ತೀರ್ಥಹಳ್ಳಿಗೆ ಮತ್ತೆ ಬಂದ ಕಾಡಾನೆ/ ನಿನ್ನೆ ಏನೆಲ್ಲಾ ಆಟಾಟೋಪ ನಡೆಸಿದೆ ನೋಡಿ

ಮೊನ್ನೆ ಬೆಳಗ್ಗಿನ ಜಾವ ತೀರ್ಥಹಳ್ಳಿ ಪೇಟೆ ಹತ್ತರ ಬಂದು, ಅಂಗಡಿಯ ಬೋರ್ಡ್​ವೊಂದನ್ನ ಪುಡಿ ಮಾಡಿ ಹೋಗಿದ್ದ ಕಾಡಾನೆ, ನಿನ್ನೆ ಮತ್ತೆ ತೀರ್ಥಹಳ್ಳಿ ಹತ್ತಿರ ಕಾಣಿಸಿಕೊಂಡಿದೆ.

ಕುರುವಳ್ಳಿಯಲ್ಲಿ ಕಾಣಿಸಿದ್ದ ಕಾಡಾನೆಯ ಬಗೆಗಿನ ಸುದ್ದಿ ಇಲ್ಲಿದೆ ಓದಿ : BREAKING NEWS/ ನಸುಕಿನಲ್ಲಿ ತೀರ್ಥಹಳ್ಳಿ ಪೇಟೆಗೆ ಬಂದ ಕಾಡಾನೆ

ಇಲ್ಲಿನ ತಳುವೆಯ ಬಳಿಯಲ್ಲಿ ಕಾಣಿಸಿಕೊಂಡ ಕಾಡಾನೆ, ಈ ಭಾಗದ ತೋಟಗಳಿಗೆ ನುಗ್ಗಿದೆ. ತಡರಾತ್ರಿ 2 ಗಂಟೆ ಸುಮಾರಿಗೆ ತೋಟಗಳಲ್ಳಿ ಓಡಾಡ್ತಿದ್ದ ಆನೆಯು ಕೆಲವೆಡೆ ಬೇಲಿ ಮುರಿದಿದೆ. ಬಳಿಕ ತೋಟದ ಹಾದಿಯಲ್ಲಿ  ಸಾಗಿ ಪ್ಲಾಂಟೇಷನ್​ ಕಡೆಗೆ ಸಾಗಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ಈಗಾಗಲೇ ಕಾಡಾನೆಯನ್ನು ಹಿಡಿದು ಕಾಡಿಗಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಸಹ ಆರಂಭಿಸಿದ್ದಾರೆ.  

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಪಟ್ಟಣದಲ್ಲಿಯೇ ಕಾಣಿಸಿಕೊಂಡ ಕಾಡಾನೆಯ ದೃಶ್ಯ

Leave a Comment