯದಿರಲಿ, ಹಾಗಿದ್ದೂ ಸಹ ಹಿಂದು ಮತ್ತು ಮುಸ್ಲಿಂ ಸಮುದಾಯದವರು ಈ ಬಗ್ಗೆ ತಾಳ್ಮೆಯನ್ನು ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದ್ದರು

ಬಿಜೆಪಿಯ ಬಂಡಾಯಗಾರ ಆಯನೂರು ಮಂಜುನಾಥ್​

ಶಿವಮೊಗ್ಗದಲ್ಲಿ  ಗಂಭೀರ ಸ್ವರೂಪದ ಮಾತುಗಳು ಪ್ರತಿಕ್ರಿಯೆ ರೂಪದಲ್ಲಿಯು ಸಹ ಹೊರಬರುತ್ತಿರಲಿಲ್ಲ. ಅದರ ಹಿಂದಿನ ಕಾರಣವೇನಿತ್ತೋ ಗೊತ್ತಿಲ್ಲ. ಆದರೆ ಆಯನೂರು ಮಂಜುನಾಥ್​ರ ಬಂಡಾಯ ಅವರೊಬ್ಬರು ಸಿಡಿದು ಮಾತನಾಡುವಂತೆ ಮಾಡಲಿಲ್ಲ. ಬದಲಾಗಿ ಸುಮ್ಮನಿದ್ದ ಅಪಸ್ವರಗಳಿಗೂ ಧ್ವನಿ ಮೂಡುವಂತೆ. ಇದು ಸದ್ಯ ಶಿವಮೊಗ್ಗ ಸಿಟಿಯ ರಾಜಕಾರಣದಲ್ಲಷ್ಟೆ ಅಲ್ಲದೆ, ಸಾಮಾಜಿಕ ವ್ಯವಸ್ಥೆಯಲ್ಲಿಯು ಸಾಕಷ್ಟು ತೀವ್ರ ಚರ್ಚೆ ಹುಟ್ಟುಹಾಕಿದೆ.  ಯಾವಾಗ ಆಯನೂರು ಮಂಜುನಾಥ್​ರ ನೇರ ಮಾತಿನ ಬಾಣ, ಈಶ್ವರಪ್ಪನವರ ಬತ್ತಳಿಕೆಗೆ ಬಂದು ಬಿತ್ತೋ ಇತ್ತ ಕಾಂಗ್ರೆಸ್​ ನಾಯಕರು ಸಹ  ಹೌದೌದು ಎನ್ನಲು ಆರಂಭಿಸಿದ್ದಾರೆ. 

ಮಂಜಣ್ಣನ ಮಾತಿನ ಬೆನ್ನಲ್ಲೆ ಸಿಡಿದೆದ್ದ ಕಾಂಗ್ರೆಸ್​ !?

ನಿಮ್ಮದೆ ಪಕ್ಷದ ಮುಖಂಡರು ಹೀಗೆ ಹೇಳುತ್ತಿದ್ದಾರಲ್ಲವೇ? ಏನು ಹೇಳುತ್ತೀರಿ ಎಂದು ಹಾಲಿ ಶಾಸಕರನ್ನ ಕಾಂಗ್ರೆಸ್​ ಮುಖಂಡರು ಪ್ರಶ್ನಿಸಲು ಆರಂಭಿಸಿದ್ದಾರೆ. ಅಲ್ಲದೆ ಪೊಲೀಸರೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯವಿಟ್ಟಿದ್ದಾರೆ. ಮಂಜಣ್ಣನ ಮಾತಿನ ಪ್ರಖರತೆಯ ರಾಜಕೀಯ ಪರಿಣಾಮ ಇದಾದರೆ, ಇತ್ತ ಶಿವಮೊಗ್ಗದ ಗಲ್ಲಿಗಳಲ್ಲಿ ಈ ವಿಚಾರ ಚರ್ಚೆಗೆ ಇಳಿದಿದೆ. ಪರ-ವಿರೋಧ-ಸಮತೋಲನದ ವಾದಗಳು, ವಾಗ್ವಾದಗಳು, ವಿವಾದಗಳು ಜನರ ಮಾತುಗಳಲ್ಲಿ ಹೊರಬರುತ್ತಿದೆ.

ಹಾಗಾದರೆ ಆಯನೂರು ಮಂಜುನಾಥ್ ಈ ಆರೋಪ ಮಾಡಲು ಕಾರಣವಿದೆಯ?  ಕೇವಲ ರಾಜಕಾರಣಕೋಸ್ಕರ ಈ ಆರೋಪ ಮಾಡಿದಿರಾ ? ಎಂಬ ಪ್ರಶ್ನೆಯನ್ನು ಅವಲೋಕಿಸುತ್ತಾ ಹೋದರೆ ಎಲ್ಲೋ ಒಂದು ರೀತಿಯಲ್ಲಿ ಅವರ ಮಾತು ಸತ್ಯಕ್ಕೆ ಸನಿಹವಾದ್ದು ಎಂಬ ಯೋಚನೆ ಬರುತ್ತದೆ. ಇದಕ್ಕೆ ಕಾರಣ  ವಿತಿನ್ ಶಾರ್ಟ್ ಪಿರಿಡ್​ನಲ್ಲಿ ಶಿವಮೊಗ್ಗ ಪೊಲೀಸರು ಕೈಗೊಳ್ಳುತ್ತಿರುವ ಸೈಲೆಂಟ್​ ಆಪರೇಷನ್​! 

ಪ್ರತೀಕಾರ ಸ್ಕೆಚ್​ ಫೇಲ್​ ಮಾಡಿದ್ದ ಲಕ್ಷ್ಮೀಪ್ರಸಾದ್​ 

ಹಿಂದೂ ಹರ್ಷನ ಕೊಲೆಯ ನಂತರ,  ಶಿವಮೊಗ್ಗ ನಗರದಲ್ಲಿ ತೆರೆಮರೆಯಲ್ಲಿ ಸಾಕಷ್ಟು ಕಸರತ್ತುಗಳು ನಡೆದಿದೆ ಹಾಗೂ ನಡೆಯುತ್ತಿದೆ. ಇದೇ ಕಾರಣಕ್ಕಾಗಿ ಇದೆ ಉದ್ದೇಶಕ್ಕಾಗಿ ನಡೆಯುತ್ತಿದೆ ಎಂಬುದನ್ನ ಹೇಳಲಾಗದು ಎನ್ನುತ್ತದೆ ಗುಪ್ತ ಮೂಲಗಳು. ಹಾಗಿದ್ದು ಯಾವುದೋ ಉದ್ದೇಶಕ್ಕಾಗಿ ನಡೆಯುತ್ತಿರುವ ಘಟನೆಗಳನ್ನು ಶಿವಮೊಗ್ಗ ಪೊಲೀಸರು ಗೊತ್ತೆ ಆಗದಂತೆ ಮಟ್ಟ ಹಾಕುತ್ತಿದ್ದಾರೆ. ಮೊದಲ ಸಾಕ್ಷಿ ಎಂದು ತೆಗೆದುಕೊಳ್ಳುವುದಾದರೆ,  ಹಿಂದೆ ಎಸ್ಪಿ ಯಾಗಿದ್ದ ಲಕ್ಷ್ಮಿ ಪ್ರಸಾದ್  ಹರ್ಷ ಕೊಲೆಯ ನಂತರ ಅದರ ಪ್ರತಿಕಾರಕ್ಕಾಗಿ ನಡೆದಿದ್ದ ಒಂದು ಸ್ಕೆಚ್​ನ್ನ ಫೇಲ್​ ಮಾಡಿದ್ದರು. ಖದ್ದು ಫಿಲ್ಡಿಗಿಳಿದಿದ್ದ ಅವರು ಸಂಭಾವ್ಯ ಕ್ರೈವೊಂದನ್ನ ತಪ್ಪಿಸಿದ್ದರು. ಪ್ರಭಾವಳಿಗೆ ಒಳಗಾಗುವುದಕ್ಕೂ ಮೊದಲೇ ಕೇಸ್​ ದರ್ಜ್​ ಮಾಡಿದ್ದ ಅವರ ಕಾರ್ಯವೈಖರಿ ಜನರಿಂದಲೇ ಬೇಶ್​ ಎನಿಸಿಕೊಂಡಿತ್ತು. 

ತಿಂಗಳು ಪೂರ್ತಿ ಕಾರ್ಯಾಚರಣೆ ನಡೆಸಿದ್ದ ಮಿಥುನ್ ಕುಮಾರ್​ 

ಅವರ ನಂತರ ಬಂದ ಎಸ್ಪಿ ಮಿಥುನ್ ಕುಮಾರ್ ಶಿವಮೊಗ್ಗಕ್ಕೆ ಬಂದ ನಂತರ ಇದೇ ರೀತಿಯ ಮತ್ತೊಂದು ದ್ವೇಷ ಪ್ರತೀಕಾರದ ಸ್ಕೆಚ್​ವೊಂದನ್ನ ಫೇಲ್​ ಮಾಡಿದ್ದರು,  ಒಂದು ತಿಂಗಳ ಕಾಲ ಆರೋಪಿಗಳ ಬೆನ್ನು ಬಿದ್ದ ಎಸ್ ಪಿ ಮಿಥುನ್ ಕುಮಾರ್ ಈ ಕೊಲೆಗೆ ಸ್ಕೆಚ್ ಹಾಕಿದ ಎಲ್ಲಾ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.  ಎಷ್ಟರಮಟ್ಟಿಗೆ ಎಂದರೆ,  ಕೋಮುವಾದ ಎನ್ನುವ ಅನ್ನುವ ಪದ ಶಿವಮೊಗ್ಗದ ಜನತೆಯ ಕಿವಿಗೆ ಬೀಳದಿರಲಿ ಎಂಬ ಉದ್ದೇಶದಿಂದ ಎಸ್ ಪಿ  ಮಿಥುನ್ ಕುಮಾರ್ ಆ ಪ್ರಕರಣವನ್ನು ಪೊಲೀಸ್​  ಸ್ಟೈಲ್​ನಲ್ಲಿಯೇ ಹ್ಯಾಂಡಲ್​ ಮಾಡಿದ್ದರು. 

24 ಗಂಟೆ ಡ್ಯೂಟಿಯಲ್ಲಿ ಪೊಲೀಸ್ ಇಲಾಖೆ

ಖಡಕ್​ ಎಸ್​ಪಿಗಳ ಸೋಶಿಯಲ್​ ಕಾಸ್​ನ ಜೊತೆ ,ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿರುವ ಖಾಕಿ ಪಡೆಯು ಸಹ ನಗರದ ಶಾಂತಿಗಾಗಿ 24 ಗಂಟೆ ಡ್ಯೂಟಿ ಮಾಡುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಶಿವಮೊಗ್ಗದ ಪರಿಚಯಸ್ತ ಪೊಲೀಸರು ಬಂದೋಬಸ್ತ್​ನ ಜವಾಬ್ದಾರಿ ವಹಿಸಿದ್ದರೇ, ಇತ್ತ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಶಾಂತಿಯುತ ಚುನಾವಣೆಗಾಗಿ ನಿಯೋಜಿಸಲಾಗಿದೆ. 

ಬಹುಶಃ ಪೊಲೀಸ್​ ಇಲಾಖೆಯ ಕಾರ್ಯಾಚರಣೆಯ ಹಿನ್ನೆಲೆ ಮುನ್ನಲೆಯನ್ನು ಅರಿತೇ ಆಯನೂರು ಮಂಜುನಾಥ್​ ರವರು ‘ಮಲೀನ’ ಎಂಬ ಮಾತನಾಡಿದ್ದಾರಾ? ಗೊತ್ತಿಲ್ಲ. ಆದರೆ ಅವರಿಂದ ಮಾತು ಹೊಮ್ಮಿದೆ, ಪೊಲೀಸ್ ಇಲಾಖೆಗೆ ಅದಕ್ಕೂ ಮೊದಲೇ ಅಲರ್ಟ್ ಆಗಿದೆ ಎಂಬುದು ಸತ್ಯ. ಅಡಿಷನಲ್​ ವಿಚಾರ ಅಂದರೆ,  ಆಯನೂರು ಮಂಜುನಾಥ್ ಹೇಳಿಕೆ ಪೊಲೀಸರನ್ನು ಈಗ ಮತ್ತಷ್ಟು ಜಾಗೃತಗೊಳಿಸಿದೆ. ಚುನಾವಣೆಯೊಳಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೆಕಿದೆ. ಈ ನಿಟ್ಟಿನಲ್ಲಿ ಇಲಾಖೆ ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ.  

ಇದನ್ನು ಸಹ ಓದಿ

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

 

MALENADUTODAY.COM/ SHIVAMOGGA / KARNATAKA WEB NEWS

HASHTAGS

Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite MalenaduToday.com Malenadu today Malenadu Postbox kannnadaKarnataka Elections, Karnataka Assembly Elections, Karnataka Vote, Shivamogga City Constituency, Shivamogga City, Ayanur Manjunath, K E Kanthesh, Hindu Harsha, KS Eshwarappa, Congress leaders, Shivamogga Congress, Shivamogga BJP, Shivamogga JD(S), Shivamogga JD(S), Shivamogga Elections, SP Mithun Kumar, SP Lakshmiprasad, Shivamogga Police ಕರ್ನಾಟಕ ಎಲೆಕ್ಷನ್, ಕರ್ನಾಟಕ ವಿಧಾನಸಭಾ ಚುನಾವಣೆ, ಕರ್ನಾಟಕ ವೋಟ್,ಶಿವಮೊಗ್ಗ ನಗರ ಕ್ಷೇತ್ರ, ಶಿವಮೊಗ್ಗ ಸಿಟಿ , ಆಯನೂರು ಮಂಜುನಾಥ್​, ಕೆಇ ಕಾಂತೇಶ್, ಹಿಂದೂ ಹರ್ಷ, ಕೆಎಸ್​ ಈಶ್ವರಪ್ಪ, ಕಾಂಗ್ರೆಸ್ ನಾಯಕರು, ಶಿವಮೊಗ್ಗ ಕಾಂಗ್ರೆಸ್ , ಶಿವಮೊಗ್ಗ ಬಿಜೆಪಿ, ಶಿವಮೊಗ್ಗ ಜೆಡಿಎಸ್​, ಶಿವಮೊಗ್ಗ ಚುನಾವಣೆ, ಎಸ್​ಪಿ ಮಿಥುನ್ ಕುಮಾರ್, ಎಸ್​ಪಿ ಲಕ್ಷ್ಮೀಪ್ರಸಾದ್​, ಶಿವಮೊಗ್ಗ ಪೊಲೀಸ್​

Leave a Comment