Today Rashi Bhavishya ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸದ ಬ.ಸಪ್ತಮಿ (ಸಂಜೆ 6.45 ರವರೆಗೆ ಇದ್ದು ನಂತರ ಅಷ್ಟಮಿಗೆ ಬದಲಾಗಲಿದೆ). ದುರ್ಮುಹೂರ್ತವು ಬೆಳಗ್ಗೆ 10.04 ರಿಂದ 10.46 ರವರೆಗೆ ಮತ್ತು ನಂತರ ಮಧ್ಯಾಹ್ನ 2.26 ರಿಂದ 3.12 ರವರೆಗೆ ಇರುವುದು. ರಾತ್ರಿ 2.03 ರಿಂದ 3.40 ರವರೆಗೆ ಅಮೃತ ಘಳಿಗೆಗಳಿದ್ದು, ರಾಹುಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇದ್ದರೆ, ಯಮಗಂಡ ಕಾಲ ಬೆಳಗ್ಗೆ 6.00 ರಿಂದ 7.30 ರವರೆಗೆ ಇರುತ್ತದೆ.
ದ್ವಾದಶ ರಾಶಿಗಳ ಇಂದಿನ ಫಲ /Today Rashi Bhavishya
ಮೇಷ : ಇಂದಿನ ಕೆಲಸ ನಿಧಾನ ಗತಿಯಲ್ಲಿ ಸಾಗಲಿವೆ. ದೂರದ ಪ್ರಯಾಣ ಅನಿವಾರ್ಯವಾಗಬಹುದು. ದೈವಿಕ ಚಿಂತನೆ, ಸಂಬಂಧಿಕರೊಡನೆ ಮಾತುಕತೆ, ಭಿನ್ನಾಭಿಪ್ರಾಯ. ಅನಾರೋಗ್ಯದ ಚಿಂತೆ. ವ್ಯಾಪಾರ ವಹಿವಾಟು ಸರಾಸರಿಯಾಗಿ ಮುಂದುವರೆಯಲಿದ್ದು, ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ ಬೀಳಬಹುದು.
ವೃಷಭ : ಕುಟುಂಬ ಸದಸ್ಯರು ಮತ್ತು ಬಂಧುಗಳೊಂದಿಗೆ ಅನಗತ್ಯ ವಾದ-ವಿವಾದ. ಹಠಾತ್ ಪ್ರಯಾಣ ಅನಿರೀಕ್ಷಿತ. ಕೌಟುಂಬಿಕ ಒತ್ತಡ, ಪುಣ್ಯಕ್ಷೇತ್ರಗಳ ದರ್ಶನ. ವ್ಯಾಪಾರ ವಹಿವಾಟು ನಿಧಾನಗತಿಯಲ್ಲಿ ಸಾಗುವುದು, ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿ.
ಮಿಥುನ : ಹೊಸ ಪರಿಚಯ ಹೆಚ್ಚಲಿವೆ. ಧನಲಾಭ.ಬಾಲ್ಯದ ಗೆಳೆಯರಿಂದ ಶುಭ ಆಮಂತ್ರಣ. ಧನ ವೃದ್ಧಿಯಾಗುವ ಸಾಧ್ಯತೆ,ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ವ್ಯಾಪಾರ ವ್ಯವಹಾರ ಲಾಭದಾಯಕವಾಗಿ ನಡೆಯಲಿವೆ. ಉದ್ಯೋಗದಲ್ಲಿ ಉನ್ನತ ಹುದ್ದೆ ಪಡೆಯುವ ಅವಕಾಶಗಳಿವೆ.
ಕರ್ಕಾಟಕ : ಕೈಗೊಳ್ಳುವ ಉದ್ಯೋಗ ಪ್ರಯತ್ನ ಕೈಗೂಡಬಹುದು. ಅನಿರೀಕ್ಷಿತ ಪ್ರಯಾಣ. ಕುಟುಂಬ ಸದಸ್ಯರೊಡನೆ ವಿವಾದ, ಒತ್ತಡಕ್ಕೆ ಸಿಲುಕಬಹುದು. ವ್ಯಾಪಾರದಲ್ಲಿ ನಿರುತ್ಸಾಹ. ಉದ್ಯೋಗದಲ್ಲಿ ಬದಲಾವಣೆ.
ಸಿಂಹ : ಮಿತ್ರರೊಡನೆ ಉತ್ತಮ ಸೌಹಾರ್ದತೆ ಇರಲಿ. ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಆತ್ಮೀಯರ ಸಲಹೆಗಳನ್ನು ನೀವು ಸ್ವೀಕರಿಸಲಿದ್ದೀರಿ. ಭೂಮಿ ಮತ್ತು ವಾಹನ ಖರೀದಿಸುವ ಯೋಗವಿದೆ. ವ್ಯಾಪಾರ ವ್ಯವಹಾರ ಲಾಭವನ್ನು ತರಲಿವೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳುವಿರಿ.
ಕನ್ಯಾ : ಒತ್ತಡಗಳು ಹೆಚ್ಚಾಗಲಿವೆ. ಮನಸ್ಸು ದೈವಿಕ ಚಿಂತನೆಗಳತ್ತ ವಾಲಲಿದೆ. ಹಠಾತ್ ಪ್ರಯಾಣ ಎದುರಾಗಬಹುದು. ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದ್ದು, ಕೆಲಸಗಳು ನಿಧಾನವಾಗಿ ಸಾಗಲಿವೆ. ವ್ಯಾಪಾರ ನಿಮಗೆ ನಿರಾಸೆ ಉಂಟುಮಾಡಬಹುದು. ಉದ್ಯೋಗದಲ್ಲಿ ಕೆಲವು ಸವಾಲು ಮತ್ತು ಸಮಸ್ಯೆ ಎದುರಿಸಬೇಕಾಗಬಹುದು.

ತುಲಾ: ಶುಭ ಕಾರ್ಯ. ಆರ್ಥಿಕ ಸ್ಥಿತಿ ಇಂದು ಸುಧಾರಿಸಲಿದೆ. ದೀರ್ಘಕಾಲದದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಭೂಮಿ ಮತ್ತು ವಾಹನ ಖರೀದಿಸುವ ಉತ್ತಮ ಯೋಗವಿದೆ. ವ್ಯಾಪಾರ ವಹಿವಾಟು ವಿಸ್ತಾರಗೊಳ್ಳಲಿವೆ. ಉದ್ಯೋಗದಲ್ಲಿ ಅನಿರೀಕ್ಷಿತವಾದ ಉನ್ನತ ಸ್ಥಾನ, ಗೌರವವನ್ನು ಪಡೆಯುವಿರಿ.
ವೃಶ್ಚಿಕ : ಸ್ನೇಹಿತರೊಡನೆ ಸೌಹಾರ್ದಯುತ ವಾತಾವರಣ ಇರಲಿದೆ. ವಿಹಾರ ಮತ್ತು ಔತಣಕೂಟಗಳಲ್ಲಿ ಪಾಲ್ಗೊಳ್ಳುವಿರಿ. ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ ಯಶಸ್ಸು ಗಳಿಸುವಿರಿ. ಆಸ್ತಿ ಲಾಭ. ಪ್ರಮುಖ ವ್ಯಕ್ತಿಗಳ ಪರಿಚಯ. ವಸ್ತು ಲಾಭ. ವ್ಯಾಪಾರ ಲಾಭದಾಯಕವಾಗಿ ನಡೆಯಲಿವೆ. ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರಲಿದೆ.
ಧನಸ್ಸು : ಆಪ್ತರೊಂದಿಗೆ ವಾದ-ವಿವಾದ ಎದುರಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಸಾಮಾನ್ಯ ದಿನ. ಅನಿರೀಕ್ಷಿತ ಪ್ರಯಾಣ, ಪುಣ್ಯಕ್ಷೇತ್ರಗಳ ದರ್ಶನ. ವ್ಯಾಪಾರ ವಹಿವಾಟು ಸಾಮಾನ್ಯ ರೀತಿಯಲ್ಲಿ ಸಾಗಲಿವೆ. ಉದ್ಯೋಗದಲ್ಲಿ ಹೆಚ್ಚಿನ ಕೆಲಸದ ಒತ್ತಡ ಹೊರಬೇಕಾಗಬಹುದು.

ಮಕರ : ಸನ್ನಿಹಿತರೊಂದಿಗೆ ವಾಗ್ವಾದ. ಆರ್ಥಿಕವಾಗಿ ಕೆಲವು ತೊಂದರೆಗ ಎದುರಿಸುವ ಸಾಧ್ಯತೆ ಇದೆ. ಹಠಾತ್ ಪ್ರಯಾಣ. ಮನೆಯಲ್ಲಿ ಮತ್ತು ಹೊರಗೆ ಒತ್ತಡ ಕಾಡಲಿವೆ. ಆರೋಗ್ಯದಲ್ಲಿ ವ್ಯತ್ಯಾ. ವ್ಯಾಪಾರಗಳಲ್ಲಿ ಹೆಚ್ಚು ಲಾಭ, ಉದ್ಯೋಗದಲ್ಲಿ ಸಾಧಾರಣ ದಿನ.
ಕುಂಭ : ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹೊಸ ಉತ್ಸಾಹದಿಂದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಹೊಸ ಆಲೋಚನೆಗಳು ಯಶಸ್ಸನ್ನು ತರಲಿವೆ. ಸಮಾರಂಭಗಳಲ್ಲಿ ಭಾಗವಹಿಸುವಿರಿ. ದೈವ ದರ್ಶನ ಪಡೆಯಲಿದ್ದೀರಿ. ವ್ಯಾಪಾರ ಚುರುಕುಗೊಳ್ಳಲಿವೆ. ಉದ್ಯೋಗದಲ್ಲಿ ಹೊಸ ಉನ್ನತ ಹುದ್ದೆ ಪಡೆಯುವ ಅವಕಾಶವಿದೆ.
ಶಿವಮೊಗ್ಗದಲ್ಲಿ 2 ದಿನ ಕುಡಿಯುವ ನೀರಿನ ವ್ಯತ್ಯಯ
ಮೀನ : ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ವ್ಯವಹಾರಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಶುಭ ಸಮಾಚಾರವೊಂದು ನಿಮಗೆ ತಿಳಿಯಲಿದೆ. ವ್ಯಾಪಾರ ವಿಸ್ತರಿಸಲಿದ್ದೀರಿ. ಉದ್ಯೋಗದಲ್ಲಿ ಪ್ರಗತಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಶಿವಮೊಗ್ಗ ನಾಗರಿಕರಿಗೆ ನಾಳೆ ವಿದ್ಯುತ್, ನೀರು ಪೂರೈಕೆಯಲ್ಲಿ ಸಂಕಷ್ಟ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಇಂದಿನ ರಾಶಿ ಭವಿಷ್ಯ 11-12-2025: ತುಲಾ ರಾಶಿಯವರಿಗೆ ಭೂಮಿ ಯೋಗ | Today Rashi Bhavishya 11-12-2025: Land/Vehicle Prospect for Libra







