ಮಹಿಳೆಯ ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಜಾತಿನಿಂದನೆಗೈದು ಹಲ್ಲೆ ನಡೆಸಿದ್ದ ಪ್ರಕರಣದ ಇಬ್ಬರು ಆರೋಪಿಗಳಿಗೆ ಭದ್ರಾವತಿಯ ನ್ಯಾಯಾಲಯವು 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 62000 ರೂಪಾಯಿಗಳ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಉಮೇಶ್ (49) ಹಾಗೂ ನಂದನ್ (22) ಶಿಕ್ಷೆಗೊಳಗಾದ ಅಪರಾಧಿಗಳಾಗಿದ್ದಾರೆ. ಈ ಇಬ್ಬರು ದಿನಾಂಕ 9/9/2022 ರಂದು ಭದ್ರಾವತಿ ವಾಸಿ ಮಹಿಳೆಯೊಬ್ಬರ ಮನೆಗೆ ತೆರಳಿ ಜಾತಿನಿಂದನೆ ಮಾಡಿದ್ದರು. ಅಲ್ಲದೆ ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ಭದ್ರಾವತಿಯ ಹೊಸಮನೆ ಠಾಣೆಯ ಎಸ್‌ಸಿ-ಎಸ್‌ಟಿ ಪಿಎ ಕಾಯ್ದೆಯಡಿ ಕೇಸ್ ಆಗಿತ್ತು. ಆನಂತರ ಅಂದಿನ ಭದ್ರಾವತಿ ಎಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಕೇಸ್ನ ತನಿಖೆ ನಡೆಸಿ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಕೋರ್ಟ್ನಲ್ಲಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ಅವರು ಮಹಿಳೆಯ ಪರವಾಗಿ ವಾದ ಮಾಡಿದ್ದರು, ಭದ್ರಾವತಿಯ ಮಾನ್ಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ವಿಚಾರಣೆಯನ್ನು ಮುಗಿಸಿ ಇಬ್ಬರೂ ಆರೋಪಿಗಳಿಗೆ ತಲಾ 2 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 62000 ರೂಪಾಯಿ ದಂಡ ವಿಧಿಸಿದ್ದಾರೆ. ಇದೇ ವೇಳೆ ದಂಡದ ಮೊತ್ತದಲ್ಲಿ ನೊಂದ ಮಹಿಳೆಯರಿಗೆ ತಲಾ 25000 ರೂಪಾಯಿಗಳನ್ನು ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw