ಶಿವಮೊಗ್ಗ ಐಸಿಸ್​ ಮಾಡಲ್ ಬೆನ್ನತ್ತಿದ NIA! ಶಾರೀಕ್​, ಮಾಜ್, ಯಾಸಿನ್​ರಿಂದ 25 ಕಡೆ ಬೆಂಕಿ, ದುಷ್ಕೃತ್ಯ! ಕದ್ರಿ ದೇವಸ್ಥಾನ IED ಟಾರ್ಗೆಟ್! ಮಹಾರಾಷ್ಟ್ರ , ಮಧ್ಯಪ್ರದೇಶದಲ್ಲಿ ದಾಳಿ!

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗದಲ್ಲಿ ಎನ್​ಐಎ ಅಧಿಕಾರಿಗಳು ಆರೋಪಿ ಶಾರೀಖ್​ನನ್ನ ಕರೆದುಕೊಂಡು ಬಂದು ತೀರ್ಥಹಳ್ಳಿಯಲ್ಲಿ ಸುತ್ತಾಡಿದ ಬೆನ್ನಲ್ಲೆ ಅತ್ತ ರಾಷ್ಟ್ರೀ ತನಿಖಾ ಎಜೇನ್ಸಿ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಹಲವೆಡೆ ದಾಳಿ ನಡೆಸಿದ್ದು ಶಂಕಿತ ವ್ಯಕ್ತಿಗಳನ್ನ ತನಿಖೆಗೆ ಒಳಪಡಿಸಿದೆ. 

READ |BREAKING | ಈ ಸಲ ಕಾಂಗ್ರೆಸ್​ ಸರ್ಕಾರ! ಬಿಜೆಪಿಗೆ ಶಾಕ್​, ಜೆಡಿಎಸ್​ಗೂ ಇಲ್ಲಾ ಚಾನ್ಸ್​! ಏನಿದು ಸರ್ವೆ ರಿಪೋರ್ಟ್​! ಏನ್​ ಹೇಳ್ತಿದೆ ವರದಿ??

ಕರ್ನಾಟಕದ ಶಿವಮೊಗ್ಗದಲ್ಲಿ ಐಸಿಸ್ ಮಾಡ್ಯೂಲ್ ಗೆ ಸಂಬಂಧಿಸಿದಂತೆ,  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಳೆದ ಶನಿವಾರ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಐದು ಸ್ಥಳಗಳಲ್ಲಿ ಶೋಧ ನಡೆಸಿದೆ. ಈ ಬಗ್ಗೆ ಪ್ರಕಟಣೆಯನ್ನು ಸಹ ಹೊರಡಿಸಿದೆ. ಖಚಿತ ಮಾಹಿತಿ ಮೇರೆಗೆ ಕೇಂದ್ರ ತನಿಖಾ ಸಂಸ್ಥೆ ಪುಣೆಯಲ್ಲಿರುವ ಶಂಕಿತ ತಲ್ಹಾ ಖಾನ್ ಮತ್ತು ಮಧ್ಯಪ್ರದೇಶದ ಸಿಯೋನಿಯಲ್ಲಿರುವ ಅಕ್ರಮ್ ಖಾನ್ ಅವರ ಮನೆಯಲ್ಲಿ ಶೋಧ ನಡೆಸಿದೆ. ದೆಹಲಿ ಪೊಲೀಸರು ಈ ಸಂಬಂಧ ಕೇಸ್​ ದಾಖಲಿಸಿಕೊಂಡಿದ್ದರು. ಕಾಶ್ಮೀರದ ದಂಪತಿಗಳಿಬ್ಬರನ್ನ ಬಂಧಿಸಿದ್ದ ಪೊಲೀಸರು ಅವರು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ ದೊಂದಿಗೆ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಎನ್​ಐಎ ರೇಡ್​ ನಡೆಸಿದ್ದು, ಶಿವಮೊಗ್ಗದ ಕೇಸ್​ನ  ಸಂಬಂಧ ತನಿಖೆ ನಡೆಸಿದೆ ಎನ್ನಲಾಗಿದೆ. 

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

 ಇನ್ನೂ ಎನ್​ಐಎ ತನ್ನ ತನಿಖೆಯಲ್ಲಿ ಕೆಲವೊಂದು ವಿಚಾರಗಳನ್ನು ಕಂಡುಕೊಂಡಿದೆ. ತನಿಖಾ ಸಂಸ್ಥೆಯ ಪ್ರಕಾರ, ಮೊಹಮದ್ ಶಾರಿಕ್, ಮಾಜ್ ಮುನೀರ್ ಖಾನ್ ಹಾಗೂ  ಯಾಸಿನ್ ಮತ್ತು ಉಳಿದವರು, ಗೋಡೌನ್​ಗಳು, ಹಾರ್ಡ್ವೇರ್ ಶಾಪ್, ವಾಹನಗಳು, ಮದ್ಯದಂಗಡಿಗಳು ಸೇರಿದಂತೆ  ನಿರ್ದಿಷ್ಟ ಸಮುದಾಯಕ್ಕೆ ಆಸ್ತಿಪಾಸ್ತಿಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದರು. ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಯನ್ನು ಟಾರ್ಗೆಟ್ ಮಾಡಿಕೊಂಡು ದುಷ್ಕೃತ್ಯವೆಸಗುತ್ತಿದ್ದರು,  25 ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಹಚ್ಚಿದ ಹಾಗೂ ದುಷ್ಕೃತ್ಯವನ್ನು ಎಸೆಗಿದ ಬಗ್ಗೆ ಸದ್ಯ ಎನ್​ಐಎ ಮಾಹಿತಿ ಕಲೆಹಾಕಿದೆ. ತೀರ್ಥಹಳ್ಳಿಯಲ್ಲಿ ಇದೇ ವಿಚಾರಕ್ಕೆ ಸಂಬಂದಿಸಿದಂತೆ ಎನ್​​ಐಎ ಶಾರೀಕ್​ನನ್ನ ತೀವ್ರ ವೀಚಾರಣೆಗೆ ಒಳಪಡಿಸಿತ್ತು. 

READ |  ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಮಹಿಳೆಯ ಶವ ಪತ್ತೆ! ನಡೆಯಿತೆ ಕೊಲೆ?

ಆನ್​ಲೈನ್​ ಹ್ಯಾಂಡ್ಲರ್​ಗಳ ಮೂಲಕ ಕ್ರಿಪ್ಟೋಕರೆನ್ಸಿ ಮೂಲಕ ಹಣ ಪಡೆಯುತ್ತಿದ್ದ ಈ ಮೂವರು ಆರೋಪಿಗಳು,  ಐಇಡಿ ಟ್ರಯಲ್ ಬ್ಲಾಸ್ಟ್​ನ್ನ ಕೂಡ ನಡೆಸಿದ್ದರು. ಇದಷ್ಟೆ ಅಲ್ಲದೆ ಶಾರೀಕ್​ ಕಳೆದ ನವೆಂಬರ್ 19 ರಂದು ಕದ್ರಿ ದೇವಾಸ್ಥಾನದಲ್ಲಿ ಕುಕ್ಕರ್​ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ದ. ಆದರೆ ಆತನ ಬಳಿ ಇದ್ದ ಐಇಡಿ ನಿಗದಿತ ಅವಧಿಗೂ ಮೊದಲೇ ಬ್ಲಾಸ್ಟ್ ಆಗಿದ್ದರಿಂದ ಟಾರ್ಗೆಟ್ ಮಿಸ್ ಆಗಿತ್ತು ಎಂದು ಎನ್​ಐಎ ಹೇಳಿಕೊಂಡಿದೆ. ಸದ್ಯ ಈ ಸಂಬಂಧ ತನಿಖೆ ಮುಂದುವರಿದಿದೆ. 

BREAKING NEWS | ಶಿವಮೊಗ್ಗಕ್ಕೆ ಮತ್ತೆ ಎನ್​ಐಎ ಟೀಂ ಎಂಟ್ರಿ! ಕಾರಣವೇನು? ಜಬಿ ಮತ್ತು ಶಾರೀಖ್​ ನನ್ನ ಜಿಲ್ಲೆಗೆ ಕರೆದುಕೊಂಡು ಬಂದಿದ್ರಾ?

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : shivamogga,shivamogga isis link,isis link arrested in shivamogga,shivamigga link to isis,shivamogga news,shivamogga rural police,isis,shivamogga news today,terrorists arrested in shivamogga,shivamogga stabbing case,isis terrorist arrested in shivamogga,shivamogga isis suspect,shivamogga isis suspects,isis terrorist arrested in shivamoga,shivamogga yaseen,shivamogga police,shivamogga terrorists arrested,shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

 

Leave a Comment