ಸಹೋದರ, ಸರ್ಕಾರಿ ಮತ್ತು ನಮೋ ಭಿನ್ನಮತ/ ಸೊರಬ ಎಲೆಕ್ಷನ್​ ಅಶ್ವಮೇದದಲ್ಲಿ ಕುಮಾರ್ ಬಂಗಾರಪ್ಪರವರಿಗೆ ಇರುವ ಸವಾಲ್​ಗಳೇನು? JP Story

ಹೃದಯ ಸಮುದ್ರ ಕಲುಕಿದ ಕುಮಾರ್ ಬಂಗಾರಪ್ಪ, ಶರವೇಗದಲ್ಲಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತಾರಾ? ನವತಾರೆಯಾಗಿ ಅಖಾಡಕ್ಕೆ ಎಂಟ್ರಿಕೊಡ್ತಾರಾ? ಸೊರಬ ಬಿಜೆಪಿಯಲ್ಲಿನ ಭಿನ್ನಮತ,  ನಮೋ ವೇದಿಕೆಯ ಠಕ್ಕರ್, ಶಾಸಕ ಕುಮಾರ್ ಬಂಗಾರಪ್ಪರಿಗೆ ವರವೋ ಶಾಪವೋ…ಗುಪ್ತಗಾಮಿನಿಯಾಗಿರುವ  ಸರ್ಕಾರಿ ನೌಕರರ ಮತಗಳು ಯಾರಿಗೆ ಮಣೆಹಾಕಬಹುದು?

ಯಾವುದೇ ಚುನಾವಣೆ ಆದರೂ,  ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಇಬ್ಬರು ಸಹೋದರರು ಮಾತ್ರ ಮಂಚೂಣಿಯಲ್ಲಿರುತ್ತಾರೆ. ಜಿಲ್ಲಾ ರಾಜಕಾರಣವನ್ನು ತಮ್ಮ ಮೂಗಿನ ನೇರಕ್ಕೆ ನಿಯಂತ್ರಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪನವರ ಮಕ್ಕಳೆ, ಇಂದು ಸೊರಬ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ರಾಜ್ಯದ ಗಮನ ಸೆಳೆದಿದ್ದಾರೆ. 

Malenadu Today Shivamogga

ಸೊರಬದಲ್ಲಿ ಸಹೋದರರ ನಡುವೆ ಸವಾಲ್​  

ಒಂದು ಕಾಲದಲ್ಲಿ ತಂದೆ ಬಂಗಾರಪ್ಪರ ಚುನಾವಣೆಗೆ ಹೆಗಲು ಕೊಡುತ್ತಿದ್ದ ಕುಮಾರ್ ಹಾಗೂ ಮಧು ಬಂಗಾರಪ್ಪರವರು ಇಂದು ಬದಲಾದ ರಾಜಕೀಯ ವಿದ್ಯಾಮಾನದಲ್ಲಿ ಎದುರಾಳಿಗಳಾಗಿ ಅಖಾಡದಲ್ಲಿ ಗುರುತಿಸಿಕೊಂಡಿದ್ದಾರೆ. ಒಂದು ವಿಧಾನಸಭೆ ಮತ್ತು ಎರಡು ಲೋಕಸಭೆ ಚುನಾವಣೆಯಲ್ಲಿ ಸತತ ಮೂರು ಬಾರಿ ಸೋಲು ಕಂಡಿರುವ ಮಧು ಬಂಗಾರಪ್ಪ ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಮತ್ತೊಂದೆಡೆ ಬಿಜೆಪಿಯಿಂದ ಕುಮಾರ್ ಬಂಗಾರಪ್ಪ ಸ್ಪರ್ದಾ ಕಣದಲ್ಲಿದ್ದಾರೆ. ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಫೈನಲ್ ಆಗದಿರುವುದರಿಂದ ಸಧ್ಯದ ಪರಿಸ್ಥಿತಿಯಲ್ಲಿ ಸಹೋದರರ ನಡುವೆ ನೇರ ಸ್ಪರ್ದೆ ಎಂದು ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ಮಧು ಬಂಗಾರಪ್ಪರಿಗೆ ಟಿಕೆಟ್ ಸಿಕ್ಕಾಯ್ತು ಕುಮಾರ್​ ಬಂಗಾರಪ್ಪರಿಗೆ? 

ಹಾಗೆ ನೋಡಿದರೆ ಮಧು ಬಂಗಾರಪ್ಪರಿಗೆ ಈಗಾಗಲೇ ಕಾಂಗ್ರೆಸ್ ಪಕ್ಷ ಮೊದಲ ಪಟ್ಟಿಯಲ್ಲಿಯೇ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದೆ. ಹೀಗಾಗಿ ಮಧು ಬಂಗಾರಪ್ಪ ಕ್ಷೇತ್ರದಲ್ಲಿ ಪ್ರಚಾರದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬಗರ್ ಹುಕಂ ರೈತರು ಹಾಗು ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಗಳನ್ನು  ಹಾಗು ಕಾಂಗ್ರೆಸ್ನ್ ಗ್ಯಾರಂಟಿ ಕಾರ್ಡ್​ ಹಿಡ್ಕೊಂಡು ಮತಯಾಚನೆಯಲ್ಲಿ ತೊಡಗಿದ್ದಾರೆ. 

Malenadu Today Shivamogga

ಇತ್ತ ಬಿಜೆಪಿಯಿಂದ ಅಧಿಕೃತವಾಗಿ ಅಭ್ಯರ್ಥಿ ಘೋಷಣೆಯಾಗಿಲ್ಲ. ಕುಮಾರ್ ಬಂಗಾರಪ್ಪರಿಗೆ ಟಿಕೆಟ್​  ನೀಡಬಾರದು ಎಂದು ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸಿದ್ದಾರೆ, ಹಾಗೊಂದು ವೇಳೆ ಕುಮಾರ್ ಗೆ ಟಿಕೆಟ್ ನೀಡಿದ್ರೆ ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಮೂಲ ಬಿಜೆಪಿಗರು ಎಚ್ಚರಿಸಿದ್ದಾರೆ.

ಮೂಲ ಬಿಜೆಪಿ ವರ್ಸಸ್ ಕುಮಾರ್ ಬಂಗಾರಪ್ಪ ಹೇಗಾಯ್ತು ಗ್ಯಾಪ್?

ಸೊರಬ ಬಿಜೆಪಿಯಲ್ಲಿ ಮೂಲ ಬಿಜೆಪಿಗರು ಹಾಗೂ ಶಾಸಕರ ಬಣದ ನಡುವೆ ಮೊದಲಿಂದಲೂ ವೈಮನಸ್ಸು ಇದೆ. ಬಿಜೆಪಿ ಮಂಡಲ ಅಧ್ಯಕ್ಷರ ನೇಮಕದಲ್ಲಿ ಜಿಲ್ಲಾ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಕುಮಾರ್ ಬಂಗಾರಪ್ಪ ಅವರಿಗೆ ವಿರುದ್ಧವಾದ ನಿರ್ಣಯ ಕೈಗೊಂಡಿದ್ದರಿಂದ ಆ ಸಂದರ್ಭದಲ್ಲಿ ಭಿನ್ನಮತ ಉಂಟಾಗಿತ್ತು. ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ತಾಲೂಕು ಅಧ್ಯಕ್ಷರಿಲ್ಲದೆ ಉಸ್ತುವಾರಿ ಸಮಿತಿ ಮೂಲಕ ಎದುರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

ಪಕ್ಷದ ಕೆಲವು ನಾಯಕರ ಕುಮ್ಮಕ್ಕಿನಿಂದ ಸೊರಬದ ಮೂಲ ಬಿಜೆಪಿಯ ಕೆಲವರು ಶಾಸಕರ ನಿರ್ಧಾರಗಳಿಗೆ ವಿರುದ್ಧವಾಗಿಯೇ ಇದ್ದಾರೆ. ಕ್ಷೇತ್ರದಲ್ಲಿ ಪಕ್ಷ ಗೆಲುವಿಗೆ ನಾವು ಬೇಕು. ಆದರೆ ಅಧಿಕಾರ ನಡೆಸಲು ಮೂಲ ಬಿಜೆಪಿ ಎಂಬ ವಿಷಯ ತರುತ್ತಾರೆ ಎಂಬ ಆರೋಪ ಶಾಸಕರ ಬಣದ್ದಾಗಿದೆ. ಶಾಸಕರು ತಮ್ಮ ಬೆಂಬಲಿಗರಿಗೆ ಮಣೆ ಹಾಕಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಾರೆ ಎಂಬುದು ಬಿಜೆಪಿ ಸ್ಥಳೀಯ ಕೆಲವು ಮುಖಂಡರ ಆರೋಪ. 

Malenadu Today Shivamogga

ಮೂಗೂರು ಏತ ನೀರಾವರಿ ಕಾರ್ಯಕ್ರಮದಲ್ಲಿ  ಮುನಿಸು ಸ್ಪೋಟ

ಸೊರಬ ಜನತೆಯ ಮೂರು ದಶಕಗಳ ಬೇಡಿಕೆಯಾಗಿದ್ದ ಮೂಗೂರು ಏತ ನೀರಾವರಿ ಯೋಜನೆಯನ್ನು 2021 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದ್ರು.ಅಂದು ಸಿಎಂ ಸೊರಬಕ್ಕೆ ಬರುವ ಮುನ್ನ ಬಿಜೆಪಿಯಲ್ಲಿ ದೊಡ್ಡ ಹೈಡ್ರಾಮವೇ ನಡೆದಿತ್ತು.

ನೀರಾವರಿ ಯೋಜನೆ ಉದ್ಘಾಟನೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ. ಯೋಜನೆ ಅನುಷ್ಠಾನದ ಬಗ್ಗೆ ಸಿದ್ದಪಡಿಸಲಾದ ಸ್ಟೇಜ್ ವಿಡಿಯೋ ಡಾಕ್ಯುಮೆಂಟರಿಯಲ್ಲಿ ಕುಮಾರ ಬಂಗಾರಪ್ಪರವರ ಅವರ ಚಿತ್ರವೇ ಇರದಂತೆ ನೋಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಶಾಸಕ ಕುಮಾರ ಬಂಗಾರಪ್ಪ ಅವರು ನೀರಾವರಿ ನಿಗಮದ ಅಧಿಕಾರಿಗಳಿಗೆ ಕೇಳಿದಾಗ ಅಲ್ಲಿ ಸಮರ್ಪಕ ಉತ್ತರ ಸಿಗಲಿಲ್ಲ.

ಈ ಕಾರಣದಿಂದ  ಕಾರ್ಯಕ್ರಮ ನೀವೇ ಮಾಡಿಕೊಳ್ಳಿ ಎಂದು ಮುನಿಸಿಕೊಂಡಿದ್ದರು. ಈ ವಿಚಾರ ತಿಳಿದ ಸಂಸದ ಬಿ.ವೈ.ರಾಘವೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅವರು ಕುಮಾರ ಬಂಗಾರಪ್ಪ ಅವರ ಮನೆಗೆ ಭೇಟಿ ನೀಡಿದ್ರು. ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಶಾಸಕರೊಂದಿಗೆ ಚರ್ಚಿಸಿ ಕಾರ್ಯಕ್ರಮಕ್ಕೆ ಬರುವಂತೆ ಮನವೊಲಿಸಿದ್ರು.

Malenadu Today Shivamogga

ಶಾಸಕ ಕುಮಾರ ಬಂಗಾರಪ್ಪ ವಿರುದ್ಧ ತಿರುಗಿ ಬಿದ್ದ ಕಾರ್ಯಕರ್ತರು

ಶಾಸಕರಾಗಿ ಕುಮಾರ್ ಬಂಗಾರಪ್ಪ ಆಯ್ಕೆಯಾದಾಗಿನಿಂದಲು ಇರುವ ಮೂಲ ಮತ್ತು ವಲಸಿಗ ಬಿಜೆಪಿ ಕಾರ್ಯಕರ್ತರ ನಡುವಿನ ಅಂತರ  ಮತ್ತಷ್ಟು ಹೆಚ್ಚಿದ್ದು ಪ್ರಧಾನಿ ಹುಟ್ಟು ಹಬ್ಬದಂದು ನಮೋ  ವೇದಿಕೆ ಆರಂಭಿಸುವ ಮೂಲಕ ಮೂಲ ಬಿಜೆಪಿಗರು ಶಾಸಕರ ವಿರುದ್ಧ ತೊಡೆ ತಟ್ಟಿದ್ದರು.  ಸೊರಬದಲ್ಲಿ ಯಾತ್ರೆ ನಡೆಸಿ,  ಈ ಬಾರಿ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎಂದು ಯಡಿಯೂರಪ್ಪನವರಿಗೆ ಮನವಿ ಮಾಡಿದ್ದರು. ಯಾವ ಮಟ್ಟಿಗೆ ಎಂದರೆ, ಮೂಲ ಮತ್ತು ವಲಸಿಗರ ಆರೋಪ ಮತ್ತು ಪ್ರತ್ಯಾರೋಪಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಮಟ್ಟಕ್ಕೆ ಹೋಗಿದ್ದನ್ನು ಸೊರಬ ಜನತೆ ಕಂಡಿದ್ದಾರೆ.

ಷಡಾಕ್ಷರಿ ಮತ್ತು ಕುಮಾರ್​ ಬಂಗಾರಪ್ಪ

ಸೊರಬ ತಹಸಿಲ್ದಾರ್ ಗಳ ಸರಣಿ ವರ್ಗಾವಣೆ ಸೊರಬ ತಾಲೂಕಿನಲ್ಲಿ ಹತ್ತು ಹಲವು ಚರ್ಚೆಗಳನ್ನು ಹುಟ್ಟು ಹಾಕಿತ್ತು. ಕುಮಾರ್ ಬಂಗಾರಪ್ಪರ ನಡೆ ಸರ್ಕಾರಿ ನೌಕರರ ಸಂಘದ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದಕ್ಕೆ ಕಾಕತಾಳೀಯ ಎಂಬಂತೆ  ಸಾಗರ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ದಿನಾಂಕ 12/01/2023 ರಂದು ನೆಡೆದ ಕರ್ನಾಟಕ ರಾಜ್ಯ ನೌಕರರ ಸಮಾರಂಭದಲ್ಲಿ, ರಾಜ್ಯಾಧ್ಯಕ್ಷ ಷಡಕ್ಷರಿ ಮಾಡಿದ ಭಾಷಣಕ್ಕೆ ಕುಮಾರ್ ಅಸಮಧಾನ ವ್ಯಕ್ತಪಡಿಸಿದ್ದರು. 

Malenadu Today Shivamogga

ಭಾಷಣದಲ್ಲಿ ಷಡಕ್ಷರಿ ಏನಂದಿದ್ದರು? 

ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಎದುರಿಸುತ್ತಿರುವ ಸನ್ನಿವೇಶಗಳ ಬಗ್ಗೆ ಭಾಷಣ ಮಾಡಿದ್ದ ಷಡಾಕ್ಷರಿಯವರು ,ಐದು ವರ್ಷಗಳ ಅವಧಿಯಲ್ಲಿ  15 ತಹಸೀಲ್ದಾರ್ ಬದಲಾವಣೆ ಮಾಡಿದ್ದಾರೆ ” ಹಂಗೆ ಹೀಗಾಗಿ ಬಿಟ್ರೆ. ನೌಕರರು ಕೆಲಸ ಮಾಡೋದಕ್ಕೆ ಆಗುತ್ತಾ..,ನೋಡ್ರಿ ಕಾರ್ಯಾಂಗ ವ್ಯವಸ್ಥೆಯನ್ನ ಸರಿಯಾಗಿ ಇಟ್ಟಿಕೊಳ್ಳದೆ ಹೋದ್ರೆ.ಬಹುಶಃ .ಫಲಿತಾಂಶದ ಸಂದರ್ಭದಲ್ಲೂ ಅವರಿಗೆ ನೌಕರರು ಸರಿಯಾದ ಉತ್ತರ ಕೊಡ್ತಾರೆ ಎಂದು ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಕುಮಾರ್ ಬಂಗಾರಪ್ಪ ಷಡಕ್ಷರಿಯವರ ನಡೆಯನ್ನು ಬಹಿರಂಗವಾಗಿ ಖಂಡಿಸಿದ್ದರು. ಹೀಗಾಗಿ ಸೊರಬದಲ್ಲಿ ಸರ್ಕಾರಿ ನೌಕರರ ಮತಗಳು ಈಗ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ.ಆದ್ರೆ ಅದು ಗುಪ್ತಗಾಮಿನಿಯಾಗಿದೆ.

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Shivamogga JD(S), Shivamogga Politics, Shivamogga City Constituency, Shivamogga Assembly Constituency, Ayanur Manjunath, Congress, BJP, District JD(S). Shivamogga    #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga , Kumar Bangarappa, Soraba Assembly Constituency, Soraba Taluk Constituency, Madhu Bangarappa, Karnataka Assembly Elections, Karnataka Elections, S Bangarappa, Samsadha Raghavendra, Namo Vedike, Original BJP, Migrant BJP, Defection ,ಕುಮಾರ್ ಬಂಗಾರಪ್ಪ, ಸೊರಬ ವಿಧಾನಸಭಾ ಕ್ಷೇತ್ರ, ಸೊರಬ ತಾಲ್ಲೂಕು ಕ್ಷೇತ್ರ, ಮಧು ಬಂಗಾರಪ್ಪ, ಕರ್ನಾಟಕ ವಿಧಾನಸಭಾ ಚುನಾವಣೆ, ಕರ್ನಾಟಕ ಎಲೆಕ್ಷನ್, ಎಸ್​ ಬಂಗಾರಪ್ಪ, ಸಂಸಧಾ ರಾಘವೇಂದ್ರ, ನಮೋ ವೇದಿಕೆ, ಮೂಲ ಬಿಜೆಪಿ, ವಲಸೆ ಬಿಜೆಪಿ, ಪಕ್ಷಾಂತರ 

Leave a Comment