ರೈಲು ಪ್ರಯಾಣಿಕರಿಗೆ ಮಾಹಿತಿ: ಅ.20ರಿಂದ ಮೈಸೂರು–ತಾಳಗುಪ್ಪ ಸೇರಿ 6 ರೈಲುಗಳಲ್ಲಿ ಈ ಬದಲಾವಣೆ ಜಾರಿ

ಹಂಚಿಕೊಳ್ಳಿ
WhatsApp Facebook X Telegram
SWR Train Trains Cancelled Birur-Talguppa Railway Train Servis ChangedChanged Shivamogga-Talaguppa Train train plans affected by the cancellations Marikamba Jatre Special Train Railway Halt Extended Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.
SWR Train Trains Cancelled Birur-Talguppa Railway Train Servis Changed Changed Shivamogga-Talaguppa Train Marikamba Jatre Special Train Railway Halt Extended Special Train to Sagara Marikamba Jathre from Feb 3 Shivamogga Train Timings Change 2026 Dasara Special Trains

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನೈಋತ್ಯ ರೈಲ್ವೆಯು ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ಸೇರಿದಂತೆ 6 ಜೋಡಿ ರೈಲುಗಳ ಹಳೆಯ ಸಾಂಪ್ರದಾಯಿಕ ಬೋಗಿಗಳನ್ನು ಬದಲಾಯಿಸಿ, ಅವುಗಳ ಬದಲಿಗೆ ಆಧುನಿಕ ಲಿಂಕೆ ಹಾಫ್‌ಮನ್ ಬುಷ್ (ಎಲ್‌ಎಚ್‌ಬಿ) ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ.

ಅಕ್ಟೋಬರ್ 20ರಿಂದ ಹಂತ ಹಂತವಾಗಿ ಹೊಸ ಬೋಗಿಗಳೊಂದಿಗೆ ರೈಲುಗಳ ಸಂಚಾರ ಆರಂಭವಾಗಲಿದ್ದು, ಶಿವಮೊಗ್ಗ, ತಾಳಗುಪ್ಪ, ಮೈಸೂರು ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ರೈಲು ಪ್ರಯಾಣಿಕರಿಗೆ ಈ ಬದಲಾವಣೆ ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಸಾಂಪ್ರದಾಯಿಕ ಬೋಗಿಗಳ ಬದಲಿಗೆ ಎಲ್‌ಎಚ್‌ಬಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ. ರೈಲುಗಳ ಸಂಚಾರ ಆರಂಭವಾಗುವ ದಿನಾಂಕ ಹಾಗೂ ಬೋಗಿಗಳ ಸಂಯೋಜನೆಯ ವಿವರಗಳನ್ನು ನೈಋತ್ಯ ರೈಲ್ವೆ ಪ್ರಕಟಿಸಿದೆ.

ಭಾರತ್ ಜೋಡೋ ಯಾತ್ರೆ 2.0

ಮೈಸೂರು–ತಾಳಗುಪ್ಪ ರೈಲಿಗೆ ಅಕ್ಟೋಬರ್ 20ರಿಂದ ಹೊಸ ಬೋಗಿ

  • ಮೈಸೂರು–ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ರೈಲು ಸಂಖ್ಯೆ 16227/16228ಕ್ಕೆ ಎಲ್‌ಎಚ್‌ಬಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ. ಮೈಸೂರಿನಿಂದ ಹೊರಡುವ ರೈಲು ಅಕ್ಟೋಬರ್ 20ರಿಂದ ಹೊಸ ಬೋಗಿಗಳೊಂದಿಗೆ ಸಂಚರಿಸಲಿದ್ದು, ತಾಳಗುಪ್ಪದಿಂದ ಹೊರಡುವ ರೈಲು ಅಕ್ಟೋಬರ್ 21ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚಾರ ನಡೆಸಲಿದೆ.
  • ತಾಳಗುಪ್ಪ–ಶಿವಮೊಗ್ಗ ಟೌನ್–ತಾಳಗುಪ್ಪ ರೈಲು ಸಂಖ್ಯೆ 56217/56218 ಸಹ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಈ ಮಾರ್ಗದ ಎರಡೂ ದಿಕ್ಕಿನ ರೈಲುಗಳಿಗೆ ಅಕ್ಟೋಬರ್ 21ರಿಂದ ಹೊಸ ಬೋಗಿಗಳ ವ್ಯವಸ್ಥೆ ಜಾರಿಗೆ ಬರಲಿದೆ.

ಮೈಸೂರು, ಚಾಮರಾಜನಗರ ಮಾರ್ಗದ ರೈಲುಗಳಲ್ಲೂ ಬದಲಾವಣೆ

  • ನಂಜನಗೂಡು ಟೌನ್–ಮೈಸೂರು–ನಂಜನಗೂಡು ಟೌನ್ ರೈಲು ಸಂಖ್ಯೆ 56205/56206 ಅಕ್ಟೋಬರ್ 22ರಿಂದ ಎರಡೂ ದಿಕ್ಕುಗಳಲ್ಲಿ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.
  • ಚಾಮರಾಜನಗರ–ಮೈಸೂರು–ಚಾಮರಾಜನಗರ ರೈಲು ಸಂಖ್ಯೆ 56203/56204ಕ್ಕೆ ಸಂಬಂಧಿಸಿದಂತೆ ಮೈಸೂರಿನಿಂದ ಅಕ್ಟೋಬರ್ 22ರಿಂದ ಹಾಗೂ ಚಾಮರಾಜನಗರದಿಂದ ಅಕ್ಟೋಬರ್ 24ರಿಂದ ಹೊಸ ಬೋಗಿಗಳೊಂದಿಗೆ ಸಂಚಾರ ಆರಂಭವಾಗಲಿದೆ.
  • ಚಾಮರಾಜನಗರ–ತಿರುಪತಿ–ಚಾಮರಾಜನಗರ ರೈಲು ಸಂಖ್ಯೆ 16219/16220 ಚಾಮರಾಜನಗರದಿಂದ ಅಕ್ಟೋಬರ್ 22ರಿಂದ ಹಾಗೂ ತಿರುಪತಿಯಿಂದ ಅಕ್ಟೋಬರ್ 23ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.
  • ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್–ತಿರುಪತಿ–ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ಸಂಖ್ಯೆ 16203/16204 ಅಕ್ಟೋಬರ್ 23ರಿಂದ ಎರಡೂ ದಿಕ್ಕುಗಳಲ್ಲಿ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.

21 ಬೋಗಿಗಳ ಬದಲಿಗೆ 19 ಎಲ್‌ಎಚ್‌ಬಿ ಬೋಗಿಗಳು

ರೈಲ್ವೆ ನೀಡಿರುವ ಬೋಗಿಗಳ ಸಂಯೋಜನೆಯ ವಿವರದ ಪ್ರಕಾರ, ಪ್ರಸ್ತುತ ಸಾಂಪ್ರದಾಯಿಕ ರೇಕ್‌ನಲ್ಲಿ ಒಟ್ಟು 21 ಬೋಗಿಗಳಿದ್ದು, ಅವುಗಳಲ್ಲಿ 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 10 ಸ್ಲೀಪರ್, 5 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಸೆಕೆಂಡ್ ಕ್ಲಾಸ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು ಸೇರಿವೆ. ಹೊಸ ಎಲ್‌ಎಚ್‌ಬಿ ವ್ಯವಸ್ಥೆಯಲ್ಲಿ ಒಟ್ಟು 19 ಬೋಗಿಗಳ ಸಂಯೋಜನೆ ಇರಲಿದೆ. ಇದರಲ್ಲಿ 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 3 ಎಸಿ 3-ಟೈರ್, 7 ಸ್ಲೀಪರ್ ಹಾಗೂ 5 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಇರಲಿವೆ. ಇವುಗಳ ಜೊತೆಗೆ ದಿವ್ಯಾಂಗ ಸ್ನೇಹಿ ವ್ಯವಸ್ಥೆ ಹೊಂದಿರುವ 1 ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಹಾಗೂ 1 ಲಗೇಜ್ ಮತ್ತು ಬ್ರೇಕ್ ವ್ಯಾನ್ ಕಮ್ ಜನರೇಟರ್ ಕಾರ್ ಇರಲಿದೆ.

ಈ 3 ಜೋಡಿ ರೈಲುಗಳಲ್ಲಿ ಎಸಿ ಬೋಗಿಗಳಿಗೆ ಪ್ರವೇಶವಿಲ್ಲ

ರೈಲು ಸಂಖ್ಯೆ 56217/56218 (ತಾಳಗುಪ್ಪ–ಶಿವಮೊಗ್ಗ ಟೌನ್), 56205/56206 (ನಂಜನಗೂಡು ಟೌನ್–ಮೈಸೂರು) ಹಾಗೂ 56203/56204 (ಚಾಮರಾಜನಗರ–ಮೈಸೂರು) ರೈಲುಗಳ ಎಸಿ ಬೋಗಿಗಳನ್ನು ಲಾಕ್ ಮಾಡಲಾಗಿರುತ್ತದೆ ಎಂದು ನೈಋತ್ಯ ರೈಲ್ವೆ ಸ್ಪಷ್ಟಪಡಿಸಿದೆ. ಅಕ್ಟೋಬರ್ 20ರಿಂದ 24ರವರೆಗೆ ವಿವಿಧ ದಿನಾಂಕಗಳಲ್ಲಿ ಹೊಸ ಬೋಗಿಗಳೊಂದಿಗೆ ಸಂಚಾರ ಆರಂಭವಾಗಲಿದ್ದು, ಮೈಸೂರು–ತಾಳಗುಪ್ಪ ಹಾಗೂ ತಾಳಗುಪ್ಪ–ಶಿವಮೊಗ್ಗ ಟೌನ್ ಮಾರ್ಗದ ರೈಲುಗಳಿಗೂ ಈ ಬದಲಾವಣೆ ಅನ್ವಯವಾಗಲಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor