shivamogga youth / ಮಲೆನಾಡು ಟುಡೆ / ಶಿವಮೊಗ್ಗ / ಸಾಮಾನ್ಯವಾಗಿ ಶಿವಮೊಗ್ಗ ಪೊಲೀಸರು ರೀಲ್ಸ್ ಮಾಡುತ್ತಾರೆ. ಅದರಲ್ಲಿಯು ವೈಟ್ ಎ ಮಿನಿಟ್ ಅಂತಾ ಸೇರಿಸಿ ಶಿವಮೊಗ್ಗ ಟ್ರಾಫಿಕ್ ಪೊಲೀಸರು , ಸಂಚಾರಿ ದಂಡ ವಿಧಿಸಿದ ಅಥವಾ ವೀಲ್ಹೀಂಗ್ ಮಾಡಿದವರನ್ನು ಹಿಡಿಯುವ ವಿಡಿಯೋ ಮಾಡುತ್ತಾರೆ. ಆದರೆ ಇದೀಗ ಶಿವಮೊಗ್ಗ ಟ್ರಾಫಿಕ್ ಪೊಲೀಸರ ಇಗೋ ಹರ್ಟ್ ಮಾಡಿದವರ ವಿಡಿಯೊವೊಂದರ ವಿರುದ್ಧ ಶಿವಮೊಗ್ಗ ಸಂಚಾರಿ ಪೊಲೀಸ್ ವಿಭಾಗದಿಂದಲೇ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರ ರೀಲ್ಸ್ ಹಿಟ್ ಆಗುತ್ತಿದೆ.
ಏನಿದು ಪ್ರಕರಣ
ಹೌದು ಶಿವಮೊಗ್ಗ ಸಂಚಾರಿ ಪೊಲೀಸರು, ಹೆಲೈಟ್ ಧರಿಸದೆ ಬೈಕ್ ಓಡಿಸುತ್ತಾ, ಪೊಲೀಸ್ ಸಿಬ್ಬಂದಿ ಹಾಗೂ ಪಕ್ಕದಲ್ಲಿ ಸಂಚರಿಸುತ್ತಿದ್ದ ಮಹಿಳಾ ಮೊಪೆಡ್ ಸವಾರರನ್ನು ಅಪಹಾಸ್ಯ ಮಾಡಿ ರೀಲ್ಸ್ ಮಾಡಿ, ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ಯುವಕರನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.
ಟಿ.ಸೀನಪ್ಪಶೆಟ್ಟಿ ವೃತ್ತದಲ್ಲಿ ಸೋಮವಾರ ಬೈಕ್ ಸವಾರ ತನ್ನ ಜೊತೆಗೆ ಹಿಂಬದಿ ಸವಾರನ ಜೊತೆಗೆ ಸೇರಿಕೊಂಡು ರೀಲ್ಸ್ ಮಾಡಿದ್ದಾನೆ. ಅಲ್ಲದೆ ಅಲ್ಲೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಅಪಹಾಸ್ಯ ಮಾಡಿದ್ದ, ಜತೆಗೆ ಮಹಿಳಾ ದ್ವಿಚಕ್ರ ವಾಹನ ಸವಾರರನ್ನು ಅಪಹಾಸ್ಯ ಮಾಡುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಾಹನ ಸವಾರ ಹಾಗೂ ಹಿಂಬದಿ ಸವಾರನನ್ನು ವಶಕ್ಕೆ ಪಡೆದು, ಮೊಪೆಡ್ ಅನ್ನು ಸೀಜ್ ಮಾಡಿದ್ದಾರೆ. ಅಲ್ಲದೆ ಅವರ ಮೂಲಕ ಸಾರಿ ಕೇಳುವ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ವಾಹನ ಸವಾರನ ವಿರುದ್ದ ಭಾರತೀಯ ಮೋಟಾರು ವಾಹನಗಳ ಕಾಯಿದೆ ಅಡಿ ಕ್ರಮ ಕೈಗೊಳ್ಳಲಾಗಿದೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
