STATE NEWS

ಇವತ್ತಿನ ದಿನಭವಿಷ್ಯ : ಇಂದಿನ ರಾಶಿಭವಿಷ್ಯ ಹಾಗೂ ಪಂಚಾಂಗದ ಸಂಪೂರ್ಣ ವಿವರ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡು ಟುಡೆ ಸುದ್ದಿ / ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು ಹಾಗೂ ಚೈತ್ರ ಮಾಸದ ಈ ದಿನ ಬೆಳಿಗ್ಗೆ 6.37 ರವರೆಗೆ ಪೌರ್ಣಮಿ, ತರುವಾಯ ಬಹುಳ ಪಾಡ್ಯಮಿ ಆರಂಭವಾಗಲಿದೆ. ಸಂಜೆ 4.46 ರವರೆಗೆ ಹಸ್ತ ನಕ್ಷತ್ರ ಇರಲಿದ್ದು, ಬಳಿಕ ಚಿತ್ತ ನಕ್ಷತ್ರ ಪ್ರವೇಶವಾಗಲಿದೆ. ಬೆಳಿಗ್ಗೆ 10.31 ರಿಂದ 12.11 ರವರೆಗೆ ಅಮೃತ ಗಳಿಗೆ . ಮಧ್ಯಾಹ್ನ 1.30 ರಿಂದ 3.00 ರವರೆಗೆ ರಾಹುಕಾಲ ಹಾಗೂ ಬೆಳಿಗ್ಗೆ 6.00 ರಿಂದ 7.30 ರವರೆಗೆ ಯಮಗಂಡ ಕಾಲ ಇರಲಿದೆ.

ಇಂದಿನ ರಾಶಿಭವಿಷ್ಯ ಮತ್ತು ದ್ವಾದಶ ರಾಶಿಗಳ ಫಲಾಪಲ

ಮೇಷ / ಯಶಸ್ಸು ಒಲಿಯಲಿದೆ. ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯ ಬಗೆಹರಿಯಲಿವೆ. ಆಸ್ತಿ ಲಾಭ, ಹಳೆಯ ಸಾಲ ಕೈಸೇರಲಿವೆ. ಉದ್ಯೋಗ ಮತ್ತು ವ್ಯಾಪಾರ ವಲಯದಲ್ಲಿ ಸುಗಮವಾದ ಪ್ರಗತಿ ಕಂಡುಬರಲಿದೆ.

ವೃಷಭ/ ಒತ್ತಡ ಎದುರಾಗಲಿವೆ. ಅನಿರೀಕ್ಷಿತವಾಗಿ ಹಣ ಖರ್ಚು. ಮನೆಯ ಸದಸ್ಯರೊಂದಿಗೆ ಕಿರಿಕಿರಿ. ಆರೋಗ್ಯದಲ್ಲಿ ಏರುಪೇರಾಗಬಹುದು. ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ಉದ್ಯೋಗ ಮತ್ತು ವ್ಯಾಪಾರ ವ್ಯವಹಾರ ನಿಧಾನಗತಿಯಲ್ಲಿ ಸಾಗಲಿವೆ.

ಮಿಥುನ / ಭಿನ್ನಾಭಿಪ್ರಾಯ ಮೂಡಬಹುದು. ಆರೋಗ್ಯ ಸಮಸ್ಯೆ . ಕುಟುಂಬದ ಒಳಗೆ ಸಣ್ಣಪುಟ್ಟ ಕಿರಿಕಿರಿ ಎದುರಾಗಲಿವೆ. ಗೊಂದಲ ಉಂಟಾಗಬಹುದು. ಕೆಲಸದ ಒತ್ತಡ ಹೆಚ್ಚಾಗಲಿದೆ. ಉದ್ಯೋಗ ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ ಬೆಳವಣಿಗೆ ಇರಲಿದೆ.

ಇಂದಿನ ರಾಶಿಭವಿಷ್ಯ
ಇಂದಿನ ರಾಶಿಭವಿಷ್ಯ

ಕರ್ಕಾಟಕ / ಉದ್ಯೋಗ ಪ್ರಾಪ್ತಿಯಾಗುವ ಯೋಗವಿದೆ. ಸಮಾಜದಲ್ಲಿ ಪ್ರಭಾವ ವೃದ್ಧಿಯಾಗಲಿದೆ. ಸಂತೋಷದಿಂದ ಕಾಲ ಕಳೆಯುವಿರಿ. ಉದ್ಯೋಗ ಮತ್ತು ವ್ಯಾಪಾರ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯಲಿವೆ.

ಸಿಂಹ / ವಾಗ್ವಾದ ನಡೆಯುವ ಸಾಧ್ಯತೆ ಇದೆ. ಆರ್ಥಿಕವಾಗಿ ಖರ್ಚು ವೆಚ್ಚ ಹೆಚ್ಚಾಗಲಿವೆ. ಕುಟುಂಬದವರಿಂದ ವಿವಿಧ ರೀತಿಯ ಒತ್ತಡ ಎದುರಾಗಬಹುದು.ಜವಾಬ್ದಾರಿ ಇನ್ನಷ್ಟು ಹೆಚ್ಚಾಗಲಿವೆ. ಉದ್ಯೋಗ ಹಾಗೂ ವ್ಯಾಪಾರವು ಸಾಧಾರಣ ಮಟ್ಟದಲ್ಲಿರಲಿದೆ.

ಕನ್ಯಾ / ನೂತನ ವಿಚಾರ ಕಲಿಯುವ ಹಾಗೂ ತಿಳಿದುಕೊಳ್ಳುವ ಅವಕಾಶ ಸಿಗಲಿದೆ. ಸಮಾಜದಲ್ಲಿ ಮನ್ನಣೆ ಮತ್ತು ಗೌರವ ಪ್ರಾಪ್ತಿಯಾಗಲಿದೆ. ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಆಶಾದಾಯಕ ವಾತಾವರಣ ಇರಲಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಇಂದಿನ ರಾಶಿಭವಿಷ್ಯದ ಮತ್ತಷ್ಟು ವಿವರ

ತುಲಾ / ಮನೆಯವರೊಂದಿಗೆ ಭಿನ್ನಾಭಿಪ್ರಾಯ ತಲೆದೋರಬಹುದು. ಆಧ್ಯಾತ್ಮಿಕ ವಿಚಾರಗಳತ್ತ ಒಲವು ಹೆಚ್ಚಾಗಲಿದೆ. ಕೈಗೆತ್ತಿಕೊಂಡ ಕೆಲಸ ಕಾರ್ಯಗಳಲ್ಲಿ ವಿಳಂಬ . ಹೊಣೆಗಾರಿಕೆಗಳು ಹೆಚ್ಚಾಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರಾಸಕ್ತಿ ಮೂಡುವ ಸಾಧ್ಯತೆಗಳಿವೆ. ಹಣಕಾಸಿನ ಖರ್ಚು ಹೆಚ್ಚಾಗಲಿದೆ.

ವೃಶ್ಚಿಕ / ಮಾಡುವ ಕೆಲಸಗಳಲ್ಲಿ ಜಯ ಸಿಗಲಿದೆ. ಶುಭ ಸುದ್ದಿಗಳು ಕಿವಿಗೆ ಬೀಳಲಿವೆ. ಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ವಸೂಲಾಗಬೇಕಿದ್ದ ಹಳೆಯ ಸಾಲ ಮರಳಿ ಬರಲಿವೆ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣಬಹುದು.

ಧನುಸ್ಸು / ಕೀರ್ತಿ, ಗೌರವಗಳು ಹೆಚ್ಚಾಗಲಿವೆ. ಬೆಲೆಬಾಳುವ ಅಮೂಲ್ಯ ವಸ್ತುಗಳನ್ನು ಕೊಂಡುಕೊಳ್ಳುವಿರಿ. ಸಂತಸ ತರುವಂತಹ ಸುದ್ದಿಗಳು ಕೇಳಿಬರಲಿವೆ. ಅನಿರೀಕ್ಷಿತವಾಗಿ ಹಣಕಾಸಿನ ಲಾಭ . ಉದ್ಯೋಗ ಮತ್ತು ವ್ಯಾಪಾರ ವಲಯದಲ್ಲಿ ತೃಪ್ತಿದಾಯಕ ವಾತಾವರಣ ಇರಲಿದೆ.

ಮಕರ / ಸಾಲ ಪಡೆಯುವ ಪ್ರಯತ್ನಗಳನ್ನು ಮಾಡುವಿರಿ. ಕೆಲಸ ಕಾರ್ಯಗಳಲ್ಲಿ ಆತುರ . ಅನಾರೋಗ್ಯದ ಸಮಸ್ಯೆ ಕುಟುಂಬ ಸದಸ್ಯರ ನಡುವೆ ಕಲಹ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕೊಂಚ ನಿರಾಸೆ ಎದುರಾಗಬಹುದು.

ಕುಂಭ / ಹೊಸದಾಗಿ ಸಾಲ ಮಾಡುವ ಪ್ರಮೇಯ ಎದುರಾಗಲಿದೆ. ಅನಿರೀಕ್ಷಿತವಾಗಿ ಪ್ರಯಾಣ . ನಿಗದಿತ ಕೆಲಸಳು ಪೂರ್ಣಗೊಳ್ಳಲು ವಿಳಂಬವಾಗಬಹುದು. ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣಗಳಿವೆ. ದೈಹಿಕ ಹಾಗೂ ಮಾನಸಿಕ ಶ್ರಮ . ಉದ್ಯೋಗ ಮತ್ತು ವ್ಯಾಪಾರ ಬಹಳ ನಿಧಾನಗತಿಯಲ್ಲಿ ಸಾಗಲಿವೆ.

ಮೀನ / ಕೌಟುಂಬಿಕ ಜೀವನದಲ್ಲಿ ಸುಖ ಶಾಂತಿ ನೆಲೆಸಲಿದೆ. ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಉದ್ಯೋಗ ಮತ್ತು ವ್ಯಾಪಾರ ವಲಯದಲ್ಲಿ ಅಭಿವೃದ್ಧಿ ಗೋಚರಿಸಲಿದೆ.

ಈ ಸುದ್ದಿಗಳು ಸಹ ನಿಮಗೆ ಇಷ್ಟವಾಗಬಹುದು : ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ

ಇಂದಿನ ರಾಶಿಭವಿಷ್ಯ
ಇಂದಿನ ರಾಶಿಭವಿಷ್ಯ

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ