KARNATAKA NEWS/ ONLINE / Malenadu today/ Oct 3, 2023 SHIVAMOGGA NEWS
ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಸಂಬಂಧ ಸಾಕಷ್ಟು ವಿಡಿಯೋಗಳು ವೈರಲ್ ಆಗಿದೆ. ಈ ಪೈಕಿ ಪೊಲೀಸ್ ಅಧಿಕಾರಿ ಎದುರು ಯುವಕನೊಬ್ಬ ಬೆದರಿಕೆ ಹಾಕುತ್ತಿರುವ ವಿಡಿಯೋವೊಂದು ಸಹ ವೈರಲ್ ಆಗಿತ್ತು. ಈ ವಿಡಿಯೋದ ಬಗ್ಗೆಯು ಸುದ್ದಿಗೋಷ್ಟಿ ವೇಳೆಯಲ್ಲಿ ಮಾಧ್ಯಮಗಳ ಮಂದಿ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ವಿಡಿಯೋ ನೋಡಿ ಪರಿಶೀಲಿಸಿ ಈ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದರು. ಆನಂತರ ಮಾಧ್ಯಮಗಳಿಗೆ ವಾಟ್ಸ್ಯಾಪ್ ಸಂದೇಶ ರವಾನಿಸಿದ ಎಸ್ಪಿ ಮಿಥುನ್ ಕುಮಾರ್, ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಲಾಗಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಳು