ಹೊಸ ವರ್ಷ ಆಚರಣೆಗೆ ಎಸ್​ಪಿ ಸೂಚನೆ ಏನು? ಎಷ್ಟೊತ್ತಿನವರೆಗೂ ಸಂಭ್ರಮ ಆಚರಿಸಬಹುದು? ರೂಲ್ಸ್​ ಏನಿದೆ? ಡಿಟೇಲ್ಸ್ ಓದಿ

ಇವತ್ತು ರಾತ್ರಿ ಹೊಸ ವರ್ಷ ಆಚರಣೆ (new year celebration) ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ಸೂಕ್ತ ಭದ್ರತೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಸಂಭ್ರಮಕ್ಕೆ ದಕ್ಕೆಯಾಗದಂತೆ ಕೆಲವೊಂದು ನಿಯಮಗಳನ್ನು ಸಹ ವಿಧಿಸಿದೆ. ಈ ಸಂಬಂಧ ಮಾತನಾಡಿರುವ ಎಸ್​ಪಿ ಮಿಥುನ್ ಕುಮಾರ್ (SP mithun kumar) ಹೊಸವರ್ಷ ಆಚರಣೆಯು ಸಂಭ್ರಮದಿಂದ ಕೂಡಿರಲಿ, ಆದರೆ ಅಂತಹ ಸಂದರ್ಭದಲ್ಲಿ ನ್ಯೂಸೆನ್ಸ್​ ಆಗಬಾರದು, ಆ ರೀತಿ ಆದಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಜನರ ಸಂಭ್ರಮ ಸಡಗರಕ್ಕೆ ಡಿಸ್ಟರ್ಬ್​ ಮಾಡುವುದಿಲ್ಲ ಎಂದಿದ್ಧಾರೆ. 

ತೀರ್ಥಹಳ್ಳಿ ಸುದ್ದಿ : BREAKING NEWS/ ನಸುಕಿನಲ್ಲಿ ತೀರ್ಥಹಳ್ಳಿ ಪೇಟೆಗೆ ಬಂದ ಕಾಡಾನೆ

ಇನ್ನೂ ಹೊಸವರ್ಷ ಆಚರಣೆ ಸಂಬಂಧ ಈಗಾಗಲೇ ಹೋಟೆಲ್​ ಕ್ಲಬ್​ ಹಾಗೂ ರೆಸಾರ್ಟ್​ ಮಾಲೀಕರು ಸಭೆಗಳನ್ನು ನಡೆಸಿರುವ ಪೊಲೀಸ್ ಇಲಾಖೆ (shivamogga news )ಈ ಕೆಳಕಂಡ ಸೂಚನೆಗಳನ್ನು ನೀಡಿದೆ. 

ಆಕಾಶದಲ್ಲಿ ಬೆಳಕು: ಶಿವಮೊಗ್ಗದಲ್ಲಿಯು ಕಾಣಿಸಿದ ಆಕಾಶದ ಸೀರಿಯಲ್​ ಸೆಟ್​/ ಏನಿದರ ರಹಸ್ಯ ಗೊತ್ತಾ?

  • 1) ಸರ್ಕಾರದ ಆದೇಶದ ಅನ್ವಯ ಹೊಸ ವರ್ಷ ಆಚರಣೆಯನ್ನು ತಡರಾತ್ರಿ 01:00 ಗಂಟೆಯ ಒಳಗಾಗಿ ಮುಕ್ತಾಯಗೊಳಿಸುವುದು. 
  • 2) ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸುವ ಮಕ್ಕಳು, ವೃದ್ಧರು ಮತ್ತು ಮಹಿಳೆಯರ ಸುರಕ್ಷತೆಯ ಕುರಿತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು. 
  • 3) ಸಂಭ್ರಮಾಚರಣೆಯ ವೇಳೆ ಯಾವುದೇ ರೀತಿಯ  ಮಾದಕ ವಸ್ತುಗಳನ್ನು ಬಳಸಬಾರದು.
  • 4) ಮಧ್ಯ ಮಾರಾಟವನ್ನು ರಾತ್ರಿ 11:30 ರ ವರೆಗೆ ಮಾತ್ರ ಮಾಡುವುದು.
  • 5) ಮಧ್ಯಪಾನ ಮಾಡಿ ವಾಹನವನ್ನು ಚಾಲನೆ ಮಾಡದೇ, ಮಧ್ಯಪಾನ ಮಾಡದೇ ಇರುವವರು ಚಾಲನೆ ಮಾಡುವುದು. 
  • 6) ನಿಗದಿ ಪಡಿಸಿದ ಶಬ್ದ ಮಿತಿಯನ್ನು ಮೀರಿ ಸೌಂಡ್ ಸಿಸ್ಟಂ ಗಳನ್ನು ಬಳಸುವಂತಿಲ್ಲ.
  • 7) ಸಂಭ್ರಮಾಚರಣೆಗೆ ಬರುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ವ್ಯವಸ್ಥಿತವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು.
  • 8) ಗುಂಪನ್ನು ನಿಯಂತ್ರಿಸುವ ಸಂಬಂಧ ಒಂದಕ್ಕಿಂತ ಹೆಚ್ಚು ಪ್ರವೇಶ ದ್ವಾರಗಳನ್ನು ನಿರ್ಮಿಸುವುದು.
  • 9) ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಬಳಸುವುದು.
  • 10) 60 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸದೇ ಇರುವುದು ಸೂಕ್ತವಾಗಿರುತ್ತದೆ.
  • 11) ನೋ ಮಾಸ್ಕ್ ನೋ ಎಂಟ್ರಿ ಬೋರ್ಡ್ ಗಳನ್ನು ಸಾರ್ವಜನಿಕರವಾಗಿ ಎದ್ದು ಕಾಣುವ ರೀತಿಯಲ್ಲಿ ಹಾಕುವುದು. 
  • 12) ಹೊಸ ವರ್ಷ ಆಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಾರ್ವಜನಿಕರಿಗೂ ಕಡ್ಡಾಯವಾಗಿ ಥರ್ಮಲ್ ಸ್ರ್ಕೀನಿಂಗ್ ಗೆ ಒಳಪಡಿಸುವುದು. 
  • 13) ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ/ ಪೊಲೀಸ್ ಕಂಟ್ರೋಲ್ ರೂಂ ನಂಬರ್: 9480803300 / 08182-261413 ಅಥವಾ ತುರ್ತು ಸಹಾಯವಾಣಿ  112 ಗೆ ಕರೆ ಮಾಡುವುದು.

ಇದನ್ನು ಸಹ ಓದಿ: ಬೈಕ್​ ಓಡಿಸುವ ಮಕ್ಕಳ ಪೋಷಕರಿಗೆ ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು? ಹೆತ್ತವರಿಗೆ ಎಚ್ಚರಿಕೆ ಸಂದೇಶ

ಇದಷ್ಟೆ ಅಲ್ಲದೆ ಹೊಸ ವರ್ಷ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರ ಗಸ್ತು ಮತ್ತು ನಾಕಬಂದಿ ಹಾಕಲಾಗುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆಯಷ್ಟೆ ಅಲ್ಲದೆ ಕೋವಿಡ್ ಸಂಬಂಧಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡುತ್ತಿದೆ. 

ಕೆಲವೆಡೆ 60 ಸೆಕೆಂಡ್, ಕೆಲವಡೆ 15 ಸೆಕೆಂಡ್/ ಸರ್ಕಲ್​​ಗಳಲ್ಲಿ ಟ್ರಾಫಿಕ್ ಸಿಗ್ನಲ್​ ಗೊಂದಲಗಳಿಗೆ ಎಸ್​ಪಿ ಮಿಥುನ್ ಕುಮಾರ್​ ಕೊಟ್ಟ ಉತ್ತರ ಇಲ್ಲಿದೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Leave a Comment