TRAIN NEWS TODAY

ಶಿವಮೊಗ್ಗ ಟ್ರೈನ್​ ಮಾಹಿತಿ : ಸೂಪರ್​ ಫಾಸ್ಟ್​, ಇಂಟರ್​ ಸಿಟಿ ರೈಲುಗಳ ವೇಳಾಪಟ್ಟಿ ವಿವರ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ / ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ಶಿವಮೊಗ್ಗ ಟೌನ್​ಗೆ 3 ಸೂಪರ್ ಫಾಸ್ಟ್ , ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲುಗಳು ಓಡಾಡುತ್ತವೆ. ಎಂಜಿಆರ್ ಚೆನ್ನೈ ಸೆಂಟ್ರಲ್, ಯಶವಂತಪುರ ಹಾಗೂ ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳಿಂದ ಶಿವಮೊಗ್ಗಕ್ಕೆ ಸಂಚರಿಸುವ ರೈಲುಗಳ ಟೈಮಿಂಗ್ಸ್​ನ ವಿವರವನ್ನು ಪ್ರಯಾಣಿಕರ ಮಾಹಿತಿಗಾಗಿ ಇಲ್ಲಿ ನೀಡಲಾಗಿದೆ.

ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12691 ಎಂಜಿಆರ್ ಚೆನ್ನೈ ಸೆಂಟ್ರಲ್ – ಶಿವಮೊಗ್ಗ ಟೌನ್ ಎಸ್‌ಎಫ್ ಎಕ್ಸ್‌ಪ್ರೆಸ್ ರೈಲು (ವೀಕ್ಲಿ) ಶುಕ್ರವಾರ ರಾತ್ರಿ 11:30 ಗಂಟೆಗೆ ಪ್ಲಾಟ್‌ಫಾರ್ಮ್ ಸಂಖ್ಯೆ 10 ರಿಂದ ನಿರ್ಗಮಿಸುತ್ತದೆ.

Superfast Intercity Trains to Shivamogga Timings ಶಿವಮೊಗ್ಗ ಟ್ರೈನ್​ ಮಾಹಿತಿ
Superfast Intercity Trains to Shivamogga Timings ಶಿವಮೊಗ್ಗ ಟ್ರೈನ್​ ಮಾಹಿತಿ

ಈ ರೈಲು ಶನಿವಾರದಂದು ಬೆಳಿಗ್ಗೆ 10:55 ಗಂಟೆಗೆ ಶಿವಮೊಗ್ಗ ಟೌನ್ ನಿಲ್ದಾಣವನ್ನು ತಲುಪುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲಿನಲ್ಲಿ ಸಾಮಾನ್ಯ, ಸ್ಲೀಪರ್, 3ಎ, 2ಎ, 1ಎ ಮತ್ತು 3ಇ ದರ್ಜೆಯ ಬೋಗಿಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಯಶವಂತಪುರ ಜಂಕ್ಷನ್‌ನಿಂದ ಹೊರಡುವ ರೈಲು ಸಂಖ್ಯೆ 20689 ಯಶವಂತಪುರ – ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಸ್‌ಎಫ್ ಎಕ್ಸ್‌ಪ್ರೆಸ್ ರೈಲು ಬೆಳಿಗ್ಗೆ 09:15 ಗಂಟೆಗೆ ಪ್ಲಾಟ್‌ಫಾರ್ಮ್ ಸಂಖ್ಯೆ 3 ರಿಂದ ನಿರ್ಗಮಿಸುತ್ತದೆ.

ವಾರದ ಎಲ್ಲಾ ದಿನಗಳಲ್ಲಿ ಸಂಚರಿಸುವ ಈ ರೈಲು ಮಧ್ಯಾಹ್ನ 14:05 ಗಂಟೆಗೆ ಶಿವಮೊಗ್ಗ ಟೌನ್ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ಕ್ಕೆ ಆಗಮಿಸುತ್ತದೆ. ಈ ರೈಲಿನಲ್ಲಿ ಸಾಮಾನ್ಯ, 2ಎಸ್, ಸಿಸಿ ಮತ್ತು ಇವಿ ದರ್ಜೆಯ ಬೋಗಿಗಳ ಸೌಲಭ್ಯ ಲಭ್ಯವಿದೆ.

ಶಿವಮೊಗ್ಗ ಟ್ರೈನ್​ ಮಾಹಿತಿ

ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 20651 ಕೆಎಸ್‌ಆರ್ ಬೆಂಗಳೂರು – ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ 15:00 ಗಂಟೆಗೆ ಪ್ಲಾಟ್‌ಫಾರ್ಮ್ ಸಂಖ್ಯೆ 9 ರಿಂದ ನಿರ್ಗಮಿಸುತ್ತದೆ.

ಭಾನುವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಚರಿಸುವ ಈ ರೈಲು ಸಂಜೆ 19:05 ಗಂಟೆಗೆ ಶಿವಮೊಗ್ಗ ಟೌನ್ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2 ಕ್ಕೆ ತಲುಪುತ್ತದೆ. ಈ ರೈಲಿನಲ್ಲಿ ಸಾಮಾನ್ಯ, 2ಎಸ್ ಹಾಗೂ ಸಿಸಿ ಬೋಗಿಗಳ ವ್ಯವಸ್ಥೆ ಇರುತ್ತದೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ