ಭೋರ್ಗರೆದ ತುಂಗಾ: ಶಿವಮೊಗ್ಗದಲ್ಲಿ ಅಪಾಯದ ಮಟ್ಟದತ್ತ ನದಿ ನೀರು, CWC ಎಚ್ಚರಿಕೆ

ಹಂಚಿಕೊಳ್ಳಿ
WhatsApp Facebook X Telegram
Tunga River Water Level Rises in Shivamogga CWC Issues Flood Forecast

Tunga River Water Level / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮವಾಗಿ ತುಂಗಾ ಜಲಾಶಯಕ್ಕೆ ಭರಪೂರ ನೀರು ಹರಿಯುತ್ತಿದೆ, ನಿನ್ನೆ ಮಧ್ಯಾಹ್ನದ ಅಧಿಕೃತ ಮಾಹಿತಿ ಪ್ರಕಾರ, 43 ಸಾವಿರ ಕ್ಯೂಸೆಕ್ಸ್​ ನೀರು ನೇರವಾಗಿ ನದಿಗೆ ಬರುತ್ತಿದೆ. ಹೀಗಾಗಿ ಶಿವಮೊಗ್ಗ ಭಾಗದಲ್ಲಿ ತುಂಗೆ ಅಪಾಯದ ಮಟ್ಟ ತಲುಪಿದ್ದಾಳೆ. ಈ ಬಗ್ಗೆ ಕೇಂದ್ರ ಜಲ ಆಯೋಗವು (CWC) ಅಧಿಕೃತ ಪ್ರವಾಹ ಮುನ್ಸೂಚನೆಯನ್ನು ಬಿಡುಗಡೆ ಮಾಡಿದ್ದು, ತುಂಗಾ ನದಿಯು ಅಪಾಯದ ಮಟ್ಟದ ಕಡೆಗೆ ಧಾವಿಸುತ್ತಿರುವುದಾಗಿ ಎಚ್ಚರಿಸಿದೆ.

ಶಿವಮೊಗ್ಗ ನಗರದ ಮೂಲಕ ಹರಿಯುವ ತುಂಗಾ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕೇಂದ್ರ ಜಲ ಆಯೋಗ ಹಂಚಿಕೊಂಡಿರುವ ಜಲರೇಖಾಚಿತ್ರದ (ಹೈಡ್ರೋಗ್ರಾಫ್) ಪ್ರಕಾರ, ಕಳೆದ ಜುಲೈ 4 ರಿಂದ ನದಿಯ ನೀರಿನ ಮಟ್ಟವು ನಿರಂತರವಾಗಿ ಏರಿಕೆಯಾಗುತ್ತಿದೆ. ಜುಲೈ 4 ರಂದು ಸುಮಾರು 563.5 ಮೀಟರ್ ಆಸುಪಾಸಿನಲ್ಲಿದ್ದ ನೀರಿನ ಮಟ್ಟವು, ಜುಲೈ 7 ರ ಸಂಜೆಯ ವೇಳೆಗೆ 566 ಮೀಟರ್ ತಲುಪಿದ್ದು, ಸದ್ಯ ಮುನ್ನೆಚ್ಚರಿಕೆ ಮಟ್ಟದ ಅತ್ಯಂತ ಸಮೀಪದಲ್ಲಿ ಹರಿಯುತ್ತಿದೆ.

ಕೃಷ್ಣಾ ಕೊಳ್ಳಕ್ಕೆ ಒಳಪಡುವ ತುಂಗಾ ನದಿಯ ಮುನ್ನೆಚ್ಚರಿಕೆ ಮಟ್ಟ 566.8 ಮೀಟರ್ ಹಾಗೂ ಅಪಾಯದ ಮಟ್ಟ 567.3 ಮೀಟರ್ ಎಂದು ಗುರುತಿಸಲಾಗಿದೆ. ಇನ್ನೂ ನದಿಯ ನೀರಿನ ಹರಿವು ಸದ್ಯ ಮೇಲ್ಮುಖ ಚಲನೆಯನ್ನು ಹೊಂದಿದೆ ಎಂದು ರೇಖಾಚಿತ್ರದಲ್ಲಿ ತೋರಿಸಲಾಗಿದೆ. ಈ ಸಂಬಂಧ ನದೀ ತೀರದ ಸಾರ್ವಜನಿಕರು ಮತ್ತು ತಗ್ಗು ಪ್ರದೇಶದ ನಿವಾಸಿಗಳು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.

ಕೇಂದ್ರ ಜಲ ಆಯೋಗ ಹಂಚಿಕೊಂಡಿರುವ ಜಲರೇಖಾಚಿತ್ರದ (ಹೈಡ್ರೋಗ್ರಾಫ್) ಇಲ್ಲಿದೆ ಗಮನಿಸಿ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor