ಸಾರಿಗೆ ,ಸರ್ಕಾರಿ ನೌಕರರಿಗೆ ದೊಡ್ಡ ಸುದ್ದಿ! ವೇತನ %12.5 ರಷ್ಟು ಏರಿಕೆ! ತುಟ್ಟಿ ಭತ್ಯೆ %1.50 ರಷ್ಟು ಏರಿಕೆ! ಪೂರ್ತಿ ಸುದ್ದಿ ಓದಿ

This Article Written by / ajjimane ganesh / ಮೇ 12, 2026

Smart Cards for Karnataka Transport Passengers: Unidentified Man Dies Farmers Alert New Income Tax Rules Financial Changes From April 1 Karnataka Police Shimoga Kote Marikamba Jatre 2026Shivamogga Health Dept Shimoga-Thirthahalli Road Traffic Diversion Shimoga APMC License Renewal Deadline set for February 28 ವರ್ತಕರೇ ಗಮನಿಸಿ: ಲೈಸೆನ್ಸ್ ನವೀಕರಣಕ್ಕೆ ಫೆಬ್ರವರಿ 28 ರವರೆಗೆ ಮಾತ್ರ ಅವಕಾಶ

ಮಲೆನಾಡು ಟುಡೆ / ಸರ್ಕಾರಿ ಸುದ್ದಿ / ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಎರಡು ಗುಡ್ ನ್ಯೂಸ್ ನೀಡಿದೆ. ಒಂದು ಸಾರಿಗೆ ಇಲಾಖೆ ನೌಕರರಿಗೆ ಸಂಬಂಧಿಸಿದ್ದು, ಇನ್ನೊಂದು ಸುದ್ದಿ ಎಲ್ಲಾ ಸರ್ಕಾರಿ ನೌಕರರಿಗೆ ಸಂಬಂಧಿಸಿದ್ದಾಗಿದೆ.

ಸಾರಿಗೆ ,ಸರ್ಕಾರಿ ನೌಕರರಿಗೆ ದೊಡ್ಡ ಸುದ್ದಿ! ಸಾರಿಗೆ ನೌಕರರ ವೇತನ ಹೆಚ್ಚಳ

ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ 2025ರ ಏಪ್ರಿಲ್​1ರಿಂದಲೇ ಅನ್ವಯವಾಗುವಂತೆ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಶೇ.10ರಿಂದ 12.5ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ದಿಂದ ಮಂಗಳ ವಾರ ಆದೇಶ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಸಾರಿಗೆ ನಿಗಮಗಳು ಶೇ.7ರಷ್ಟು ವೇತನ ಹೆಚ್ಚಳ ಮಾಡುವ ಪ್ರಸ್ತಾವನ್ನು ನೌಕರ ಸಂಘಟನೆಗಳ ಮುಂದಿಟ್ಟು ಮೂರು ಸಭೆಗಳನ್ನು ನಡೆಸಿದ್ದವು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ನೌಕರ ಸಂಘಟನೆಗಳ ಪ್ರಮುಖರೊಂದಿಗೆ ಸಭೆ ನಡೆಸಿ ಶೇ.7ರ ವೇತನ ಹೆಚ್ಚಳದ ಪ್ರಸ್ತಾವಕ್ಕೆ ಒಪ್ಪುವಂತೆ ಕೋರಿದ್ದರು. ಆದರೆ ಸಂಘಟನೆಗಳು ಶೇ.25ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದ್ದಿದ್ದವು. ಅಲ್ಲದೆ ವೇತನ ಹೆಚ್ಚಳ ಸೇರಿ ಇನ್ನಿತರ ಬೇಡಿಕೆಗಳನ್ನು ಇಟ್ಟುಕೊಂಡು 20ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆ ಸುವುದಾಗಿ ಘೋಷಿಸಿ ದ್ದವು. ಈ ಹಿನ್ನೆಲೆ 2 ದಿನಗಳ ಹಿಂದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿ ವೇತನ ಹೆಚ್ಚಳ ಪ್ರಮಾಣ ನಿಗದಿ ಮಾಡಿದ್ದಾರೆ. ಅದರ ಪ್ರಕಾರ 2025ರ ಏ. 1ರಿಂದ ಅನ್ವಯವಾಗುವಂತೆ ಶೇ. 10ರಿಂದ 12.5ರಷ್ಟು ವೇತನ ಹೆಚ್ಚಳ ಮಾಡಿ ಮಂಗಳವಾರ ಆದೇಶಿಸುವ ಸಾಧ್ಯತೆ ಗಳಿವೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ 1.50% ಹೆಚ್ಚಿಸಿದ ಸರ್ಕಾರ

ಇನ್ನೊಂದೆಡೆ, ರಾಜ್ಯ ಸರ್ಕಾರಿ ನೌಕರರಿಗೆ 2026ರ ಜ.1 ರಿಂದ ಅನ್ವಯವಾಗುವಂತೆ ಶೇ. 1.50ರಷ್ಟು ತುಟ್ಟಿ ಭತ್ಯೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ. ಸರ್ಕಾರಿ ನೌಕರರ ಮೂಲ ವೇತನದಲ್ಲಿ ಹಾಲಿ ಇರುವ ಶೇ. 14.25ರ ತುಟ್ಟಿ ಭತ್ಯೆ ಶೇ.15 .75ಕ್ಕೆ ಹೆಚ್ಚಳವಾಗಲಿದೆ. ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ 5.25 ಲಕ್ಷ ಸರ್ಕಾರಿ ನೌಕರರು, ನಿಗಮ- ಮಂಡಳಿ- ಅನುದಾನಿತ ಸಂಸ್ಥೆಗಳ 3 ಲಕ್ಷ ನೌಕರರು ಹಾಗೂ 4.50 ಲಕ್ಷ ನಿವೃತ್ತ ನೌಕರರಿಗೆ ಅನುಕೂಲ ವಾಗಲಿದೆ. ಹೆಚ್ಚಳ 2026ರ ಜನವರಿ 1ರಿಂದ ಅನ್ವಯವಾಗಲಿದೆ.

ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಹಾಗೂ ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿದಾರರಿಗೂ ತುಟ್ಟಿ ಭತ್ಯೆ ಹೆಚ್ಚಳದ ಲಾಭ ದೊರೆಯಲಿದೆ. ಹಾಗೆಯೇ, ಯುಜಿಸಿ/ಎಐಸಿ ಟಿಇ/ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರಿಗೂ ಈ ತುಟ್ಟಿ ಭತ್ಯೆ ಪರಿಷ್ಕರಣೆ ಅನ್ವಯಿಸಲಿದೆ. ಜತೆಗೆ ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿಯ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರಿಗೆ, ಅನುದಾನಿತ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಯಲ್ಲಿರುವ ಪೂರ್ಣಾವಧಿ ನೌಕರರಿಗೂ ಅನ್ವಯಿಸಲಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ಮುಂದಿನ ಸುದ್ದಿ ಒದಿ