ಇದ್ದಕ್ಕಿದ್ದ ಹಾಗೆ ಸೇತುವೆ ಮೇಲಿಂದ ನದಿಗೆ ಹಾರಿದ ಯುವಕ! ಶಿವಮೊಗ್ಗದ ತುಂಗಾನದಿಯ ಬಳಿ ನಡೆದಿದ್ದೇನು? ಹೈಡ್ರಾಮಾ ಕಂಡು ಜನ ಏನಂದ್ರು!?

KARNATAKA NEWS/ ONLINE / Malenadu today/ Jul 25, 2023 SHIVAMOGGA NEWS  

ಶಿವಮೊಗ್ಗ ನಗರದಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿದೆ. ಇದರ ನಡುವೆ ತುಂಗಾ ನದಿಯನ್ನು ನೋಡಲು ಜನರ ದಂಡು ಹೊಸ ಸೇತುವೆ ಹಾಗೂ ಹಳೆ ಸೇತುವೆಗಳ ಬಳಿಗೆ ಬರುತ್ತಿದೆ. ಈ ಮಧ್ಯೆ ಇವತ್ತು ತುಂಗಾ ನದಿಯ ಹಳೆಯ ಸೇತುವೆಯಿಂದ ಯುವಕನೊಬ್ಬ ಹೊಳೆಗೆ ಹಾರಿದ್ದಾನೆ. ಈ ಘಟನೆ ಕೆಲಕಾಲ ಆತಂಕ ಮೂಡಿಸಿತ್ತಾದರೂ ಬಳಿಕ ಯುವಕನ ಹುಚ್ಚಾಟಕ್ಕೆ ಆಕ್ರೋಶ ವ್ಯಕ್ತವಾಗಿದೆ

ತುಂಬಿದ ತುಂಗೆಯಲ್ಲಿ ಈಜುವುದು ಅಪಾಯಕಾರಿ ಕೆಲಸವೇ ಸರಿ. ಅಂತದ್ರಲ್ಲಿ ಇವತ್ತು ಹೊಳೆಬಸ್​ಸ್ಟಾಪ್​  ಬಳಿಯಲ್ಲಿ ಯುವಕನೊಬ್ಬ ಸೇತುವೆಯ ಮೇಲಿನಿಂದ ತುಂಬಿದ ಹೊಳೆಗೆ ಹಾರಿದ್ದಾನೆ. ಯಾರೋ ಈತ, ಸಾಯೋಕೆ ಹಾರಿದ್ದಾನಾ ಅಂತಾ ಜನರು ಸೇತುವೆಯಿಂದ ಇಣುಕಿ ನೋಡುತ್ತಿರುವಾಗಲೇ, ನದಿಗೆ ಹಾರಿದ್ದ ಯುವಕ ಅತ್ತ ರಾಜೀವ್ ಗಾಂಧಿ ಬಡಾವಣೆ ಕಡೆಯಿಂದ ನದಿಯಿಂದ ಮೇಲಕ್ಕೆ ಬಂದಿದ್ದಾನೆ. 

ಈ ದೃಶ್ಯವನ್ನು ನೋಡಿದವರು ಅಚ್ಚರಿಯ ವ್ಯಕ್ತಪಡಿಸುವುದರ ಜೊತೆಗೆ, ಇದೇನು ಹುಚ್ಚಾಟ ಎಂದು ಮಾತನಾಡಿಕೊಂಡರಷ್ಟೆ ಅಲ್ಲದೆ ಹತ್ತಿರ ಕೋಟೆ ಪೊಲೀಸ್ ಸ್ಟೇಷನ್​ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇನ್ನೂ ಪೊಲೀಸರ ವಿಚಾರಣೆ ವೇಳೆ ನದಿಗೆ ಹಾರಿದ ಯುವಕ ಹೆಸರು ಗಂಗಪ್ಪ ಅಲಿಯಾಸ್ ಅಂಗೂರಿ ಎಂದು ಗೊತ್ತಾಗಿದೆ.  ಈ ಯುವಕ ಈಜು ಬಲ್ಲವನಾಗಿದ್ದು, ವಿಡಿಯೋ ಮಾಡುವ ಸಲುವಾಗಿ ನದಿಗೆ ಹಾರಿರುವ ಬಗ್ಗೆ ಮಾಹಿತಿಯಿದೆ. ಸದ್ಯ ಯುವಕ ನದಿಗೆ ಹಾರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಯುವಕನ ನಡೆ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. 

ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರ ದಿಢೀರ್​ ಕಾರ್ಯಾಚರಣೆ! ಅರ್ಧಗಂಟೆಯಲ್ಲಿ ನೂರಕ್ಕೂ ಹೆಚ್ಚು ಹಾಫ್​ ಹೆಲ್ಮೆಟ್​ ಜಪ್ತಿ! ಕಾರಣವೇನು?

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು? 

Malenadu Today Shivamogga

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​ 

 

 

Leave a Comment