ಶಿವಮೊಗ್ಗ:ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ.ಇದು ಸಮಸ್ತ ಈಡಿಗ ಸಮಾಜಕ್ಕೆ ನೋವಾಗಿದೆ ಎಂದು ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಸಮಾಜದ ಅಭಿವೃದ್ದಿ ದೃಷ್ಟಿಯಿಂದ ಬಾರಿ ಬಜೆಟ್ ನಲ್ಲಿ ಈಡಿಗ ಅಭಿವೃದ್ದಿ ನಿಗಮ ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.ಸಮಾಜದ ಮನವಿಗೆ ಸಿಎಂ ಪೂರಕವಾಗಿ ಸ್ಪಂದನೆ ನೀಡಿದ್ದರು. ಬಜೆಟ್‌ನಲ್ಲಿ ಘೋಷಣೆ ನಿಗಮ ಘೋಷಣೆಯಾಗುವ ನಿರೀಕ್ಷೆ ಇತ್ತು.ಆದರೆ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಘೋಷಣೆ ಮಾಡದೇ ಈಡಿಗ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ.ಸರ್ಕಾರದ ಈ ನಡೆ ಬಹುಸಂಖ್ಯಾತ ಈಡಿಗ ಸಮಾಜಕ್ಕೆ ಬಹಳ ನೋವಾಗಿದೆ ಎಂದರು.
ಇದನ್ನು ಸಹ ಓದಿ : ಕಾಡಿನ ಸಮಸ್ಯೆಗಳೇ ಸುಂದರೇಶ್ರ ಕುಟುಂಬವನ್ನು ಕಾಡಿದವು, ಭಾದಿಸಿದವು..ಜೀವ ಬಲಿ ಪಡೆದವು! ಅರಣ್ಯ ರಕ್ಷಕನ ಹೋರಾಟದ ಬದುಕಿನ ವರದಿಯಿದು ! ಜೆಪಿ ಬರೆಯುತ್ತಾರೆ
ರಾಜ್ಯಾದ್ಯಂತ 60 ಲಕ್ಷ ಜನರಿದ್ದಾರೆ.ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಸರ್ಕಾರಕ್ಕೆ ಈಗಲೂ ಕಾಲ ಮಿಂಚಿಲ್ಲ.ಸಿಎಂ ಬೊಮ್ಮಾಯಿ ಯವರು ನಿರ್ಧಾರ ತೆಗೆದುಕೊಂಡು ನಿಗಮ ಸ್ಥಾಪನೆ ಮಾಡಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ತರ ಬದುಕು ಕತ್ತಲಲ್ಲಿ ಇದೆ.ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡಲು 9000 ಎಕರೆಗೂ ಹೆಚ್ಚು ಭೂಮಿಯನ್ನು ಹಿಂದಿನ ಸರ್ಕಾರ ಡಿನೋಟಿಫಿಕೇಷನ್ ಮಾಡಿತ್ತು.ಆದರೆ ಬಿಜೆಪಿ ಸರ್ಕಾರ ಈಗ ಡಿನೋಟಿಫಿಕೇಷನ್ ಅನ್ನು ಗೆಜೆಟ್ ನೋಟಿಫಿಕೇಷನ್ ಮೂಲಕ ರದ್ದು ಮಾಡುವ ಮೂಲಕ ಅನ್ಯಾಯ ಮಾಡಿದೆ.ಬಹುಪಾಲು ಈಡಿಗರು ಭೂಮಿ ಹಕ್ಕು ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ.ಸರ್ಕಾರ ಕೂಡಲೇ ಮುಳುಗಡೆ ರೈತರಿಗೆ ಭೂಮಿ ಹಕ್ಕು ನೀಡಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರನ್ನಿಡಬೇಕು.ಬಂಗಾರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಮಾಡಿದ್ದಾರೆ.ಕಾವೇರಿಗಾಗಿ ಅಧಿಕಾರ ತ್ಯಾಗ ಮಾಡಿದ್ದಾರೆ.ಜಾತಿ,ಧರ್ಮ ನೋಡದೇ ಸರ್ವ ಜನಾಂಗದ ಅಭಿವೃದ್ಧಿ ಶ್ರಮಿಸಿದ್ದಾರೆ. ಹಾಗಾಗಿ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಜಿ.ಡಿ ಮಂಜುನಾಥ್,ಎನ್.ಪಿ ಧರ್ಮರಾಜ್,ಕುಪ್ಪಯ್ಯ,ಹರೀಶ್ ಕುಮಾರ್, ಪ್ರವೀಣ್ ಹಿರೇಗೋಡು ಸೇರಿದಂತೆ ಹಲವರಿದ್ದರು.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com