ಕಾರ್ಗಲ್​ನಲ್ಲಿ ವಾಂತಿ, ಭೇದಿಗೆ ಕಾರಣವಾಯಿತಾ! ಜಾತ್ರೆ ಐಟಎಮ್ಸ್? ಆಲೂ ರೋಲ್​,ಐಸ್​ಕ್ರೀಂ ಟೆಸ್ಟ್​, ಕಾಲರಾ ಶಂಕೆಗೆ ಬಗ್ಗೆ ಡಿಸಿ ಸ್ಪಷ್ಟನೆ!

vomiting and diarrhea in Kargal ಕಾರ್ಗಲ್​ನಲ್ಲಿ ಇತ್ತೀಚೆಗೆ ನಡೆದ ಚೌಡೇಶ್ವರಿ ಜಾತ್ರೆಯಲ್ಲಿ ಸೇವಿಸಿದ ಐಸ್‌ಕ್ರೀಂ ಹಾಗೂ ಆಲೂಗಡ್ಡೆಯ ತಿನಿಸುಗಳಿಂದ ಈ ಸಮಸ್ಯೆ ಉಂಟಾಗಿರುವ ಶಂಕೆ ಇದೆ. ನೀರು ಹಾಗೂ ಇತರೇ ಸ್ಯಾಂಪಲ್​ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಅಂತಿಮ ವರದಿ ಬಳಿಕ ಕಾರಣ ತಿರ್ಮಾನಿಸಲಾಗುವುದು ಎಂದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

ಮಲೆನಾಡು ಟುಡೆ ಸುದ್ದಿ / ಕಾರ್ಗಲ್ / ಸಾಗರ ತಾಲ್ಲೂಕಿನ ಕಾರ್ಗಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಂತಿ ಮತ್ತು ಭೇದಿ ಪ್ರಕರಣಗಳು ತೀವ್ರಗೊಂಡಿದ್ದು, ಸೋಂಕಿಗೆ ಗುರುವಾರ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ನೂರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸ್ಪಷ್ಟನೆ ನೀಡಿದ್ದಾರರಷ್ಟೆ ಅಲ್ಲದೆ ಈ ಕುರಿತು ಹತ್ವದ ಮಾಹಿತಿ ನೀಡಿದ್ದಾರೆ. 

 Did the food consumed at the Chowdeshwari Jatra cause the severe outbreak of vomiting and diarrhea in Kargal instead of contaminated water
Did the food consumed at the Chowdeshwari Jatra cause the severe outbreak of vomiting and diarrhea in Kargal instead of contaminated water

ಶಿವಮೊಗ್ಗ: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ ; ಮಿಸ್ ಮಾಡ್ಕೋಬೇಡಿ!

ಕಾಲರಾ ಶಂಕೆಗೆ ಬಗ್ಗೆ ಡಿಸಿ ಸ್ಪಷ್ಟನೆ

ಕಾರ್ಗಲ್ ಭಾಗದಲ್ಲಿ ಎರಡು ದಿನಗಳಿಂದ ವಾಂತಿ-ಭೇದಿ ಪ್ರಕರಣಗಳು ಗಮನಕ್ಕೆ ಬಂದಿವೆ. ಸುಮಾರು ನೂರಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿಯಾಗಿದೆ. ಪ್ರಸ್ತುತ ಐದು ಜನ ಒಳರೋಗಿಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಡಿಯುವ ನೀರಿನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ, ಬದಲಾಗಿ ಚೌಡೇಶ್ವರಿ ಜಾತ್ರೆಯಲ್ಲಿ ಸೇವಿಸಿದ ಐಸ್‌ಕ್ರೀಂ ಹಾಗೂ ಆಲೂಗಡ್ಡೆಯ ತಿನಿಸುಗಳಿಂದ ಈ ಸಮಸ್ಯೆ ಉಂಟಾಗಿರುವ ಶಂಕೆ ಇದೆ. ಕಾಲರಾ ಸಾಮಾನ್ಯವಾಗಿ ಕಲುಷಿತ ನೀರಿನಿಂದ ಹರಡುತ್ತದೆ. ಆದರೆ ಘಟನೆ ಬೆಳಕಿಗೆ ಬಂದ ತಕ್ಷಣವೇ ನೀರಿನ ಗುಣಮಟ್ಟದ ಪರೀಕ್ಷೆ ಮಾಡಲಾಗಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಕುಡಿಯುವ ನೀರಿನಲ್ಲಿ ಯಾವುದೇ ನ್ಯೂನತೆಗಳು ಕಂಡುಬಂದಿಲ್ಲ. ನೀರಿನ 48 ಗಂಟೆಗಳ ಕಲ್ಚರ್ ಟೆಸ್ಟ್ ವರದಿ ಇನ್ನಷ್ಟೇ ಬರಬೇಕಿದೆ, ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು 

ಪ್ರಭುಲಿಂಗ ಕವಳಿಕಟ್ಟಿ, ಶಿವಮೊಗ್ಗ ಜಿಲ್ಲಾಧಿಕಾರಿ

ಕಾರ್ಗಲ್​ನಲ್ಲಿ ನಡೆದಿದ್ದೇನು?

 ಕಾರ್ಗಲ್, ಜೋಗ, ಲಿಂಗನಮಕ್ಕಿ, ಅರಳಗೋಡು, ಹೆನ್ನಿ ಹಾಗೂ ಇಡುವಾಣಿ ಗ್ರಾಮಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿವಾಸಿಗಳಲ್ಲಿ ತೀವ್ರ ಹೊಟ್ಟೆನೋವು, ತಲೆನೋವು, ಜ್ವರ ಹಾಗೂ ವಾಂತಿ-ಭೇದಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡಿದ್ದ ಕಾರ್ಗಲ್‌ನ ಸರ್ಕಾರಿ ಶಾಲೆಯ 15ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಬುಧವಾರವೇ ಕೆಪಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಮೃತ ಮಹಿಳೆಯನ್ನು ಕಾರ್ಗಲ್ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ರಾಜು ಅವರ ತಾಯಿ ಜಯಲಕ್ಷ್ಮಿ (65) ಎಂದು ಗುರುತಿಸಲಾಗಿದೆ. ಬುಧವಾರ ಜ್ವರ, ವಾಂತಿ, ಭೇದಿಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ. ಇನ್ನೂ ಮೃತಪಟ್ಟ ಮಹಿಳೆಗೆ ಮೊದಲೇ ಇತರ ಆರೋಗ್ಯ ಸಮಸ್ಯೆಗಳು ಇದ್ದವು. ಹೀಗಾಗಿ ಸಾವಿಗೆ ನಿಖರವಾದ ಕಾರಣವೇನು ಎಂಬುದನ್ನು ಮರಣೋತ್ತರ ವರದಿ ಬಂದ ಬಳಿಕವಷ್ಟೇ ಖಚಿತಪಡಿಸಲು ಸಾಧ್ಯ ಎಂದು ಡಿಸಿ ಪ್ರಭುಲಿಂಗ ಕವಳಿ ಕಟ್ಟಿ ತಿಳಿಸಿದ್ದಾರೆ. 

 Did the food consumed at the Chowdeshwari Jatra cause the severe outbreak of vomiting and diarrhea in Kargal instead of contaminated water
Did the food consumed at the Chowdeshwari Jatra cause the severe outbreak of vomiting and diarrhea in Kargal instead of contaminated water

ಶಿವಮೊಗ್ಗ ನಗರವೊಂದರಲ್ಲೇ 16,000 ಸಿಸಿಟಿವಿ ಇದೆ! ಜಿಲ್ಲೆಯಲ್ಲಿ 30000! ಏನಾಗ್ತಿದೆ! ಗೃಹಸಚಿವರಿಂದ ದೊಡ್ಡ ಸುದ್ದಿ!

ಚೌಡೇಶ್ವರಿ ಜಾತ್ರೆ ಸಂದರ್ಭದಲ್ಲಿ?

ಇನ್ನೂ ಇದೇ ವೇಳೆ ಕಾಲರಾ ಶಂಕೆ ವ್ಯಕ್ತವಾಗುತ್ತಿರುವ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿ ಇತ್ತೀಚೆಗೆ ಕಾರ್ಗಲ್‌ನಲ್ಲಿ ನಡೆದ ಚೌಡೇಶ್ವರಿ ಜಾತ್ರೆಯಲ್ಲಿ ಭಾಗವಹಿಸಿದ್ದವರಲ್ಲಿಯೇ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಜಾತ್ರೆಯಲ್ಲಿ ಐಸ್‌ಕ್ರೀಂ ಮತ್ತು ಆಲೂಗಡ್ಡೆಯಿಂದ ಮಾಡಿದ್ದ ರೋಲ್ ತಿನಿಸುಗಳನ್ನು ತಿಂದವರಿಗೆ ವಾಂತಿ-ಭೇದಿ ಬಾಧಿಸಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಯಾ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. 

ಇನ್ನೊಂದೆಡೆ ಅತ್ತ ಕಾರ್ಗಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಆರೋಗ್ಯ ಇಲಾಖೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಲ್.ನಾಗರಾಜ ನಾಯ್ಕ ಅವರು, ಶರಾವತಿ ಕೊಳ್ಳದ ನಿವಾಸಿಗಳು ಕಡ್ಡಾಯವಾಗಿ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ಜಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೆರೆದಿಟ್ಟ ತಿನಿಸುಗಳನ್ನು ಯಾವುದೇ ಕಾರಣಕ್ಕೂ ತಿನ್ನಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

 Did the food consumed at the Chowdeshwari Jatra cause the severe outbreak of vomiting and diarrhea in Kargal instead of contaminated water
Did the food consumed at the Chowdeshwari Jatra cause the severe outbreak of vomiting and diarrhea in Kargal instead of contaminated water

ಶಿವಮೊಗ್ಗ:  ಯುವಕನಿಗೆ 20 ವರ್ಷ ಜೈಲು ಶಿಕ್ಷೆ, 1 ಲಕ್ಷ ದಂಡ, ಕಾರಣವೇನು ಗೊತ್ತಾ,,?  

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Did the food consumed at the Chowdeshwari Jatra cause the severe outbreak of vomiting and diarrhea in Kargal instead of contaminated water